ನೆಲಮಂಗಲ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕ್ಕೇರಿಸಲು ಡಿ.ಕೆ. ಶಿವಕುಮಾರ್ ಸೂಕ್ತ ಎಂದರಿ ತಿರುವ ರಾಷ್ಟ್ರೀಯ ಅಧ್ಯಕ್ಷರು, ಡಿಕೆಶಿಗೆ ಕೈ ಸಾರಥ್ಯ ನೀಡಿದ್ದಾರೆ. ಇದು ಕಾರ್ಯಕರ್ತರ ಮನೋಬಲ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಾಪಂ ಸದಸ್ಯೆ ಶಾರದಮ್ಮ ವೀರಮಾರೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಮಂಟನಕುರ್ಚಿಯಲ್ಲಿ ಹಮ್ಮಿಕೊಂಡಿದ್ದ ಡಿಕೆಶಿ ಪದಗ್ರಹಣ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್‌ನ ನೂತನ ಅಧ್ಯ ಕ್ಷರ ಕಾರ್ಯ ವೈಖರಿ ಕಂಡ ವಿಪಕ್ಷಗಳು ತಳಮಳ ಗೊಂಡಿವೆ. ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಬಿಎಸ್‌ವೈ ಪೊಳ್ಳು ಭರವಸೆಗಳನ್ನು ಕೇಳಿ ರಾಜ್ಯದ ಜನರು ಬೇಸತ್ತಿದ್ದಾರೆ ಎಂದು ಭವಿಷ್ಯ ನುಡಿದರು.
ಕಸಬಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ. ಎಂ. ಗೌಡ್ರು ಮಾತನಾಡಿ, ರಾಜ್ಯದಲ್ಲಿ ಮಖಗಿದ್ದ ಕಾಂಗ್ರೆಸ್‌ಗೆ ಡಿಕೆಶಿ ಸಾರಥ್ಯ ಸಾಕಷ್ಟು ಬಲ ತುಂಬಿದೆ. ಅವರನ್ನು ಮಾನಸಿಕವಾಗಿ ಕುಗ್ಗಿಸಲು ಇನ್ನಿಲ್ಲದ ಯತ್ನ ಮಾಡಿದ ಬಿಜೆಪಿ ತಂತ್ರಗಾರಿಕೆಗೆ ಜಗ್ಗದ ಕೈ ಸಾರಥಿ ಬಿಜೆಪಿಗರಿಗೆ ತಕ್ಕ ಉತ್ತರ ನೀಡ ಲಿದ್ದಾರೆ. ಬಿಜೆಪಿ ದ್ವಂದ್ವ ಆಡಳಿತ ಮತ್ತು ಹುಸಿಭರವಸೆಗಳನ್ನು ಜನರಿಗೆ ಮನನ ಮಾಡಿಸುವಲ್ಲಿ ಗ್ರಾಮೀಣ ಭಾಗದ ಯುವಜನತೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು.
ಪ್ರತಿ ಕೈ ನಾಯಕರು ಡಿಕೆಶಿಯವರನ್ನು ಸಿಎಂ ಆಗಿಸುವಲ್ಲಿ ಅವಿರತವಾಗಿ ಹೋರಾಡಬೇಕು. ಕ್ಷೇತ್ರದಲ್ಲಿ ಪಕ್ಷ ಬಲ ವರ್ಧನೆಗೆ ಹಗಲಿರುಳೆನ್ನದೆ ಶ್ರಮಸಿದಲ್ಲಿ ಪಕ್ಷ ನಮ್ಮನ್ನು ಗುರುತಿಸಿ, ಸೂಕ್ತ ಕಾಲಕ್ಕೆ ಸೂಕ್ತ ಸ್ಥಾನ ಮಾನ ನೀಡುವುದರಲ್ಲಿ ಸಂಶಯವಿಲ್ಲ. ಶಿವಕುಮಾರ್, ರಾಜ್ಯಾ ಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲ ಯುವ ಕೈಮುಖಂಡರಲ್ಲಿ ಹುರುಪು ಮೂಡಿದ್ದು, ಪಕ್ಷಧಿಕಾರಕ್ಕೆ ಬರುವುದು ಖಚಿತ ಎಂದರು.
ಗಾಂಧಿ ಗ್ರಾಮ ವಿಎಸ್ ಎಸ್‌ಎನ್ ಅಧ್ಯಕ್ಷ ವೀರ ಮಾರೇಗೌಡ್ರು, ಕಾಂಗ್ರೆಸ್ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ್, ಘಟಕ ಸೋಲ ದೇವನಳ್ಳಿ, ಗ್ರಾಪಂ ಉಪಾಧ್ಯಕ್ಷ ವೆಂಕಟೇಶಪ್ಪ, ಸದಸ್ಯ ರವಿ, ಮುಖಂಡ ಪಟೇಲ್ ನರಸಿಂಹಯ್ಯ, ಶೇಖರ್‌ಗೌಡ, ಶಂಕರಪ್ಪ, ವೆಂಕಟಾಚಲಯ್ಯ, ಚನ್ನೇಗೌಡ, ಮಂಟನಕುರ್ಚಿ ಲೊಕೇಶ್, ರುದ್ರೇಶ್, ನಾಗ ರಾಜ್, ಶ್ರೀನಿ ವಾಸ್, ಮಂಜು ನಾಥ್, ಗೋ.ರಾಜಣ್ಣ, ಚೌಡಸಂದ್ರ ಆಂಜಿನಪ್ಪ, ಚಿಕ್ಕಣ್ಣ ಇದ್ದರು