Advertisement

ವಿನೂತನ ಪ್ರಯೋಗ ಹುಣ್ಣಿಮೆ ತಾಳಮದ್ದಳೆ

11:03 PM Mar 28, 2019 | mahesh |

ಯಕ್ಷರಂಗದಲ್ಲಿ ವಿನೂತನ ಪ್ರಯೋಗವಾದ ಹುಣ್ಣಿಮೆ ತಾಳಮದ್ದಳೆ ಕೂಟ ಇತ್ತೀಚೆಗೆ ಮೂಡಬಿದಿರೆಯ ಕೆರೆಪಾದೆಯಲ್ಲಿ ಪ್ರಸ್ತುತಿಗೊಂಡಿತು . ಯಕ್ಷಗಾನದಲ್ಲಿ ಈ ಹಿಂದೆ ಜರುಗುತ್ತಿದ್ದ ದೊಂದಿ ಬೆಳಕಿನ ಆಟ , ಅಟ್ಟಳಿಗೆ ಆಟ ಮುಂತಾದ ಪ್ರಯೋಗಗಳು ಪುನರ್‌ ಪ್ರದರ್ಶಿತಗೊಂಡಿವೆ . ಆದರೆ ಚಂದಿರನ ಬೆಳಕಿನಲ್ಲಿ ತಾಳಮದ್ದಳೆ ಕೂಟ ಪ್ರದರ್ಶನಗೊಂಡಿರುವುದು ಇತ್ತೀಚಿನ ದಿನಗಳಲ್ಲಿ ಹೊಸ ಪ್ರಯೋಗವೆನ್ನಬಹುದು . ಇದನ್ನು ಪ್ರಸ್ತುತಿ ಮಾಡಿದ್ದು ಮೂಡಬಿದಿರೆಯ ಯಕ್ಷೊàಪಾಸನಮ್‌ ಬಳಗದವರು.

Advertisement

ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರಿಂದ 2013 ರಲ್ಲಿ ಉದ್ಘಾಟಿಸಲ್ಪಟ್ಟ ಯಕ್ಷೊಪಾಸನಮ್‌ ಸಂಘ ಆರು ವರ್ಷಗಳಿಂದ ಯಕ್ಷಗಾನೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಹುಣ್ಣಿಮೆಯ ತಾಳಮದ್ದಳೆ ಕೂಟ ಮಾಡಬೇಕೆಂಬ ಕಲ್ಪನೆ ಮೂಡಿದಾಗ ಮೂಡಬಿದಿರೆಯ ಸಮೀಪದ ಕಲ್ಲಬೆಟ್ಟು ಸಮೀಪದ ಕೆರೆಪಾದೆಯ ಶ್ರೀ ಸತ್ಯನಾರಾಯಣ ಮಂದಿರ ಸೂಕ್ತವಾದ ಪ್ರದೇಶವೆಂದು ಕಂಡುಬಂತು. ರಾತ್ರಿಯಿಡೀ ಜರುಗುವ ತಾಳಮದ್ದಳೆ ಯಕ್ಷಸಂಗಮದ ಕೂಟ ಹೊರತುಪಡಿಸಿದರೆ ಬೇರೆಲ್ಲೂ ಇಲ್ಲ ಎಂಬ ಅಂಶವನ್ನು ಪರಿಗಣಿಸಿ , ಕೇವಲ ಸಂಘದ ಸದಸ್ಯರನ್ನೇ ಬಳಸಿ ರಾತ್ರಿ 10 ರಿಂದ ಬೆಳಗ್ಗಿನ ಜಾವ ಪರ್ಯಂತ ಕೂಟ ನೆರವೇರಿತು .

ಶನೀಶ್ವರ ಮಹಾತ್ಮೆ – ಇಂದ್ರಜಿತು ಕಾಳಗ ಪ್ರಸಂಗವು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು . ಶನೀಶ್ವರ ಮಹಾತ್ಮೆ ಪ್ರಸಂಗ 3.30 ರ ತನಕ ಪ್ರಸ್ತುತಿಗೊಂಡರೆ , ಇಂದ್ರಜಿತು ಕಾಳಗ ಮುಂಜಾವು 6.00 ರ ತನಕ ಪ್ರದರ್ಶಿತವಾಯಿತು .

ಯಾವುದೇ ವೃತ್ತಿಪರ ಕಲಾವಿದರನ್ನು ಬಳಸದೆ ಸಂಘದ ಸದಸ್ಯರೇ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದರೂ ವೃತ್ತಿಪರ ಕಲಾವಿದರ ಮಟ್ಟದಷ್ಟೇ ನಿರ್ವಹಣೆ ನೀಡಿದ್ದು ವಿಶೇಷ . ಕಲಾವಿದರೆಲ್ಲರೂ ಹವ್ಯಾಸಿಗಳಾದ ಕಾರಣ ಬೆಳಿಗ್ಗೆಯ ತನಕ ಕೂಟ ಮುಂದುವರಿದೀತಾ ಎಂಬ ಕುತೂಹಲ ಪ್ರೇಕ್ಷಕರಲ್ಲಿತ್ತು . ಕಲಾವಿದರು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ . ಸುಮಾರು 20 ರಷ್ಟು ಕಲಾವಿದರು ಮುಂಜಾವಿನ ತನಕದ ಕಾರ್ಯಕ್ರಮ ನಡೆಸಿ ತಮ್ಮಲ್ಲೂ ಪ್ರತಿಭೆಯಿದೆ ಎಂದು ಶ್ರುತಪಡಿಸಿದರು.

ವೇದಿಕೆಯಲ್ಲಿ ಕೇವಲ ಕಮ್ಮಿ ವೋಲ್ಟೆಜ್‌ನ ಒಂದು ದೀಪ ಮಾತ್ರ ಬಳಸಲಾಗಿತ್ತು . ಅದೂ ಕೇವಲ ಕಲಾವಿದರ ಮುಖ ಕಾಣಲಿ ಎಂಬ ಉದ್ದೇಶಕ್ಕೆ . ಎರಡು ಎಣ್ಣೆಯ ನಂದಾದೀಪಗಳ ಬೆಳಕು ಹಾಗೂ ಹುಣ್ಣಿಮೆಯ ಪೂರ್ಣಚಂದ್ರನ ಬೆಳಕಿನಲ್ಲಿ ತಾಳಮದ್ದಳೆ ಕೂಟ ನಡೆಯಿತು . ಇದು ಪ್ರೇಕ್ಷಕರಿಗೂ ಒಂದು ಹೊಸ ಅನುಭವ ನೀಡಿತು . ಈ ವಿನೂತನ ಪ್ರಯೋಗ ವೀಕ್ಷಿಸಲಿಕ್ಕಾಗಿಯೇ ಬಂದಿದ್ದ ಮೂಡುಬಿದಿರೆ ಪರಿಸರದ ನೂರಾರು ಪ್ರೇಕ್ಷಕರು ಬೆಳಗಿನ ತನಕ ತಾಳಮದ್ದಳೆ ಆಸ್ವಾದಿಸಿದ್ದು ಈ ಪರಿಕಲ್ಪನೆಯ ಯಶಸ್ಸಿಗೆ ಸಾಕ್ಷಿಯಾಯಿತು . ಹುಣ್ಣಿಮೆಯ ತಾಳಮದ್ದಳೆ ಕೂಟ ಎರಡು ಸಾಧ್ಯತೆಗಳನ್ನು ತೆರೆದಿಟ್ಟಿತು .

Advertisement

ಪ್ರೇಕ್ಷಕರು ಸಾಂಪ್ರದಾಯಿಕವಾದ ವಿನೂತನ ಪ್ರಯೋಗಗಳನ್ನು ಬೆಂಬಲಿಸುತ್ತಾರೆ ಎಂಬುದು ಒಂದಾದರೆ , ಹವ್ಯಾಸಿ ಕಲಾವಿದರಿಗೂ ಬೆಳಿಗ್ಗಿನ ತನಕ ಕೂಟವನ್ನು ಪ್ರಸ್ತುತಪಡಿಸುವ ಸಾಮರ್ಥ್ಯವಿದೆ ಎಂಬುದು ಇನ್ನೊಂದು . ಸಂಪಿಗೆ ಮಾಧವ ಆಚಾರ್ಯ , ಡಾ| ಪದ್ಯಾಣ , ಎರ್ಮಾಳು , ತುಳುಪುಳೆ , ಭರತ್‌ , ದೇವಾನಂದ್‌ , ರವಿಪ್ರಸಾದ್‌ , ಆದಿತ್ಯ , ಕಾರ್ತಿಕ್‌ ಮುಂತಾದವರು ಹಿಮ್ಮೇಳದಲ್ಲೂ ದಾಮೋದರ ಸಫ‌ಲಿಗ , ಡಾ| ಗಾಳಿಮನೆ , ಕೆರೆಗ¨ªೆ , ರಜನೀಶ ಹೊಳ್ಳ , ಎಂ.ಶಾಂತರಾಮ ಕುಡ್ವ , ಬಾಲಕೃಷ್ಣ ಭಟ್‌ , ಗುರುಪ್ರಸಾದ್‌ ಮಡಿಕೇರಿ , ಸುನೀಲ್‌ ಹೊಲಾಡು , ಮಾಯಣ , ಅಭ್ಯಂಕರ್‌ , ವಿಶ್ವನಾಥ ಭಟ್‌ರ ಜೊತೆಗೆ ಮಹಿಳಾ ಕಲಾವಿದರಾದ ಡಾ|ಸುಲತಾ , ಡಾ|ಜ್ಯೋತಿ ರೈ , ಶಾಲಿನಿ , ಸಂಗೀತಾ ಪ್ರಭುರವರು ಅರ್ಥಗಾರಿಕೆಯಲ್ಲಿ ಭಾಗವಹಿಸಿದರು .

ಎಂ.ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next