Advertisement

ಬೇಡಿಕೆ ಈಡೇರದಿದ್ರೆ ವಾಲ್ಮೀಕಿ ಸಮಾಜದವರೇ ಮುಂದಿನ ಮುಖ್ಯಮಂತ್ರಿ

10:36 PM Dec 30, 2019 | Lakshmi GovindaRaj |

ಹೂವಿನಹಡಗಲಿ: ವಾಲ್ಮೀಕಿ ಸಮಾಜದ ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ವಾಲ್ಮೀಕಿ ಸಮಾಜದವರೇ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂದು ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಪುರಿ ಶ್ರೀ ಎಚ್ಚರಿಕೆ ನೀಡಿದರು. ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಾಲ್ಮೀಕಿ ಸಮಾಜದ ಬೇಡಿಕೆ ಈಡೇರಿಸುತ್ತೇನೆಂದು ಸಿಎಂ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ.

Advertisement

ಅದರಂತೆ, ಜಾತ್ರಾ ಮಹೋತ್ಸವದಲ್ಲಿ ಘೋಷಣೆ ಮಾಡಬೇಕು. ಸರ್ಕಾರದ ವರದಿ ಬಂದ ನಂತರ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು. ಇಲ್ಲವಾದರೆ ಸಮಾಜದವರು ತೆಗೆದುಕೊಳ್ಳುವ ನಿರ್ಧಾರ ಬಹಳ ಕಠಿಣವಾಗಿರುತ್ತವೆ ಎಂದು ಎಚ್ಚರಿಸಿದರು. ಪರಿಶಿಷ್ಟ ಜಾತಿಗೆ ಸಮುದಾಯ ಹಾಗೂ ವಾಲ್ಮೀಕಿ ಸಮಾಜಕ್ಕೆ ಶೇ.3ರಿಂದ ಶೇ.7 ಮೀಸಲಾತಿ ಕೊಡಲೇಬೇಕೆಂದು ಅಂಬೇಡ್ಕರ್‌ ಅವರೇ ಸಂವಿಧಾನದಲ್ಲಿ ಹೇಳಿದ್ದಾರೆ.

ಅದರಂತೆ ರಾಜ್ಯದಲ್ಲಿ ಇಲ್ಲಿವರೆಗೂ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬೇಡಿಕೆ ಈಡೇರಿಸಿಲ್ಲ. ನಮ್ಮ ಸಮಾಜದವರನ್ನು ಕೇವಲ ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಳ್ಳಲಾಗುತ್ತಿದೆ. ಅಧಿಕಾರಕ್ಕೇರಿದ ನಂತರ ಸಮಾಜವನ್ನು ಮರೆಯುತ್ತಾರೆ. ಹಂಪಿ ಕನ್ನಡ ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರನ್ನಿಡಬೇಕು. ಇಲ್ಲವಾದರೆ ಸಮಾಜದ 15 ಶಾಸಕರು ತೆಗೆದುಕೊಳ್ಳುವ ನಿರ್ಧಾರಗಳನ್ನು ಜನರೇ ತೀರ್ಮಾನಿಸುತ್ತಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next