Advertisement

ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಪ್ರಯತ್ನ ಅಗತ್ಯ

12:31 PM Feb 14, 2017 | |

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮ್ಯಾರಥಾನ್‌ಗೆ ಸಿದ್ಧವಾಗುವಂತೆ ದೀರ್ಘ‌ ಕಾಲದ ಪ್ರಯತ್ನ ನಡೆಸಬೇಕು. ಯಾವುದೇ ಪೂರ್ವ ತಯಾರಿ ಇಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬಾರದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್‌ ಹೇಳಿದರು.

Advertisement

ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಐಎಎಸ್‌, ಐಪಿಎಸ್‌ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಐಎಎಸ್‌, ಐಪಿಎಸ್‌ ಅಧಿಕಾರಿಗಳ ಆಯ್ಕೆ ಯಲ್ಲಿ ಸರ್ಕಾರಗಳ ಪಾತ್ರ ಇರುವು ದಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಯುಪಿ ಎಸ್‌ಸಿಯಲ್ಲಿ ಆಯ್ಕೆಯ ವಿಧಾನ ಪಾರದರ್ಶಕ ವಾಗಿರುತ್ತದೆ. ಎಂಜಿನಿಯರಿಂಗ್‌, ಮೆಡಿಕಲ್‌ ಮಾಡಿರುವವರಿಗೆ ಯುಪಿ ಎಸ್‌ಸಿ ಪರೀಕ್ಷೆ ಸುಲಭ ಎಂದು ಕೆಲವರು ಹೇಳುತ್ತಾರೆ. ಆದರೆ, ಈ ಪರೀಕ್ಷೆ ಯಾರಿಗೂ ಸುಲಭವಲ್ಲ. ಕಲಾ, ವಾಣಿಜ್ಯ, ಸೇರಿದಂತೆ ಎಲ್ಲಾ ವಿಭಾಗ ದವರೂ ಪರೀಕ್ಷೆ ಎದುರಿಸಬಹುದು.

ಯುಜಿಸಿಯಿಂದ ಮಾನ್ಯತೆ ಪಡೆದ ವಿವಿಯಿಂದ ಪದವಿ ಪಡೆದಿರಬೇಕು. ಚಿನ್ನದ ಪದಕ ವಾಗಲಿ, ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗುವುದಾಗಲಿ ಬೇಕಿಲ್ಲ ಎಂದರು. ಸ್ಪರ್ಧಾತ್ಮಕ ಪರೀಕ್ಷೆ 100 ಮೀ. ಓಟವಲ್ಲ, ಬಹುದೂರ ಸಾಗುವ ಮ್ಯಾರಥಾನ್‌ನಂತೆ ವರ್ಷಗಟ್ಟಲೆ ತಯಾರಿ ಮಾಡಿಕೊಳ್ಳಬೇಕು. ತಯಾರಿ ನಡೆಸದೆ ಪರೀಕ್ಷೆ ತೆಗೆದುಕೊಂಡು ಪ್ರಯತ್ನ ಹಾಳು ಮಾಡಿಕೊಳ್ಳಬಾರದು. ಪರೀಕ್ಷೆ ತೆಗೆದುಕೊಳ್ಳಲು ಆರು ಬಾರಿ ಅವಕಾಶವಿದ್ದು, ನಿರಂತರ ಪ್ರಯತ್ನ ನಡೆಸಿ ಎಂದು ಸಲಹೆ ನೀಡಿದರು.

ಸರ್ಕಾರಿ ಸೇವೆಯಲ್ಲಿದ್ದುಕೊಂಡೆ ಸಮಾಜ ಸೇವೆ ಮಾಡಬೇಕೆಂದೇನೂ ಇಲ್ಲ. ಸರ್ಕಾರಿ ಸೇವೆಯಲ್ಲಿದ್ದರೆ ನಿರ್ಧಾರಗಳನ್ನು ತೆಗೆದು ಕೊಳ್ಳುವ ಅಧಿಕಾರವಿರುತ್ತದೆ. ದೇಶ ಸೇವೆಗೆ ಅತೀ ಬುದ್ಧಿವಂತರು ಬೇಕಿಲ್ಲ. ದೇಶದ ಬಗ್ಗೆ ಅರಿವಿರುವ, ತಮ್ಮನ್ನು ಸಮಾಜ ಸೇವೆಗೆ ತೊಡಗಿಸಿಕೊಳ್ಳುವ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಮನಸ್ಸಿರುವ, ಸರ್ಕಾರಿ ಕೆಲಸಗಳನ್ನು ಸರಿಯಾಗಿ ಅನುಷ್ಠಾನ ಗೊಳಿಸುವವರು ಅಗತ್ಯ ಎಂದರು.

Advertisement

ಅಭಿವೃದ್ಧಿ ಕಾರ್ಯಕ್ಕೆ ಹಣಕ್ಕಿಂತ ಮುಖ್ಯ ವಾಗಿ ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಇರಬೇಕಾಗುತ್ತದೆ. ನಾಗಾ ಲ್ಯಾಂಡ್‌ನ‌ಲ್ಲಿ ಐಎಎಸ್‌ ಅಧಿಕಾರಿಯಾಗಿ ಆಯ್ಕೆಯಾದ ಆರ್ಮ್ಸ್ಟ್ರಾಂಗ್‌ ಎಂಬುವರು ಸರ್ಕಾರದ ಅನುದಾನ ಬಳಸಿಕೊಳ್ಳದೆ ಸಾರ್ವಜನಿಕರ ಸಹಾಯ ಪಡೆದು 100 ಕಿ.ಮೀ ರಸ್ತೆಯನ್ನೇ ನಿರ್ಮಿಸಿದ್ದಾರೆ. ಅಂತಹ ಸೇವಾ ಮನೋಭಾವ ಸರ್ಕಾರಿ ಅಧಿಕಾರಿ ಯಾಗುವವರಲ್ಲಿ ಇರಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಲಕ್ಷ್ಮೀ, ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಮೊಹಮ್ಮದ್‌ ಸುಜಿತ, ಅರುಣಾಂಶು ಗಿರಿ, ಧಾರಕೇಶ್‌, ನೇಹಾ ಸಿಂಗ್‌ ಇನ್ನಿತರರು ಭಾಗವಹಿಸಿದ್ದರು.

ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಅನುಕೂಲಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಾಗಾರ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಜಿಲ್ಲೆಯ ವೆಬ್‌ಸೈಟ್‌ನಲ್ಲಿ ಹೊಸ ಬ್ಲಾಗ್‌ ಆರಂಭಿಸಿ ಅದರಲ್ಲೂ ಸಹ ಮಾಹಿತಿ ನೀಡಲಾಗುವುದು.
-ಡಿ.ರಂದೀಪ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next