ನವದೆಹಲಿ: ದೇಶದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಆಟೋಮೋಟಿವ್ ಬ್ರ್ಯಾಂಡ್‌ಗಳಲ್ಲೊಂದಾದ ರೆನಾಲ್ಟ್ ಇಂಡಿಯಾ ಪ್ರೈ.ಲಿ. ಪ್ರೀಮಿಯಂ ಎಸ್‌ಯುವಿ ಸರಣಿಯಲ್ಲಿ “ರೆನೋ ಕ್ಯಾಪ್ಚರ್’ಕಾರನ್ನು 2017ರ ಅಂತ್ಯದೊಳಗೆ ಬಿಡುಗಡೆ ಮಾಡಲಿದೆ.
ಬುಧವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೆನೋ ಇಂಡಿಯಾ ಆಪರೇಷನ್ಸ್‌ನ ದೇಶೀಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮಿತ್ ಸಾಹ್ನೆ ಅವರು ನೂತನ ಕಾರನ್ನು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿ, ರೆನೋ ಬ್ರ್ಯಾಂಡ್ ಜಾಗತಿಕವಾಗಿ ಗುರುತಿಸಿಕೊಳ್ಳಲು ಭಾರತದ ಆಟೋಮೊಬೈಲ್ ಮಾರುಕಟ್ಟೆ ಬಹು ಮುಖ್ಯ ಕಾರಣವಾಗಿದೆ.
ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ನ ಈ ರೆನಾಲ್ಟ್ ಕ್ಯಾಪ್ಚರ್ ಬಹಳ ಶಕ್ತಿಯುತವಾಗಿದ್ದು, ಆನ್‌ರೋಡ್ ಮತ್ತು ಆಫ್‌ರೋಡ್‌ನಲ್ಲಿ ಆರಾಮದಾಯಕವಾಗಿ ಚಲಿಸಲಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಭಾರತೀಯ ರಸ್ತೆಗಳಲ್ಲಿ ಸಂಚಲಿಸಲಿರುವ ಈ ಕಾರನ್ನು ಗುಡ್ಡಗಾಡು ರಸ್ತೆಗಳಲ್ಲೂ ಆರಾಮ ಹಾಗೂ ನಿರಾಯಾಸವಾಗಿ ಚಾಲನೆ ಮಾಡಬಹುದು.
ಲಾಂಗ್‌ಡ್ರೈವ್ ಕಾರು ಪ್ರಿಯ ಗ್ರಾಹಕರಿಗಂತೂ ಬಹಳ ಇಷ್ಟವಾಗುವಂತೆ ಇದನ್ನು ರೂಪಿಸಲಾಗಿದೆ. ಇಂದಿನ ದಿನಗಳಲ್ಲಿ ಎಸ್‌ಯುವಿ ಕಾರುಗಳಿಗೆ ಬಹಳ ಬೇಡಿಕೆಯಿರುವುದರಿಂದ ಆ ಸೆಗ್ಮೆಂಟ್‌ನಲ್ಲಿ ಎಲ್ಲ ರೀತಿ ಅತ್ಯಾಧುನಿಕ ಸೌಕರ್ಯ ಹಾಗೂ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಡಿಎನ್‌ಎ ಡಿಸೈನ್‌ವುಳ್ಳ ರೆನೋ ಕ್ಯಾಪ್ಚರ್ ಕ್ರಾಸ್‌ಓವರ್ ಫ್ರೆಂಚ್ ಶೈಲಿಯ ಕಾರಾಗಿದೆ.
ಪ್ರಸ್ತುತ ಮೆಟ್ರೋ ನಗರದ ಗ್ರಾಹಕರಿಗೆ ಮಾತ್ರ ಸೀಮಿತವಾಗಿದ್ದ ರೆನಾಲ್ಟ್ ಕಾರುಗಳು ಮುಂದಿನ ದಿನಗಳಲ್ಲಿ ಟಿಯರ್-2 ಮತ್ತು ಟಿಯರ್ 3 ನಗರಗಳಲ್ಲೂ ದೊರಕಲಿವೆ. ರೆನೋ ಸ್ಟೋರ್ ಕಾನ್ಸೆಪ್ಟ್ನಡಿ ದೇಶಾದ್ಯಂತ 300 ಡೀಲರ್ ಶಿಪ್ ಔಟ್‌ಲೆಟ್ ತೆರೆಯುವ ವ್ಯವಸ್ಥೆ ಮಾಡಲಿದ್ದೇವೆ. ಈಗಾಗಲೇ ನಮ್ಮ ರೆನೋ ಸೆಕ್ಯೂರ್, ಅಸಿಸ್ಟ್, ಅಶ್ಶೂರ್ ಗ್ರಾಹಕರ ಮೆಚ್ಚುಗೆ ಪಡೆದಿವೆ ಎಂದು ಅವರು ತಿಳಿಸಿದರು.