ಹಿಂದೂ ವಿವಾದ ಅಂಟಿಕೊಂಡಿದೆ.
Advertisement
ಬುಧವಾರವಷ್ಟೇ ಸೋಮನಾಥ ದೇಗುಲಕ್ಕೆ ಪಕ್ಷದ ಮತ್ತೂಬ್ಬ ನಾಯಕ ಅಹ್ಮದ್ ಪಟೇಲ್ ಜತೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲೇ ಇದ್ದ “ಹಿಂದೂಯೇತರ ರಿಜಿಸ್ಟ್ರಿ’ ಪುಸ್ತಕ ದಲ್ಲಿ ಸಹಿ ಮಾಡಿದ್ದಾರೆ ಎಂದು ಹೇಳಲಾಗು ತ್ತಿದೆ. ಈ ಸಂಬಂಧ ರಿಜಿಸ್ಟರ್ ಪುಟದ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಾಕಿರುವ ಬಿಜೆಪಿ, ರಾಹುಲ್ ತಾನು ಹಿಂದೂ ಅಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಛೇಡಿಸಿದೆ.
Related Articles
Advertisement
ಈ ಮಧ್ಯೆ, ರಾತ್ರಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ನ ದೀಪೇಂದ್ರ ಹೂಡಾ, “”ರಾಹುಲ್ ಗಾಂಧಿ ಮಹಾ ಶಿವಭಕ್ತ. ಅವರು ಸತ್ಯವನ್ನು ನಂಬುತ್ತಾರೆ. ಹಾಗಾಗಿ, ಸತ್ಯವೇ ಜಯಿಸುತ್ತದೆ” ಎಂದರಲ್ಲದೆ, “”ಮತ ದಾರರ ಗಮನವನ್ನು ರಾಹುಲ್ ಕಡೆಯಿಂದ ವಿಮುಖಗೊಳಿಸಲು ಬಿಜೆಪಿ ಇಂಥ ತಂತ್ರಗಳನ್ನು ಅನುಸರಿ ಸುತ್ತಿದೆ” ಎಂದು ಟೀಕಿಸಿದರು. ಅಲ್ಲದೆ, ಈ ರಿಜಿಸ್ಟ್ರಿಯೇ ನಕಲಿ ಎಂದು ಹೇಳಿದರು.
ಆದರೆ, ಪರಿಸ್ಥಿತಿ ತಾರಕಕ್ಕೇರಿದ್ದನ್ನು ಗಮನಿಸಿದ ಗುಜರಾತ್‌ನ ಹಿರಿಯ ಪತ್ರಕರ್ತ, ಬ್ರಜೇಶ್ ಕೆ.ಸಿಂಗ್ ಅವರು ಸ್ಪಷ್ಟನೆ ನೀಡಿದ್ದು, ಇದು ಕಾಂಗ್ರೆಸ್ ಮಾಧ್ಯಮ ಸಂಯೋಜಕ ಮನೋಜ್ ತ್ಯಾಗಿ ಅವರ ತಪ್ಪು ಎಂದಿದ್ದಾರೆ. ಅಲ್ಲದೆ ರಾಹುಲ್ ಅವರೇ ಸಹಿ ಮಾಡಿದ್ದರೆ, ರಾಹುಲ್ ಜೀ ಎಂದು ಏಕೆ ಬರೆಯುತ್ತಿದ್ದರು ಎಂಬ ಪ್ರಶ್ನೆಗಳನ್ನೂ ಕಾಂಗ್ರೆಸ್ ನಾಯಕರು ಕೇಳಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲಿ ತ್ಯಾಗಿ ಅವರು ಇದಕ್ಕೆ ತದ್ವಿರುದ್ಧವಾದ ಸ್ಪಷ್ಟನೆ ನೀಡಿದರು. ತಾವು ರಿಜಿಸ್ಟ್ರಿಯಲ್ಲಿ ಕೇವಲ ತಮ್ಮ ಹೆಸರನ್ನು ಮಾತ್ರ ಬರೆದಿದ್ದು, ಬೇರ್ಯಾರ ಹೆಸರನ್ನೂ ಬರೆಯಲಿಲ್ಲ. ರಾಹುಲ್ ದೇಗುಲಕ್ಕೆ ಭೇಟಿ ನೀಡಿ ಹೊರಬಂದ ಬಳಿಕ ಯಾರೋ ಈ ಹೆಸರುಗಳನ್ನು ಇದರಲ್ಲಿ ಸೇರಿಸಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ಮತ್ತಷ್ಟು ಗೋಜಲನ್ನಾಗಿಸಿದರು.