ಬೆಂಗಳೂರು: ಗುಣಮಟ್ಟ ಹಾಗೂ ಅತ್ಯುತ್ತಮ ವಿನ್ಯಾಸದ ಆಭರಣಗಳಿಗೆ ಪ್ರಸಿದ್ಧವಾಗಿರುವ ಸ್ವರ್ಣ ಜ್ಯುವೆಲ್ಲರಿ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ನೂತನ ಮಳಿಗೆ ಆರಂಭಿಸಿದೆ. ಕೋರಮಂಗಲ 6ನೇ ಬ್ಲಾಕ್‌ನಲ್ಲಿರುವ ನೂತನ ಮಳಿಗೆಯನ್ನು ಸ್ವರ್ಣ ಜ್ಯುವೆಲ್ಲರಿ ಸಂಸ್ಥೆಯ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದರು.
ಗುಣಮಟ್ಟ ಹಾಗೂ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವ ಮೂಲಕ ಸಂಸ್ಥೆ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ. ಜತೆಗೆ ಅತ್ಯುತ್ತಮ ವಿನ್ಯಾಸ, ಹೊಸ ಮಾದರಿಯೊಂದಿಗೆ ಪಾರಂಪರಿಕ ಆಭರಣಗಳನ್ನು ಸಹ ಸಂಸ್ಥೆ ಹೊಂದಿದ್ದು, ಸಂಸ್ಥೆಯಲ್ಲಿರುವ ವಿನ್ಯಾಸಗಳು ಜನರನ್ನು ಸೆಳೆಯಲಿವೆ ಎಂದು ಹೇಳಿದರು.
ಸಂಸ್ಥೆಯು ಗ್ರಾಹಕರು ಅಪೇಕ್ಷಿಸುವ ವಿನ್ಯಾಸದಲ್ಲಿಯೂ ಆಭರಣಗಳನ್ನು ತಯಾರಿಸಿ ಕೊಡಲಾಗುತ್ತಿದ್ದು, ಗ್ರಾಹಕರು ಆನ್‌ಲೈನ್ ಮೂಲಕ ತಮ್ಮ ಆಭರಣಗಳ ಕೆಲಸದ ಪ್ರಗತಿಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಸಂಸ್ಥೆಯು ಉಡುಪಿ, ಮಂಗಳೂರು, ಶಿರಸಿ, ಧಾರವಾಡ, ಹುಬ್ಬಳಿಯಲ್ಲಿ ತನ್ನ ಮಳಿಗೆಗಳನ್ನು ಆರಂಭಿಸಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಕರಾವಳಿ ಕರ್ನಾಟಕದ ಅತಿ ಹಳೆಯ ಬಿಐಎಸ್ ಹಾಲ್‌ಮಾರ್ಕ್ ಹೊಂದಿರುವ ಎರಡು ಸಂಸ್ಥೆಗಳಲ್ಲಿ ಸ್ವರ್ಣ ಸಂಸ್ಥೆ ಸಹ ಒಂದಾಗಿದ್ದು, ಚಿನ್ನ, ಬೆಳ್ಳಿಯ ಪೂಜಾ ಸಾಮಗ್ರಿಗಳು, ದೈವ-ದೇಗುಲಕ್ಕೆ ಸಂಬಂಧಿಸಿದ ಸಾಮಗ್ರಿಗಳು ಪ್ರದರ್ಶನಕ್ಕಿಡಲಾಗಿದೆ. ಜತೆಗೆ ಮಳಿಗೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳೊಂದಿಗೆ ವಜ್ರದ ಹರಳುಗಳನ್ನು ಒಳಗೊಂಡ ಚಿನ್ನದ ಆಭರಣಗಳನ್ನು ಮಾಡಿಕೊಡಲಾಗುತ್ತದೆ ಎಂದರು. ಮಳಿಗೆ ಉದ್ಘಾಟನೆಯ ವೇಳೆ ಗುಜ್ಜಾಡಿ ರಘುವೀರ ನಾಯಕ್, ಗುಜ್ಜಾಡಿ ರಾಮದಾಸ ನಾಯಕ್ ಸೇರಿದಂತೆ ಕುಟುಂಬ ವರ್ಗದವರು ಹಾಜರಿದ್ದರು.