Advertisement

ಮುಂದಿನ ಎರಡು ತಿಂಗಳು ಸಾಮಾನ್ಯ ಮಳೆ ನಿರೀಕ್ಷೆ

08:00 AM Aug 09, 2017 | Team Udayavani |

ಹೊಸದಿಲ್ಲಿ: ಮಳೆಗಾಲದ ದ್ವಿತೀಯಾರ್ಧದಲ್ಲಿ ದೇಶದಲ್ಲಿ “ಸಾಧಾರಣ’ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ ಎರಡು ತಿಂಗಳ ಕಾಲ ಮಳೆಗಾಲ ಇರಲಿದೆ. ಆದರೆ ಹೆಚ್ಚು ಮಳೆ ನಿರೀಕ್ಷಿಸುವಂತಿಲ್ಲ. ಶೇ.94ರಿಂದ ಶೇ.104ರಷ್ಟು ಮಳೆಯನ್ನು “ಸಾಧಾರಣ’ ಮಳೆ ಎಂದು ಪರಿಗಣಿಸುತ್ತಿದ್ದು, ದ್ವಿತೀಯಾ ರ್ಧದ ದೀರ್ಘ‌ಕಾಲಿಕ ಸರಾಸರಿ ಮಳೆ ಪ್ರಮಾಣದಲ್ಲಿ ಶೇ.8ರಷ್ಟು ಏರಿಳಿತವಾಗುವ ಸಾಧ್ಯತೆಗಳಿದೆ. ಆಗಸ್ಟ್‌ ತಿಂಗಳು ಸರಾಸರಿ ಶೇ.99ರಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಹೇಳಿದೆ.

Advertisement

ಇದೇ ವೇಳೆ ದೇಶಾದ್ಯಂತ ಜೂನ್‌ 1ರಿಂದ ಆಗಸ್ಟ್‌ 7ರ ವರೆಗೆ ಸರಾಸರಿ ಮಳೆಯಲ್ಲಿ ಶೇ.3ರಷ್ಟು ಕುಸಿತ ಕಂಡು ಬಂದಿದೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮುಂದುವರಿದಿರುವ ಜೊತೆಗೆ, ದಕ್ಷಿಣ ಭಾರತದ ಕೆಲ ಭಾಗಗಳಲ್ಲಿ ಒಣ ಹವೆ ಇದೆ. ಇನ್ನೊಂದೆಡೆ ಗುಜರಾತ್‌, ರಾಜಸ್ಥಾನ ಹಾಗೂ ಇತರ ರಾಜ್ಯಗಳು ನೆರೆ ಹಾವಳಿಗೆ ತುತ್ತಾಗಿವೆ. “ಪೆಸಿಫಿಕ್‌, ಹಿಂದೂ ಮಹಾಸಾಗರ ಭಾಗದಲ್ಲಿ ಪರಿಸ್ಥಿತಿ ಸಹಜವಾಗಿರುವ ಕಾರಣ, “ಉತ್ತಮ ಮಳೆ ಸಾಧ್ಯತೆ ಇದೆ’ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next