Advertisement

Cricket: ದ. ಆಫ್ರಿಕಾ ಟೆಸ್ಟ್‌  ತಂಡಕ್ಕೆ ಹೊಸ ರೂಪ

11:41 PM Jan 16, 2024 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡಕ್ಕೆ ಹೊಸ ರೂಪ ನೀಡಲಾಗಿದೆ. 2 ಪಂದ್ಯಗಳ ಸರಣಿಗಾಗಿ ಮುಂದಿನ ತಿಂಗಳು ನ್ಯೂಜಿಲ್ಯಾಂಡ್‌ಗೆ ಪ್ರವಾಸಗೈಯಲಿರುವ ಈ ತಂಡದಲ್ಲಿ ಬಹುತೇಕ ಹೊಸಬರೇ ತುಂಬಿದ್ದಾರೆ. ನೀಲ್‌ ಬ್ರ್ಯಾಂಡ್‌ ನಾಯಕರಾಗಿದ್ದಾರೆ. ಖಾಯಂ ಕ್ರಿಕೆಟಿಗರೆಲ್ಲ “ಎಸ್‌ಎ20′ ಸರಣಿಯಲ್ಲಿ ಆಡಲು ತವರಲ್ಲೇ ಉಳಿದುಕೊಳ್ಳಲಿದ್ದಾರೆ.
ಇದು ಅತ್ಯಂತ ದುರ್ಬಲ ತಂಡ ಎಂಬ ಸಾರ್ವತ್ರಿಕ ಟೀಕೆಗೆ ಒಳಗಾಗಿದ್ದರೂ “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಈ ಆಯ್ಕೆಯನ್ನು ಸಮರ್ಥಿಸಿಕೊಂಡಿದೆ.

Advertisement

ದಕ್ಷಿಣ ಆಫ್ರಿಕಾ ತಂಡ
ನೀಲ್‌ ಬ್ರ್ಯಾಂಡ್‌ (ನಾಯಕ), ಡೇವಿಡ್‌ ಬೆಡಿಂಗ್‌ಹ್ಯಾಮ್‌, ರುವಾನ್‌ ಡಿ ಸ್ವಾರ್ಟ್‌, ಕ್ಲೈಡ್‌ ಫಾರ್ಟಿನ್‌, ಜುಬೇರ್‌ ಹಮ್ಜಾ, ಶೆಪೊ ಮೊರೆಕಿ, ಎಡ್ವರ್ಡ್‌ ಮೂರ್‌, ಮಿಲಾಲಿ ಎಂಪೊಗ್ವಾನ, ಡ್ನೂನ್‌ ಒಲಿವರ್‌, ಡೇನ್‌ ಪೀಟರ್‌ಸನ್‌, ಕೀಗನ್‌ ಪೀಟರ್‌ಸನ್‌, ಡೇನ್‌ ಪೀಟ್‌, ರೆನಾರ್ಡ್‌ ವಾನ್‌ ಟೊಂಡರ್‌, ಶಾನ್‌ ವನ್‌ ಬರ್ಗ್‌, ಖಯ ಝೊಂಡೊ.

Advertisement

Udayavani is now on Telegram. Click here to join our channel and stay updated with the latest news.

Next