Advertisement

ನೌಕಾಯಾನ ಖಾತೆಗೆ ಸಿಗಲಿದೆ ಹೊಸ ಹೆಸರು

01:16 AM Nov 09, 2020 | mahesh |

ಅಹ್ಮದಾಬಾದ್‌: ನೌಕಾಯಾನ ಖಾತೆಯನ್ನು ಶೀಘ್ರದಲ್ಲಿಯೇ ಬಂದರು, ನೌಕಾಯಾನ ಮತ್ತು ಜಲಸಾರಿಗೆ ಸಚಿವಾಲಯ ಎಂದು ಪುನರ್‌ನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಸೂರತ್‌ನ ಹಝಾರಿಯಾದಿಂದ ಭಾವಾನಗರದ ಘೋ ಯಾವರೆಗೆ ಹಡಗು ಸೇವೆ- ರೋ ಪಾಕ್ಸ್‌ (Ro-Pax) ಸೇವೆಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು. ದೇಶದ ಸಮುದ್ರ ಮಾರ್ಗಗಳನ್ನು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಳಕೆ ಮಾಡಲಾಗುತ್ತದೆ. ಸರಕಾರದ ಇಂಥ ಪ್ರಯತ್ನಕ್ಕೆ ಇಂಬು ಕೊಡಲು ನೌಕಾಯಾನ ಸಚಿವಾಲಯವನ್ನು ಶೀಘ್ರ ದಲ್ಲಿಯೇ ಬಂದರು, ನೌಕಾಯಾನ ಮತ್ತು ಜಲ ಸಾರಿಗೆ ಸಚಿವಾಲಯ ಎಂದು ಪುನರ್‌ ನಾಮ ಕರಣ ಮಾಡಲಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನೌಕಾಯಾನ ಸಚಿವಾಲಯವೇ ಬಂದರು ಮತ್ತು ಜಲಸಾರಿಗೆಯನ್ನು ನೋಡಿ ಕೊಳ್ಳುÛತ್ತದೆ. ಭಾರತದಲ್ಲಿ ನೌಕಾಯಾನ ಸಚಿವಾ ಲಯಕ್ಕೆ ಬಂದರು ಮತ್ತು ಜಲಸಾರಿಗೆಗೆ ಸಂಬಂಧಿಸಿದಂತೆ ಹೆಚ್ಚಿನ ಕೆಲಸದ ಒತ್ತಡ ಇರುವುದಿಲ್ಲ. ಹೆಸರಿನಲ್ಲಿ ಸ್ಪಷ್ಟತೆ ಇದ್ದರೆ ಕೆಲಸದಲ್ಲಿಯೂ ನಿಖರತೆ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ರೋ ಪಾಕ್ಸ್‌ ಸೇವೆಯಿಂದಾಗಿ ಎರಡೂ ಸ್ಥಳ ಗಳ ನಡುವೆ ಇರುವ 375 ಕಿಮೀ ಪ್ರಯಾಣದ ದೂರವನ್ನು ಸಮುದ್ರ ಮಾರ್ಗದ ಮೂಲಕ 90 ಕಿಮೀ ದೂರಕ್ಕೆ ಇಳಿದಂತಾಗುತ್ತದೆ. ಮತ್ತು 2 ಗಂಟೆ ಗಳಿಗೆ ತಗ್ಗಿದಂತಾಗುತ್ತದೆ.

ನೌಕೆಯ ಬಲ?
30- ಟ್ರಕ್‌
100- ಕಾರುಗಳು
500- ಪ್ರಯಾಣಿಕರು
34- ನೌಕೆಯ ಸಿಬಂದಿ ಇರುವ ಸಾಮರ್ಥ್ಯ
03 – ದಿನಕ್ಕೆ ಮೂರು ಬಾರಿ ಸಂಚಾರ
5 ಲಕ್ಷ – ವಾರ್ಷಿಕವಾಗಿ ಸಂಚರಿಸುವ ಪ್ರಯಾಣಿಕರು
50 ಸಾವಿರ- ದ್ವಿಚಕ್ರ ವಾಹನಗಳು
30 ಸಾವಿರ- ಟ್ರಕ್‌ಗಳು

Advertisement

Udayavani is now on Telegram. Click here to join our channel and stay updated with the latest news.

Next