Advertisement

ಕಾಸ್‌ ಚೆಕ್‌: ವಾಲ್‌ ಸ್ಟ್ರೀಟ್‌

04:52 PM Apr 20, 2020 | mahesh |

ವಾಲ್‌ ಸ್ಟ್ರೀಟ್‌ ಎಂದಾಕ್ಷಣ, ನಮ್ಮ ಕಿವಿಗಳಲ್ಲಿ ಝಣ ಝಣ ಕಾಂಚನದ ಸದ್ದು ಕೇಳುತ್ತದೆ. ಜಗತ್ತಿನ ಎಲ್ಲಾ ದೇಶಗಳ ಆರ್ಥಿಕತೆಯ ನಾಡಿಮಿಡಿತ, ಅಲ್ಲಿ ಕೇಳುತ್ತದೆ. ಅಲ್ಲಿ ನಡೆಯುವ ಚಿಕ್ಕ ಬದಲಾವಣೆ ಕೂಡಾ, ಹಲವು ದೇಶಗಳನ್ನು ಚಿಂತೆಗೀಡು ಮಾಡಬಹುದು. ವಾಲ್‌ ಸ್ಟ್ರೀಟ್‌ನಲ್ಲಿ ನೋಂದಣಿಯಾಗುವ ಮೂಲಕ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂಬುದು ಎಲ್ಲಾ ಸಂಸ್ಥೆಗಳ ಕನಸು. ಇಷ್ಟೆಲ್ಲಾ ಖ್ಯಾತಿ ಹೊಂದಿರುವ ವಾಲ್‌ ಸ್ಟ್ರೀಟ್‌ ಇರುವುದು, ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ. ವಾಲ್‌ ಸ್ಟ್ರೀಟ್‌ ಎಂಬುದು, ಒಂದು ಬೀದಿಯ ಹೆಸರು. 17ನೇ ಶತಮಾನದಲ್ಲಿ ಆ ಪ್ರದೇಶದಲ್ಲಿ ವಾಸವಿದ್ದ ಡಚ್ಚರು, ಅಲ್ಲಿ 12 ಅಡಿ ಎತ್ತರದ ಗೋಡೆಯೊಂದನ್ನು ಕಟ್ಟಿಕೊಂಡಿ ದ್ದರು.

Advertisement

ಕಡಲ್ಗಳ್ಳರಿಂದ ರಕ್ಷಣೆ ಪಡೆಯಲು ಮತ್ತು ಸ್ಥಳೀಯ ಮೂಲ ವಾಸಿಗಳ ದಾಳಿಯಿಂದ ಬಚಾವಾಗಲು ಆ ಗೋಡೆ ಕಟ್ಟಲಾಗಿತ್ತು. ಗೋಡೆ ಇದ್ದ ರಸ್ತೆ ಎಂಬ ಕಾರಣಕ್ಕೇ “ವಾಲ್‌ ಸ್ಟ್ರೀಟ್’ ಎಂಬ ಹೆಸರು ಬಂತು. ಮುಂದಿನ ದಿನಗಳಲ್ಲಿ ಗೋಡೆಯನ್ನು ಕೆಡವಲಾಯಿತಾದರೂ, ಆ ಬೀದಿಗೆ ವಾಲ್‌ ಸ್ಟ್ರೀಟ್‌ ಎಂಬ ಹೆಸರು ಹಾಗೇ ಉಳಿದುಕೊಂಡಿತು. ಆ ಬೀದಿ, ವ್ಯಾಪಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿತ್ತು. ಹೀಗಾಗಿ, 1792ರಲ್ಲಿ ಅಲ್ಲಿ ಸ್ಟಾಕ್‌ ಎಕ್ಸ್ ಚೇಂಜ್‌ ಅನ್ನು ಪ್ರಾರಂಭಿಸಲಾಯಿತು. ಅದೇ ಇಂದಿನ ಪ್ರಸಿದ್ಧ “ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್ ಚೇಂಜ್‌- ಎನ್‌.ವೈ.ಎಸ್‌.ಇ’ ನ ಹುಟ್ಟಿಗೆ ಕಾರಣವಾಯಿತು. ಇಂದು ವಾಲ್‌ಸ್ಟ್ರೀಟ್‌ ಎನ್ನುವುದು ಕೇವಲ ಸ್ಥಳನಾಮವಾಗಿಯಷ್ಟೇ ಉಳಿದಿಲ್ಲ. ಅರ್ಥವ್ಯವಸ್ಥೆಯ ಸಂಕೇತ ಒಂದೆಡೆಯಾದರೆ, “ಆಕ್ಯುಪೈ ವಾಲ್‌ ಸ್ಟ್ರೀಟ್‌’ನಂಥ
ಪ್ರತಿಭಟನೆಗಳಿಂದಾಗಿ ಕುಖ್ಯಾತಿಗೂ ಒಳಗಾಗಿದೆ. ಹೀಗಾಗಿ ಲೋಭ, ದುರಾಸೆಗಳ ಪ್ರತೀಕವಾಗಿಯೂ ವಾಲ್‌ ಸ್ಟ್ರೀಟ್‌ ಅನ್ನು ಕಾಣಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next