Advertisement

ಜೂನ್‌ ಅಂತ್ಯಕ್ಕೆ ಹಾಸಿಗೆಗಳ ಸಂಖ್ಯೆ 1 ಲಕ್ಷಕ್ಕೆ ಏರಿಕೆ

05:36 PM Jun 25, 2020 | Suhan S |

ಮುಂಬಯಿ, ಜೂ. 24: ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಬಯಿ ಮಹಾನಗರ ಪಾಲಿಕೆಯು ಈ ತಿಂಗಳ ಅಂತ್ಯದ ವೇಳೆಗೆ ಮುಂಬಯಿಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು 1 ಲಕ್ಷಕ್ಕೆ ಹೆಚ್ಚಿಸಲು ಯೋಜಿಸಿದೆ.

Advertisement

ಈ ಸಂಖ್ಯೆಯು ಮೂಲೆಗುಂಪು ಕೇಂದ್ರಗಳು, ಮೀಸಲಾದ ಕೋವಿಡ್‌ -19 ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿನ ತೀವ್ರ ನಿಗಾ ಘಟಕಗಳು (ಐಸಿಯು) ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳು ಸೇರಿದಂತೆ ಎಲ್ಲ ಹಾಸಿಗೆಗಳನ್ನು ಒಳಗೊಂಡಿರಲಿದೆ. ಜೂನ್‌ ಅಂತ್ಯದ ವೇಳೆಗೆ ನಗರದಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು 80,000 ವರೆಗೆ ಹೋಗಬಹುದು ಎಂದು ಬಿಎಂಸಿ ಅಂದಾಜಿಸಿದೆ.

ಬಿಎಂಸಿ ನಗರದಲ್ಲಿ ಹಾಸಿಗೆಯ ಸಾಮರ್ಥ್ಯವನ್ನು ಪ್ರಸ್ತುತ 84,000ರಿಂದ 1 ಲಕ್ಷಕ್ಕೆ ಹೆಚ್ಚಿಸಲಿದೆ ಎಂದು ಪುರಸಭೆ ಆಯುಕ್ತ ಐ. ಎಸ್‌. ಚಾಹಲ್‌ ತಿಳಿಸಿದ್ದಾರೆ. ನಾವು ಹಾಸಿಕೆಗಳನ್ನು ಹೆಚ್ಚಿಸುವತ್ತ ಯೋಜಿಸುತ್ತಿದ್ದೇವೆ. ನಮ್ಮ ಪ್ರಕರಣಗಳು ದ್ವಿಗುಣವಾಗುವಾಗ ನಮ್ಮಲ್ಲಿ ಹಾಸಿಗೆಗಳು ಸಾಕಷ್ಟಿರಬೇಕು. ಆಸ್ಪತ್ರೆಗಳಿಗೆ ದಾಖಲಾದ ಜನರ ಸಂಖ್ಯೆ ಮತ್ತು ರೋಗಲಕ್ಷಣವು ಒಟ್ಟು ಸಕ್ರಿಯ ರೋಗಿಗಳಲ್ಲಿ ಸುಮಾರು 9,500 ಆಗಿದೆ ಎಂದು ಅವರು ಹೇಳಿದರು.

ಜೂನ್‌ 25ರ ವೇಳೆಗೆ ನಗರದಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುವುದು ಮತ್ತು ಜುಲೈ 5ರ ವೇಳೆಗೆ ಇನ್ನೂ 200 ಹಾಸಿಗೆಗಳನ್ನು ಸೇರಿಸಲಾಗುವುದು ಎಂದು ಚಾಹಲ್‌ ಹೇಳಿದ್ದಾರೆ. ನಾನು ಅಧಿಕಾರ ವಹಿಸಿಕೊಂಡಾಗ ನಮ್ಮಲ್ಲಿ 3,500 ಹಾಸಿಗೆಗಳು ಮೀಸಲಾದ ಕೋವಿಡ್‌ ಆರೋಗ್ಯ ಕೇಂದ್ರಗಳು (ಡಿಸಿಎಚ್‌ಸಿ) ಮತ್ತು ಮೀಸಲಾದ ಕೋವಿಡ್‌ ಆಸ್ಪತ್ರೆಗಳು (ಡಿಸಿಎಚ್‌) ಇದ್ದವು. ಇಂದು ನಾವು 12,000 ಹಾಸಿಗೆಗಳನ್ನು ಹೊಂದಿದ್ದೇವೆ. ಜೂನ್‌ 31ರ ಹೊತ್ತಿಗೆ ಅದು 15,000ಕ್ಕೆ ಏರುತ್ತದೆ. ಜುಲೈ 31ರ ವೇಳೆಗೆ 20,000ಕ್ಕೆ ಏರಿಸುತ್ತೇವೆ ಎಂದು ಚಾಹಲ್‌ ಹೇಳಿದ್ದಾರೆ.

ಸೋಂಕಿತರ 84,000 ಹಾಸಿಗೆಗಳಲ್ಲಿ, 60,000 ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ (ಸಿಸಿಸಿ) 1 ಮತ್ತು 2ರಲ್ಲಿದೆ. ಎಲ್ಲ ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಹೋಟೆಲ್‌ಗ‌ಳು, ಹೊಸದಾಗಿ ನಿರ್ಮಿಸಿದ ಕಟ್ಟಡಗಳು ಮತ್ತು ಅಂತಹುದೇ ರಚನೆಗಳಲ್ಲಿರುವ ಸಿಸಿಸಿ1 ಗೆ ವರ್ಗಾಯಿಸಲಾಗುತ್ತಿದೆ. ಹೊಸ ನಿಯಮಗಳ ಪ್ರಕಾರ ಲಕ್ಷಣರಹಿತ ಮತ್ತು ಸ್ವಲ್ಪ ರೋಗಲಕ್ಷಣದ ರೋಗಿಗಳು ಸಿಸಿಸಿ 2 ರಲ್ಲಿದ್ದಾರೆ. ಹೊಸ ನಿಯಮಗಳ ಪ್ರಕಾರ, ಸೋಂಕಿತರು ಸ್ಥಳೀಯ ವಾರ್ಡ್‌ ಕಚೇರಿಯಿಂದ ಪರೀಕ್ಷಾ ಫ‌ಲಿತಾಂಶಗಳನ್ನು ಪಡೆಯುತ್ತಾರೆ. ಇದು ಆರೋಗ್ಯ ಕೇಂದ್ರದಲ್ಲಿ ಹಾಸಿಗೆಗಳನ್ನು ಸಹ ನೀಡುತ್ತದೆ. ಅನಂತರ ವಾರ್ಡ್‌ ತಂಡವು ಜನರನ್ನು ಸಂಪರ್ಕಿಸಿ ಅವರ ಪರೀಕ್ಷಾ ಫ‌ಲಿತಾಂಶಗಳನ್ನು ತಿಳಿಸುತ್ತದೆ. ಅದೇ ದಿನ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ರೋಗಿಗೆ ಹಾಸಿಗೆಯನ್ನು ನೀಡಲಾಗುತ್ತದೆ ಎಂದು ಚಾಹಲ್‌ ಹೇಳಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next