ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಟ್ರೆಂಡ್ ಮತ್ತೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇನ್ನು ಚಿತ್ರೋದ್ಯಮದ ಮಂದಿ ಕೂಡ ಹಿಂದೆಂದಿಗಿಂತಲೂ ಹೆಚ್ಚಾಗಿ ಕಾದಂಬರಿ ಆಧಾರಿತ ಚಿತ್ರಗಳತ್ತ ಆಸಕ್ತರಾಗುತ್ತಿದ್ದಾರೆ. ಹೀಗಾಗಿ ನಿಧಾನವಾಗಿ ಒಂದರ ಹಿಂದೊಂದು ಕಾದಂಬರಿ ಆಧರಿತ ಚಿತ್ರಗಳು ಸೆಟ್ಟೇರುತ್ತಿವೆ. ಆ ಸಾಲಿಗೆ “ಬಿಚ್ಚುಗತ್ತಿ’ ಚಿತ್ರ ಹೊಸ ಸೇರ್ಪಡೆ. ಕನ್ನಡದ ಹಿರಿಯ ಕಾದಂಬರಿಕಾರ ಬಿ.ಎಲ್ ವೇಣು ಅವರ “ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಈಗ “ಬಿಚ್ಚುಗತ್ತಿ’ ಎಂಬ ಹೆಸರಿನ ಚಿತ್ರವಾಗುತ್ತಿದೆ.
ಅಂದಹಾಗೆ, “ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿಯಲ್ಲಿ ಬರುವ ದಳವಾಯಿ ದಂಗೆಯನ್ನು ಕೇಂದ್ರೀಕರಿಸಿ ಈ ಚಿತ್ರ ತಯಾರಾಗುತ್ತಿದೆ. ಇತ್ತೀಚೆಗೆ ಚಿತ್ರತಂಡ ರಾಕ್‌ಲೈನ್ ಸ್ಟುಡಿಯೋದಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ವಿಶೇಷ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರಕ್ಕೆ ಮೂಲ ಕಾದಂಬರಿಕಾರ ಬಿ.ಎಲ್ ವೇಣು ಅವರೇ ಸ್ವತಃ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸುತ್ತಿದ್ದು, ಹರಿ ಸಂತೋಷ್ ಚಿತ್ರಕ್ಕೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಹಿರಿಯ ನಟ ಡಿಂಗ್ರಿನಾಗರಾಜ್ ಪುತ್ರ ರಾಜವರ್ಧನ್ ಈ ಚಿತ್ರದಲ್ಲಿ ಭರಮಣ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಿ¨ªಾರೆ. ನಟಿ ಹರಿಪ್ರಿಯಾ ಸಿದ್ಧಾಂಬೆ ಪಾತ್ರದಲ್ಲಿ ರಾಜವರ್ಧನ್‌ಗೆ ಜೋಡಿಯಾಗಿ ನಟಿಸುತ್ತಿ¨ªಾರೆ. ಉಳಿದಂತೆ ಬಹುಭಾಷಾ ನಟ ಪ್ರಭಾಕರ್, ಕಲ್ಯಾಣಿ, ಸ್ಪರ್ಶ ರೇಖಾ, ಶ್ರೀನಿವಾಸಮೂರ್ತಿ, ಶರತ್ ಲೋಹಿತಾಶ್ವ ಸೇರಿದಂತೆ ಇತರೆ ಕಲಾವಿದರು ನಟಿಸಲಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲಿ ಮತ್ತು ಚಿತ್ರದುರ್ಗದ ಸುತ್ತಮುತ್ತ ಚಿತ್ರೀಕರಿಸುವ ಯೋಜನೆಯಲ್ಲಿದೆ ಚಿತ್ರತಂಡ. ಚಿತ್ರದ ಹಾಡುಗಳಿಗೆ ಹಂಸಲೇಖ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಕಥಾಹಂದರದ ಬಗ್ಗೆ ಮಾತಿಗಿಳಿದ ಕಾದಂಬರಿಕಾರ ಬಿ.ಎಲ್ ವೇಣು, “ಚಿತ್ರದುರ್ಗದಲ್ಲಿ 15 ಶತಮಾನದ ಮಧ್ಯ ಭಾಗದಿಂದ 17ನೇ ಶತಮಾನದ ಅಂತ್ಯದವರೆಗೆ ಸುಮಾರು ಹದಿಮೂರು ಮಂದಿ ಪಾಳೇಗಾರರು ಆಡಳಿತ ನಡೆಸಿದ್ದರೂ, ಈ ಕಾಲಘಟ್ಟದ ಮಧ್ಯದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ದುರ್ಗ ದಳವಾಯಿ ಮುದ್ದಣ್ಣನ ಕೈ ವಶದಲ್ಲಿತ್ತು. ಈ ಕಾಲಘಟ್ಟದ ಕಥೆಯೇ ಬಿಚ್ಚುಗತ್ತಿ’ ಎಂದು ಚಿತ್ರಕಥೆಯ ಹಿನ್ನೆಲೆ ಬಗ್ಗೆ ವಿವರಣೆ ಕೊಟ್ಟರು.
ಇನ್ನು ಮೊದಲ ಬಾರಿಗೆ ಇಂಥ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದರ ಬಗ್ಗೆ ನಿರ್ದೇಶಕ ಹರಿ ಸಂತೋಷ್ ಕೂಡ ಸಾಕಷ್ಟು ಖುಷಿಯಲ್ಲಿದ್ದರು.”ಇದು ನನ್ನ ಪಾಲಿಗೆ ಸಿಕ್ಕ ಅದೃಷ್ಠ. ಚಿತ್ರದಲ್ಲಿ ತಾಂತ್ರಿಕ ಕೆಲಸಗಳಿಗೆ ಹೆಚ್ಚು ಒತ್ತು ನೀಡಿ ಚಿತ್ರವನ್ನು ತೆರೆಗೆ ತರಲಾಗುವುದು. ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಾರೆ ಹರಿ ಸಂತೋಷ್.
ಚಿತ್ರದಲ್ಲಿ ಭರಮಣ್ಣ ನಾಯಕ ಪಾತ್ರಕ್ಕಾಗಿ ಕಳೆದ ಒಂದು ವರ್ಷದಿಂದ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವ ರಾಜವರ್ಧನ್, ಕುದುರೆ ಸವಾರಿ, ಸಮರ ಕಲೆ, ಕತ್ತಿ ವರಸೆ ಸೇರಿದಂತೆ ಪಾತ್ರಕ್ಕೆ ಬೇಕಾಗುವ ಎಲ್ಲ ರೀತಿಯಲ್ಲೂ ತಯಾರಿ ಮಾಡಿಕೊಂಡಿ¨ªಾರೆ. ಇನ್ನು ನಾಯಕಿ ಹರಿಪ್ರಿಯಾಗೆ ಕೂಡ ಒಂದಷ್ಟು ಆ್ಯಕ್ಷನ್ ದೃಶ್ಯಗಳಿರುವುದರಿಂದ ಅವರೂ ಕೂಡ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಚಿತ್ರದುರ್ಗ ಮೂಲದ ಓಂ ಸಾಯಿಕೃಷ್ಣ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.