ಕುಣಿಗಲ್: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವಿಗೀಡಾಗಿದ್ದಾಳೆಂದು ಆರೋಪಿಸಿ ಸಂಬಂಧಿಕರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಒಂದನೇ ವಾರ್ಡ್‌ನ ಬಿದನಗೆರೆ ವಾಸಿ ಗಂಗಸ್ವಾಮಿ ಅವರ ಪತ್ನಿ ಸಾವಿತ್ರಮ್ಮ(32) ಮೃತ ಮಹಿಳೆ.
ತಾಲೂಕಿನ ತೋಪೇಗೌಡನ ಪಾಳ್ಯ ಗ್ರಾಮದ ರಾಮಣ್ಣ, ಲಕ್ಷ್ಮೀ ದೇವಿ ದಂಪತಿಯ ಮಗಳಾದ ಸಾವಿತ್ರಮ್ಮಳನ್ನು ಬಿದನಗೆರೆ ಗ್ರಾಮದ ಜಯರಾಮಯ್ಯ, ನಾಗಮ್ಮ ದಂಪತಿಗಳ ಮಗನಾದ ಗಂಗಸ್ವಾಮಿಯೊಂದಿಗೆ ಕಳೆದ 9 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು.
ಸಾವಿತ್ರಮ್ಮ ತನ್ನ ಪ್ರಥಮ ಹೆರಿಗೆಗಾಗಿ ಸೋಮವಾರ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯ
ಲೋಕೇಶ್ ಸಿಸೇರಿಯನ್ ಮೂಲಕ ಹೆರಿಗೆ ಮಾಡಿದ್ದಾರೆ. ಈ ಸಮಯದಲ್ಲಿ ಸಾವಿತ್ರಮ್ಮಳ ಸ್ಥಿತಿ ಚಿಂತಾ ಜನಕವಾಗಿದೆ,
ಸ್ವತಃ ವೈದ್ಯ ಲೋಕೇಶ್ ಅವರೇ ತಕ್ಷಣ ಆದಿಚುಂಚನಗಿರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಸಾವಿತ್ರಮ ಮೃತಪಟ್ಟಿದ್ದಾರೆ.
ಆಕ್ರೋಶಗೊಂಡ ಮೃತ ಸಾವಿತ್ರಮ್ಮಳ ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಅವರಣ ದಲ್ಲಿ ಜಮಾವಣೆಗೊಂಡು ವೈದ್ಯರ
ವಿರುದ್ಧ ಆಕೋಶಗೊಂಡು ಪ್ರತಿಭಟನೆ ನಡೆಸಿದರು. ವೈದ್ಯ ಲೋಕೇಶ್ ಅವರು ಸರಿಯಾಗಿ ಚಿಕಿತ್ಸೆ ನೀಡದೇ ಸಾವಿತ್ರಮ್ಮಳ ಸಾವಿಗೆ ಕಾರಣರಾಗಿದ್ದಾರೆ.
ನಿರ್ಲಕ್ಷ್ಯ ತೋರಿರುವ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮೃತ ಬಾಣಂತಿ ಸಾವಿತ್ರಮ್ಮಳ ಸೋದರ ಕೆ.ಜಿ.ಗೌಡ ಆರೋಪಿಸಿದರು. ಅಂತಿಮ ವಾಗಿ ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನವಾಗಿ ವೈದ್ಯರ ವಿರುದ್ಧ ಸಂಬಂಧಿಕರು ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸ್ ಪಡೆಯಲಾಯಿತು