Advertisement

ಬರಲಿದೆ ಹೊಸ ಪೀಳಿಗೆ ಬ್ರಹ್ಮೋಸ್‌

06:24 AM Feb 23, 2019 | |

ಬೆಂಗಳೂರು: ಭಾರತದ ರಕ್ಷಣಾ ವಲಯಕ್ಕೆ ದೊಡ್ಡ ಶಕ್ತಿಯಾಗಿರುವ ಬ್ರಹ್ಮೋಸ್‌ ಕ್ಷಿಪಣಿಯನ್ನು ಹೊಸ ಪೀಳಿಗೆಗೆ ಅನುಗುಣವಾಗಿ ಉನ್ನತೀಕರಿಸಲು ಬ್ರಹ್ಮೋಸ್‌ ಏರೋಸ್ಪೇಸ್‌ ಮುಂದಾಗಿದೆ. ಭಾರತೀಯ ಭೂಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗೆ ಉಪಯೋಗವಾಗುವ ಮತ್ತು ಸಮುದ್ರ, ಭೂ ಪ್ರದೇಶದಲ್ಲಿರುವ ಶತ್ರುಗಳನ್ನು ಹೊಡೆದುರುಳಿಸಲು ಬ್ರಹ್ಮೋಸ್‌ ಸಹಕಾರಿಯಾಗಲಿದೆ.

Advertisement

ಅತ್ಯಂತ ನಿಖರ ಹಾಗೂ ವೇಗವಾಗಿ ಗುರಿ ತಲುಪಬಲ್ಲ ಬ್ರಹ್ಮೋಸ್‌ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಬ್ರಹ್ಮೋಸ್‌ ಏರೋಸ್ಪೇಸ್‌ ಚಿಂತನೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ  “ಬ್ರಹ್ಮೋಸ್‌ ನ್ಯೂ ಜನರೆಷನ್‌’  ಸಿದ್ಧಪಡಿಸಲು ಬೇಕಾದ ತಯಾರಿ ನಡೆಸುತ್ತಿದ್ದಾರೆ. ಈಗ ಭೂ ಮತ್ತು ನೌಕಾ ಸೇನೆಯಲ್ಲಿ ಬಳಸುತ್ತಿರುವ ಬ್ರಹ್ಮೋಸ್‌ 290 ಕಿ.ಮೀ.ವರಗೂ ಸಾಗಲಿದೆ.

ವೇಗವು ಪ್ರತಿ ಸೆಕೆಂಡ್‌ಗೆ 1 ಕಿ.ಮೀ ಆಗಿರತ್ತದೆ. 200ರಿಂದ 300 ಕೆ.ಜಿ. ಶಸ್ತ್ರಾಸ್ತ್ರ ಹೊಂದಿರುತ್ತದೆ. 9 ಸಾವಿರ ಮಿಲಿ ಮೀಟರ್‌ ಹಾಗೂ 700 ಮಿಲಿ ಮೀಟರ್‌ ಉದ್ದ ಮತ್ತು ಅಗಲ ಇರಲಿದ್ದು, 3 ಸಾವಿರ ಕೆ.ಜಿ ತೂಕ ಹೊಂದಿದೆ. ಹಾಗೇ ವಾಯು ಸೇನೆಗೆ ಬಳಸುವ ಬ್ರಹ್ಮೋಸ್‌ 290 ಕಿ.ಮೀ ಕ್ರಮಿಸಬಲ್ಲದ್ದಾಗಿದೆ. ವೇಗವು ಪ್ರತಿ ಸೆಕೆಂಡ್‌ಗೆ 1 ಕಿ.ಮೀ ಇರುತ್ತದೆ.

8500 ಮಿ.ಮೀ ಹಾಗೂ 650 ಮಿ.ಮೀ ಉದ್ದ ಮತ್ತು ಅಗಲ ಇರುತ್ತದೆ. 2550 ಕೆ.ಜಿ ತೂಕ ಹೊಂದಿದೆ. ಭೂ ಮತ್ತು ನೌಕಸೇನೆಯ ಬ್ರಹ್ಮೋಸ್‌ ಮಿಸೈಲ್‌ಗೆ ಹೋಲಿಸಿದರೆ, ವಾಯುಸೇನೆಗೆ ಬಳಸಲು ಬ್ರಹ್ಮೋಸ್‌ ಮಿಸೈಲ್‌ನ ತೂಕವು ಸ್ವಲ್ಪ ಕಡಿಮೆ ಇರುತ್ತದೆ.

ಬ್ರಹ್ಮೋಸ್‌ ನ್ಯೂ ಜನರೇಷನ್‌ ಮಿಸೈಲ್‌ ಕೇವಲ 1.6 ಮೀಟರ್‌ ಇರಲಿದ್ದು, ಸುಲಭವಾಗಿ ಕೊಂಡೊಯ್ಯಲು ಇದು ಸಹಕಾರಿಯಾಗಲಿದೆ. ವೇಗವೂ ಕೂಡ ಹೆಚ್ಚಾಗಲಿದೆ. ಪ್ರತಿ ಸೆಕೆಂಡ್‌ಗೆ 1.4 ಕಿ.ಮೀ ವೇಗದಲ್ಲಿ ಕ್ರಮಿಸಲಿದೆ. ಈಗ ಇರುವ ಬ್ರಹ್ಮೋಸ್‌ ಮಿಸೈಲ್‌ 3 ಸಾವಿರ ಕೆ.ಜಿ ಇದ್ದು, ಹೊಸ ಮಿಸೈಲ್‌ ತೂಕ ಒಂದೂವರೆ ಸಾವಿರ ಕೆ.ಜಿ.ಗೆ ಇಳಿಯಲಿದೆ.

Advertisement

ಶಸ್ತ್ರಾಸ್ತ್ರ ಸಾಮರ್ಥ್ಯ ಇನ್ನಷ್ಟು ಉನ್ನತೀಕರಿಸಿ, ಹೆಚ್ಚು ಬಲ ತುಂಬಲಿದ್ದೇವೆ. ಉತ್ಪಾದನಾ ಪ್ರಕ್ರಿಯೆ ಆರಂಭವಾದರೆ ಪೂರ್ಣಗೊಳ್ಳಲು ಕನಿಷ್ಠ ಮೂರು ವರ್ಷ ಬೇಕಾಗುತ್ತದೆ ಎಂದು ಬ್ರಹ್ಮೋಸ್‌ ಏರೋಸ್ಪೇಸ್‌ ಮಾರುಕಟ್ಟೆ ವಿಭಾಗದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಪಾಠಕ್‌ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರವು ನೀಡುವ ಆದೇಶ ಹಾಗೂ ಬೇಡಿಕೆಗೆ ಅನುಗುಣವಾಗಿ ಮಿಸೈಲ್‌ ಸಿದ್ಧಪಡಿಸುತ್ತೇವೆ. ಕೇಂದ್ರ ಸರ್ಕಾರ ಒಪ್ಪಿಗೆ ಪಡೆದು, ಮಿತ್ರ ರಾಷ್ಟ್ರಗಳಿಗೂ ರಫ್ತು ಮಾಡುವ ವ್ಯವಸ್ಥೆ ಇದೆ. ಆದರೆ, ಇದರ ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಉತ್ಪಾದಿಸಿ ನೀಡುತ್ತೇವೆ. ಮಧ್ಯ ಏಷ್ಯಾ, ದಕ್ಷಿಣ ಆಫ್ರಿಕಾ ಮೊದಲಾದ ಕಡೆಗಳಲ್ಲಿ ನಮ್ಮ ಮಿತ್ರ ರಾಷ್ಟ್ರಗಳು ಇವೆ ಎಂದರು ಹೇಳಿದರು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next