Advertisement

ಕಲಬುರಗಿ ಶಹಾಬಜಾರ ಬಡಾವಣೆ ರುದ್ರಭೂಮಿಗೆ ಹೊಸ ಸ್ಪರ್ಶ

12:58 PM Mar 14, 2019 | |

ಕಲಬುರಗಿ: ನಗರದ ಶಹಾಬಜಾರ ಬಡಾವಣೆ ನಿವಾಸಿಗಳು ಶಿವರಾತ್ರಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಇಲ್ಲಿನ ರುದ್ರಭೂಮಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಿವನ ಮಂದಿರದಲ್ಲಿ ಶಿವರಾತ್ರಿ ಆಚರಿಸಿ ಶಿವನನ್ನು ಆರಾಧಿಸಿದರು. ಇನ್ಮುಂದೆ ಇದೇ ಸ್ಮಶಾನ ವಾಸಿ ಶಿವನಲ್ಲೇ ಶಹಾಬಜಾರ ನಿವಾಸಿಗಳು ತಮ್ಮ ಅಗಲಿದ ಬಂಧು-ಬಳಗವನ್ನೂ ಕಾಣಲಿದ್ದಾರೆ.

Advertisement

ವೀರಶೈವ ಲಿಂಗಾಯತ ಬಂಧು ಸಮಾಜದವರು ವೈಚಾರಿಕ ಹಾಗೂ ಪ್ರಗತಿಪರ ಚಿಂತನೆ ದೃಷ್ಟಿಯಿಂದ ರುದ್ರಭೂಮಿಗೆ ಹೊಸ ಸ್ಪರ್ಶ ನೀಡಿದ್ದಾರೆ. ಸ್ಮಶಾನದ ಆವರಣವನ್ನು ಅಚ್ಚು-ಕಟ್ಟಾಗಿ, ಸೌಂದರ್ಯಯುತವಾಗಿ ಕಾಣುವಂತೆ ಅಭಿವೃದ್ಧಿ ಮಾಡಿದ್ದಾರೆ. ಸ್ಮಶಾನ ಜಾಗದಲ್ಲಿ ಶಿವನ ಮಂದಿರ ನಿರ್ಮಿಸಿ ಜನರಲ್ಲಿನ ಮೌಡ್ಯಗಳನ್ನು ಹೋಗಲಾಡಿಸಲು ಟೊಂಕಕಟ್ಟಿ ನಿಂತಿದ್ದಾರೆ.

ಅರ್ಧ ಶತಮಾನದ ರುದ್ರಭೂಮಿ: ಸುಮಾರು 3.5 ಎಕರೆ ರುದ್ರಭೂಮಿ ಆವರಣ ಇದಾಗಿದೆ. 50 ವರ್ಷಗಳ ಹಿಂದೆ ವೀರಶೈವ ಲಿಂಗಾಯತ ಸಮಾಜದ ಹಿರಿಯರು ಇದನ್ನು ಖರೀದಿಸಿದ್ದಾರೆ. ಇಲ್ಲಿ ಎಲ್ಲ ಸಮುದಾಯವರಿಗೂ ಅಂತ್ಯ ಸಂಸ್ಕಾರ ನೆರವೇರಿಸಲು ಅವಕಾಶ ಇದೆ. ಕಳೆದ ಮೂರು ವರ್ಷಗಳಿಂದ ರುದ್ರಭೂಮಿ ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ. 

ಇಡೀ ಆವರಣದ ಸುತ್ತ ಕಾಂಪೌಂಡ್‌ ಕಟ್ಟಲಾಗಿದೆ. ಶವ ಸಂಸ್ಕಾರಕ್ಕೆ ಬರುವವರು ಬಿಸಿಲು, ಮಳೆಯಿಂದ ಆಶ್ರಯ ಪಡೆಯಲು ಅನುಕೂಲವಾಗಲು ಶೆಡ್‌ ನಿರ್ಮಿಸಲಾಗಿದೆ. ಕ್ರೀಡಾಂಗಣ ಮಾದರಿಯಂತಹ ಶೆಡ್‌ ಇದಾಗಿದ್ದು, ಮಹಿಳೆಯರು, ಪುರುಷರಿಗೆ ಪ್ರತ್ಯೇಕವಾದ ಆಸನ ವ್ಯವಸ್ಥೆ ಇದೆ. ಆವರಣದೊಳಗೆ ಶೌಚಾಲಯದ ವ್ಯವಸ್ಥೆ ಕೂಡ ಇದೆ. ಒಂದು ಕೊಳವೆಬಾವಿ ಕೊರೆಸಲಾಗಿದೆ. ರುದ್ರಭೂಮಿ ಆವರಣವನ್ನು ಸಂರ್ಪೂಣ ಸ್ವತ್ಛಗೊಳಿಸಲಾಗಿದೆ.

ಬಿಲ್ವಪತ್ರೆ, ತೆಂಗು, ಮಾವು, ಬೇವು ಸೇರಿದಂತೆ ವಿವಿಧ ಸಸಿ ಬೆಳೆಸಲಾಗಿದ್ದು ಶಾಂತ ವಾತಾವರಣ ಮೂಡಿದೆ. ಜತೆಗೆ 6 ಲಕ್ಷ ರೂ. ವೆಚ್ಚದಲ್ಲಿ ನೂತನ ಶಿವನ ಮಂದಿರ ನಿರ್ಮಿಸಲಾಗಿದೆ. ಸೋಮವಾರ ಶಿವರಾತ್ರಿಯಂದು ಶಿವನ ಮೂರ್ತಿ, ನಂದಿ ವಿಗ್ರಹ ಹಾಗೂ ಲಿಂಗ ಪ್ರತಿಷ್ಠಾಪನೆ ಮಾಡಲಾಯಿತು. 

Advertisement

ಸ್ಮಶಾನ ಭೂಮಿ ಎಂದರೆ ಎಲ್ಲರಿಗೂ ಒಂದು ರೀತಿಯ ಭಯ ಸಹಜವಾಗಿಯೇ ಇರುತ್ತದೆ. ಆದರೆ, ರುದ್ರಭೂಮಿಯಲ್ಲಿ ಶಿವನಿಗೆ ಪೂಜೆ ಸಲ್ಲಿಸಿದ್ದು ಹೊಸ ಅನುಭವ ನೀಡಿತು ಹಾಗೂ ಖುಷಿ ಕೊಟ್ಟಿದೆ. ಇಲ್ಲಿಗೆ ಬಂದಾಗ ರುದ್ರಭೂಮಿ ಎಂಬ ಭಾಸವೇ ಆಗಲಿಲ್ಲ.  ಶ್ರೀದೇವಿ ಬಾಬುರಾವ, ಶಹಾಬಜಾರ ನಿವಾಸಿ ಸಮಾಧಿ ನಿರ್ಮಿಸಲು ಅವಕಾಶ ಇಲ 50 ವರ್ಷಗಳ ಹಿಂದೆ ರುದ್ರಭೂಮಿ ಖರೀದಿಸಿದಾಗ ಶಹಾಬಜಾರ ಬಡಾವಣೆ ಜನಸಂಖ್ಯೆ ಸುಮಾರು 30ರಿಂದ 40 ಸಾವಿರ ಇತ್ತು. ಆದರೆ, ಈಗ ಶಹಾಬಜಾರ ಬಡಾವಣೆ ಏಳು ವಾರ್ಡ್‌ಗಳ ವ್ಯಾಪ್ತಿ ಒಳಗೊಂಡಿದೆ. ಸುಮಾರು 1.50 ಲಕ್ಷ ಜನಸಂಖ್ಯೆ ಇದೆ. ಹಿಂದೂ ಧರ್ಮದ ಪ್ರತಿಯೊಬ್ಬರಿಗೂ ಅಂತ್ಯ ಸಂಸ್ಕಾರ ನೆರವೇರಿಸಲು ಅವಕಾಶ ಇದೆ. ಆದ್ದರಿಂದ ರುದ್ರಭೂಮಿಯಲ್ಲಿ ಸಮಾಧಿ ನಿರ್ಮಿಸಲು ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ವೀರಶೈವ ಲಿಂಗಾಯತ ಬಂಧು ಸಮಾಜದ ಪ್ರಧಾನ ಕಾರ್ಯದರ್ಶಿ ವೀರಣ್ಣ ಗೂಳೆದ ತಿಳಿಸಿದರು.

ಈಗಾಗಲೇ ಈ ಹಿಂದೆ ಇಂತಹ ಸಮಾಧಿಗಳನ್ನು ಆಯಾ ಕುಟುಂಬಸ್ಥರಿಗೆ ತಿಳಿಸಿ ತೆರವುಗೊಳಿಸಲಾಗಿದೆ. ಇನ್ಮುಂದೆ ಯಾರಿಗೂ ಇಲ್ಲಿ ಸಮಾಧಿ ನಿರ್ಮಿಸಲು ಅವಕಾಶವಿಲ್ಲ. ಬಂಧು-ಬಳಗದವರ ಪುಣ್ಯ ತಿಥಿ ಮತ್ತಿತರ ಕಾರ್ಯಗಳಿದ್ದ ಸಂದರ್ಭದಲ್ಲಿ ಶಿವ ಮಂದಿರದಲ್ಲೇ ನೆರವೇರಿಸಿ ಶಿವನಲ್ಲೇ
ತಮ್ಮವರನ್ನು ಕಾಣಬೇಕು ಎಂದು ತಿಳಿಸಿದ ಅವರು ಪಕ್ಕದಲ್ಲಿಯೇ ಚಿತಾಗಾರದ ವ್ಯವಸ್ಥೆ ಸಹ ಇದೆ ಎಂದು ವಿವರಿಸಿದರು.

ಅನುದಾನ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ: ಶಹಾಬಜಾರ ಬಡಾವಣೆ ಜನರು ಸೇರಿಕೊಂಡು ಸ್ಮಶಾನ ಆವರಣ ಅಭಿವೃದ್ಧಿ ಮಾಡಲಾಗಿದೆ. ಇಲ್ಲಿಗೆ ಬಂದಾಗ ಯಾರಿಗೂ ಸ್ಮಶಾನದ ವಾತಾವರಣ ಕಾಡಬಾರದು. ಈ ನಿಟ್ಟಿನಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸುವ ಯೋಚನೆ ಇದೆ. ಶಿವ ಮಂದಿರದ
ಹತ್ತಿರ ಹೊಸ ಶೆಡ್‌ ನಿರ್ಮಾಣ, ಮತ್ತೆರಡು ಕೊಳವೆಬಾವಿ ಕೊರೆಸುವ ಹಾಗೂ ವಾಕಿಂಗ್‌ ಟ್ರ್ಯಾಫಿಕ್‌ ನಿರ್ಮಿಸುವ ಉದ್ದೇಶವಿದೆ. 

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next