Advertisement
ಆದ್ಯತೆಯ ಮೆರೆಗೆ ಸೌಲಭ್ಯಈ ಹೊಸ ನಿಯಮಗಳ ಪ್ರಕಾರ ಗ್ರಾಹಕರು ತಮ್ಮಗೆ ಅಗತ್ಯವಿರುವ ಸೇವೆಗೆ ಅರ್ಜಿ ಸಲ್ಲಿಸಬೇಕಾಗಿದ್ದು, ತಮ್ಮ ಆದ್ಯತೆಗೆ ಒಳಗೊಂಡಂತೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿ ಯಲ್ಲಿ ಗ್ರಾಹಕರು ಆಯ್ಕೆ ಮಾಡಿ ಕೊಂಡ ಸೇವೆಗಳನ್ನು ಮಾತ್ರ ಬ್ಯಾಂಕ್‌ಗಳು ನೀಡಲಿದ್ದು, ಅಂತಾರಾಷ್ಟ್ರೀಯ ವಹಿವಾಟುಗಳು, ಆನ್‌ಲೈನ್ ವಹಿವಾಟು ಗಳ ಅಗತ್ಯತೆ ಇದೆ ಎಂದಾದರೆ ಅಂತಹ ಸೇವೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಹಿವಾಟು ನಡೆಸುವಾಗ ಗ್ರಾಹಕರು ದೇಶೀಯ ವಹಿವಾಟಿಗೆ ಆದ್ಯತೆ ನೀಡಬೇಕು ಎಂದು ಆರ್‌ಬಿಐ ತಿಳಿಸಿದ್ದು, ತಮ್ಮಗೆ ಅಗತ್ಯವಿದ್ದರೆ ಮಾತ್ರ ವಿದೇಶಿ ವ್ಯವಹಾರಗಳು ಹಾಗೂ ಪಿಒಎಸ್ ಟರ್ಮಿನಲ್‌ನ ಮೂಲಕ ನಡೆಸಲಾಗುವ ವಹಿವಾಟುಗಳ ಸೌಲಭ್ಯವನ್ನು ಪಡೆಯುವಂತೆ ಸೂಚಿಸಿದೆ. ಡೆಬಿಟ್ ಕಾರ್ಡ್ ಬಳಕೆದಾರರೇ ಹೆಚ್ಚು
ದೇಶದಲ್ಲಿ 82.94 ಕೋಟಿ ಡೆಬಿಟ್ ಕಾರ್ಡ್ ಮತ್ತು 4.6 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆ ಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯ ವಾಗಲಿದೆ. ಇತ್ತೀಚೆಗೆ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣ, ಮೌಲ್ಯ ಹೆಚ್ಚಾಗಿದೆ.
Related Articles
ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್, ಎಟಿಎಂ, ಆನ್‌ಲೈನ್, ಚಿಪ್ ಕಾರ್ಡ್ ವಹಿವಾಟುಗಳನ್ನು ನಿರ್ಧರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಡಿಜಿಟಲ್ ವಹಿವಾಟಿನ ಭದ್ರತೆ ಹೆಚ್ಚಿಸಲು ನೆರವಾಗುವ ದೃಷ್ಟಿಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ ಮತ್ತು ಸ್ಥಗಿತ ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.
Advertisement
ವ್ಯವಹಾರದ ಮಿತಿ ಬದಲಾವಣೆ
ಹೊಸ ನಿಯಮಗಳನ್ನು ಅನುಸರಿಸಿ ಗ್ರಾಹಕರು ತಾವೇ ಸ್ವತ: ವಹಿವಾಟಿನ ಮಿತಿಯನ್ನು ಸಹ ಬದಲಾಯಿಸಲು ಅನುವು ಮಾಡಿಕೊಡಲಾಗಿದೆ. ಮೊಬೈಲ್ ಅಪ್ಲಿಕೇಶನ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಯಂತ್ರ ಮತ್ತು ಐವಿಆರ್ ಮೂಲಕ ಕಾರ್ಡ್‌ನ ಮಿತಿಯನ್ನು ಬದಲಾಯಿಸಬಹುದು. ಇದರೊಂದಿಗೆ ಗ್ರಾಹಕರಿಗೆ ತಮ್ಮ ಎಟಿಎಂ ಕಾರ್ಡ್ ವಹಿವಾಟುವಿನ ಮಿತಿಯನ್ನು ನಿರ್ಧಾರಿಸುವ ಸೌಲಭ್ಯವನ್ನು ನೀಡಲಾಗಿದ್ದು, ಮೊಬೈಲ್ ಅಪ್ಲಿಕೇಷನ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂಗಳು, ಐವಿಆರ್ ಅಥವ ಇಂಟರಾಕ್ಟೀವ್ ವಾಯ್ಸ ರೆಸ್ಪಾ®Õ… ಮೊದಲಾದವುಗಳನ್ನು ನಿವಾರಿಸಲು 24×7 ಸಹಾಯವಾಣಿ ದೊರೆಯಲಿದೆ. ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆಗಳಾದರೆ ಬಳಕೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮೂಲಕ ಮಾಹಿತಿ ದೊರೆಯಲಿದೆ.
ಲಾಕ್‌ಡೌನ್ ವೇಳೆ ಕ್ರೆಡಿಟ್ ಕಾರ್ಡ್ ಬಳಕೆ ಕುಂಠಿತಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆ ಕುರಿತು ಆರ್‌ಬಿಐ ಮಾಹಿತಿಯ ಹಂಚಿಕೊಂಡಿದ್ದು, ಈ ವರ್ಷದ ಜೂನ್ ತಿಂಗಳಲ್ಲಿ ದೇಶದ ಜನರು ಕ್ರೆಡಿಟ್ ಕಾರ್ಡ್‌ಗಳ ಮೂಲಕ 42,818 ಕೋಟಿ ರೂ. ಮೌಲ್ಯದ ವಸ್ತಗಳನ್ನು ಖರೀದಿಸಿ ದ್ದಾರೆ. ಆದರೆ ಜನವರಿಯಲ್ಲಿ ಇದರ ಪ್ರಮಾಣ ಹೆಚ್ಚಿದ್ದು, ಕ್ರೆಡಿಟ್ ಕಾರ್ಡ್ ಮೂಲಕ 67,000 ಕೋಟಿ ರೂ.ಗಳಷ್ಟು ಮೌಲ್ಯದ ವಸ್ತುಗಳನ್ನು ಜನರು ಖರೀದಿಸಿದ್ದರು.