Advertisement

ಏರ್‌ಬಸ್‌ನ ಹೊಸ ವಿಮಾನಕ್ಕೆ ಸಂಸ್ಕೃತ ಹೆಸರು

12:00 PM Feb 06, 2018 | Team Udayavani |

ಹೊಸದಿಲ್ಲಿ: ಐರೋಪ್ಯ ಒಕ್ಕೂಟದ ವಿಮಾನಯಾನ ಸಂಸ್ಥೆ ಏರ್‌ಬಸ್‌ ಸ್ವಯಂಚಾಲಿತವಾಗಿ (ಸೆಲ್ಫ್ ಪೈಲಟೆಡ್‌) ಚಲಿಸುವ ವಿಮಾನಕ್ಕೆ ಸಂಸ್ಕೃತ ಪದ “ವಾಹನ’ ಎಂದು ನಾಮಕರಣ ಮಾಡಲಿದೆ. ಕಳೆದ ತಿಂಗಳ 31ರಂದು ಅಮೆರಿಕದ ಆರ್ಗನ್‌ನಲ್ಲಿ ಮೊದಲ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ನಗರ ಪ್ರದೇಶಗಳಲ್ಲಿ ಸುಗಮವಾಗಿ ವಿಮಾನ ಸಂಚಾರ ನಡೆಸುವುದಕ್ಕಾಗಿ (ವರ್ಟಿಕಲ್‌ ಟೇಕಾಫ್ ಆ್ಯಂಡ್‌ ಲ್ಯಾಂಡಿಂಗ್‌-ವಿಟಿಒಎಲ್‌) ಹೊಸ ಮಾದರಿಯ ವಿಮಾನ ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. 2016ರಲ್ಲಿ ಈ ಯೋಜನೆಯನ್ನು ಸಂಸ್ಥೆ ಕೈಗೆತ್ತಿಕೊಂಡಿತು. ಅದರ ವಿಶೇಷತೆ ಏನೆಂದರೆ ರನ್‌ ವೇ ಅಗತ್ಯವೇ ಇಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next