ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಜೂನ್/ಜುಲೈ ತಿಂಗಳಲ್ಲಿ ನಡೆಸಿದ ಆರನೇ ಸೆಮಿಸ್ಟರ್‌ನ ಬಿಎ, ಬಿಎಸ್ಸಿ, ಬಿಕಾಂ, ಬಿಎಸ್‌ಡಬ್ಲ್ಯು , ಬಿಸಿಎ, ಬಿಬಿಎ, ಬಿಎಸ್ಸಿ (ಎಫ್‌ಎನ್‌ಡಿ), ಬಿಎಸ್ಸಿ (ಎನಿಮೇಶನ್ ಮತ್ತು ವಿಶ್ಯುವಲ್ ಎಫೆಕ್ಟ್ಸ್ ), ಬಿಎಸ್ಸಿ (ಫುಡ್ ಟೆಕ್ನಾಲಜಿ), ಬಿಎಸ್ಸಿ (ಹೋಮ್ ಸಯನ್ಸ್), ಬಿಎ (ಎಚ್‌ಆರ್‌ಡಿ), ಬಿಎಸ್ಸಿ (ಫ್ಯಾಷನ್ ಡಿಸೈನ್), ಬಿಎಸ್ಸಿ (ಐಡಿಆ್ಯಂಡ್‌ಡಿ), ಬಿವಿಎ ಕೋರ್ಸ್‌ಗಳ ಫಲಿತಾಂಶವನ್ನು ಆ.17ರಂದು ಯುಯುಸಿಎಂಎಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಪ್ರಕಟಿಸಲಾಗಿದೆ.
ಉಳಿದಂತೆ ಪದವಿ ಕೋರ್ಸ್‌ಗಳ ದ್ವಿತೀಯ, ಚತುರ್ಥ ಸೆಮಿಸ್ಟರ್ ಹಾಗೂ ಬಿಎಚ್‌ಎಂ, ಬಿಎಸ್ಸಿ (ಎಚ್‌ಎಸ್) ಮತ್ತು ಬಿಎ (ಎಸ್‌ಎಲ್‌ಪಿ)ಹಾಗೂ ನಾನ್ ಎನ್‌ಇಪಿ ಕೋರ್ಸ್‌ಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.
ಎಲ್ಲ ಸೆಮಿಸ್ಟರ್‌ಗಳ ಪರೀಕ್ಷೆಗಳು ಜೂ.24ರಂದು ಆರಂಭಗೊಂಡು ಜು.31ರಂದು ಅಂತ್ಯಗೊಂಡಿತ್ತು. ಜು.22 ರಿಂದಲೇ ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಆರಂಭಗೊಂಡು ಆ.14ಕ್ಕೆ ಮುಕ್ತಾಯಗೊಂಡಿತ್ತು. ಮಂಗಳೂರು ವಿಶ್ವವಿದ್ಯಾನಿಲಯವು ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತಃಖೀ¤àಕರಣ ದಾಖಲಿಸುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಮಾಡಿ, ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ಮುಗಿದ ಮೂರು ದಿನಗಳಲ್ಲಿಯೇ ಮತ್ತು ಪರೀಕ್ಷೆ ಪೂರ್ಣಗೊಂಡ 17 ದಿನಗಳಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
6ನೇ ಸೆಮಿಸ್ಟರ್ ಫಲಿತಾಂಶದ ವಿವರ
6ನೇ ಸೆಮಿಸ್ಟರ್‌ನ ವಿವಿಧ ಕೋರ್ಸ್ ಗಳಿಗೆ ಒಟ್ಟು 19,130 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 18,712 ಮಂದಿ ಉತ್ತೀರ್ಣರಾಗಿದ್ದಾರೆ. ಬಿಎ-ಎಚ್‌ಆರ್‌ಡಿ ಪರೀಕ್ಷೆಗೆ ಹಾಜರಾದ 59 ಮಂದಿಯಲ್ಲಿ 58 ಮಂದಿ ಉತ್ತೀರ್ಣ. ಬಿಎ -2524ರಲ್ಲಿ 2291 ಮಂದಿ ಉತ್ತೀರ್ಣ.
ಬಿಬಿಎ -1814ರಲ್ಲಿ 1784, ಬಿಕಾಂ-9947ರಲ್ಲಿ 9890, ಬಿಸಿಎ-2695ರಲ್ಲಿ 2648, ಬಿಎಸ್ಸಿ-1360ರಲ್ಲಿ 1338, ಬಿಎಸ್ಸಿ ಹೋಮ್ ಸಯನ್ಸ್ -8ರಲ್ಲಿ 8, ಬಿಎಸ್‌ಡಬ್ಲ್ಯು – 181ರಲ್ಲಿ 181, ಬಿಎಸ್ಸಿ (ಆ್ಯನಿಮೇಶನ್ ಮತ್ತು ವಿಶ್ಯುವಲ್
ಎಫೆಕ್ಟ್ Õ) – 61ರಲ್ಲಿ 61, ಬಿಎಸ್ಸಿ (ಫ್ಯಾಷನ್ ಆ್ಯಂಡ್ ಎಪಿಯರಲ್ ಡಿಸೈನ್-82ರಲ್ಲಿ 62, ಬಿಎಸ್ಸಿ (ಫ್ಯಾಷನ್ ಡಿಸೈನ್)- 17ರಲ್ಲಿ 17, ಬಿಎಸ್ಸಿ (ಫುಡ್ ನ್ಯೂಟ್ರೀಷನ್ ಆ್ಯಂಡ್ ಡಯೆಟಿಕ್ಸ್)- 104ರಲ್ಲಿ 104, ಬಿಎಸ್ಸಿ (ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೋರೇಷನ್)- 139ರಲ್ಲಿ 137, ಬಿಎಸ್ಸಿ (ಫುಡ್ ಟೆಕ್ನಾಲಜಿ ) – 98ರಲ್ಲಿ 97 ಮತ್ತು ಬಿಎಸ್ಸಿ ವಿಶ್ಯುವಲ್ ಆರ್ಟ್ಸ್ನಲ್ಲಿ 41ರಲ್ಲಿ 36 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.