ಚಿಕ್ಕಬಳ್ಳಾಪುರ: ಪಾಕ್ ಅಕ್ರಮಿತ ಕಾಶ್ಮೀರ ಪಡೆಯುವುದೇ ಮುಂದಿನ ಗುರಿ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.
ಮುನಿಸ್ವಾಮಿ ತಿಳಿಸಿದರು.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಇಡೀ ಜಗತ್ ಮೆಚ್ಚುವ ಆಡಳಿತ ನೀಡುತ್ತಿದೆ. ಜಮ್ಮು ಕಾಶ್ಮೀರಿಗೆ ಇದ್ದ 370 ನೇ ತಿದ್ದುಪಡಿ ರದ್ದುಪಡಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಮುಂದೆ ಪಾಕ್ ಹಾಗೂ ಚೀನಾ ಅಕ್ರಮಿತ ಕಾಶ್ಮೀರ ವಶ ಪಡೆದುಕೊಳ್ಳವುದೇ ಮುಂದಿನ ಗುರಿ ಎಂದರು. ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದಲ್ಲಿ ಯಾವುದೇ ಅಸಮಾದಾನ ಇಲ್ಲ. ಯುಡಿಯೂರಪ್ಪ ನೇತೃತ್ವದ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.
ರಾಜ್ಯದ ನೆರೆ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ. ರಾಜ್ಯಕ್ಕೆ ಬೇಕಾದ ಅಗತ್ಯವಾದ ನೆರವು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ ಎಂದರು.
ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಮೈತ್ರಿ ಸರ್ಕಾರ ಪತನವಾದರೂ ಸ್ಥಳೀಯ ಶಾಸಕರು ಇನ್ನೂ ಗೂಟದ ಕಾರು ಬಿಟ್ಟಿಲ್ಲ. ಬಿಜೆಪಿಯವರು ಯಾವಾಗ ಕಿತ್ತುಕೊಳ್ಳುತ್ತಾರೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ ವಿರುದ್ದ ಕಿಡಿಕಾರಿದರು. ಅಲ್ಲದೇ ತಾವು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಿಲ್ಲ.ಇದೆಲ್ಲ ತಮ್ಮ ರಾಜಕೀಯ ಕುತಂತ್ರಿಗಳ ವದಂತಿ ಎಂದರು.