Advertisement
ಪ್ರತಿಯೊಬ್ಬರ ಹೆಸರು ಮತದಾರ ಪಟ್ಟಿಯಲ್ಲಿ ಇರಬೇಕು. ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಈಗ ಏನು ಮಾಡಬೇಕು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ವ್ಯಥೆ ಪಡಬೇಡಿ. ಏಕೆಂದರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಏಪ್ರಿಲ್ 14ರವರೆಗೆ ಅವಕಾಶವಿದೆ. ಚಿಂತೆ ಬಿಡಿ ಫಾರಂ ಸಂಖ್ಯೆ 6 ಹಿಡಿದು ಹೆಸರು ಸೇರ್ಪಡೆ ಮಾಡಿ.
ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಾರಂ ಸಂಖ್ಯೆ 6ನ್ನು ಬಳಸಿ ಎರಡು ಕಲರ್ ಅಥವಾ ಕಪ್ಪು/ಬಿಳುಪು ಭಾವಚಿತ್ರವನ್ನು ಫಾರಂ 6 ನೊಂದಿಗೆ ಲಗತ್ತಿಸಿ ಜನ್ಮ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ಸೇರಿಸಿ (ನಗರ ಸಭೆಯಿಂದ ನೀಡಿದ ಜನ್ಮ ಪ್ರಮಾಣ ಪತ್ರ ಅಥವಾ ಮೆಟ್ರಿಕ್ಯುಲೇಶನ್ ದೃಢೀಕರಣ ಪತ್ರ ಅಥವಾ ಶಾಲೆ/ಕಾಲೇಜಿನಿಂದ ನೀಡಿದ ದೃಢೀಕರಣ ಪತ್ರ) ವಿಳಾಸ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ (ಬ್ಯಾಂಕ್ ಅಂಚೆ ಕಚೇರಿಯ ಪ್ರಸ್ತುತ ಪಾಸ್ ಬುಕ್, ಪಡಿತರ ಚೀಟಿ ಅಥವಾ ಡ್ರೈವಿಂಗ್ ಲೈಸನ್ಸ್ /ಆದಾಯ ತೆರಿಗೆ ನಿರ್ಧಾರಣ ಆದೇಶ ಅಥವಾ ಆ ವಿಳಾಸದ ಇತ್ತೀಚಿನ ನೀರು/ದೂರವಾಣಿ/ವಿದ್ಯುತ್ಛಕ್ತಿ /ಅಡುಗೆ ಅನಿಲ ಸಂಪರ್ಕದ ಬಿಲ್ (ಅರ್ಜಿದಾರ ಅಥವಾ ಆತ/ಆಕೆಯ ಹೆತ್ತವರ ವಿಳಾಸದಲ್ಲಿ ಇತ್ಯಾದಿ) ಅಥವಾ ಆ ವಿಳಾಸದ ಅರ್ಜಿದಾರ ಹೆಸರಿನಲ್ಲಿ ಅಂಚೆ ಇಲಾಖೆಯ ಸ್ವೀಕೃತ/ ಕಳುಹಿಸಿದ ಅಂಚೆಗಳು. ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ವಿವಾಹ ನೋಂದಣಿ ಪತ್ರ, ರೇಷನ್ ಕಾರ್ಡ್ ಮುಂತಾದ ವಯೋಮಿತಿ ತಿಳಿಸುವ ದಾಖಲೆಗಳು ಹೆಸರು ನೋಂದಣಿ ಮಾಡಿಸಲು ಸಾಕು.
Related Articles
ನೀವು ನಗರ ಸಭೆಯ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಅರ್ಜಿಯನ್ನು ಸಹಾಯಕ ಆಯುಕ್ತರು (ನಗರ ಪಾಲಿಕೆಯ ಕಚೇರಿ)ಅಂಚೆ ಕಚೇರಿಗಳು, ವಾಣಿಜ್ಯ ಮಳಿಗೆಗಳ ಡ್ರಾಪ್ ಡೌನ್ ಪೆಟ್ಟಿಗೆಗಳು, ಪೆಟ್ರೋಲ್ ಬಂಕುಗಳು. ನೀವು ನಗರಸಭೆ ಪ್ರದೇಶದಲ್ಲಿಲ್ಲದಿದ್ದರೆ, ನಿಮ್ಮ ಅರ್ಜಿಯನ್ನು ನಿಮ್ಮ ಜಿಲ್ಲೆಯಲ್ಲಿ ಸಲ್ಲಿಸಿ: ಉಪ ಪರೀಕ್ಷಕ ಕಚೇರಿ. ರೆವಿನ್ಯೂ ಡಿವಿಶನಲ್ ಅಧಿಕಾರಿ ಕಚೇರಿ (ಮತದಾರ ನೋಂದಣಿ ಅಧಿಕಾರಿ)ತಹಶೀಲ್ದಾರರ ಕಚೇರಿ (ಸಹಾಯಕ ಮತದಾರ ನೋಂದಣಾಧಿಕಾರಿ)
Advertisement
ಯಾವ್ಯಾವುದಕ್ಕೆ ಯಾವ್ಯಾವ ಅರ್ಜಿ?ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಫಾರಂ 6, ಫಾರಂ 7, ಫಾರಂ 8, ಫಾರಂ 8ಎ ಎಂಬ ನಾಲ್ಕು ರೀತಿಯ ಅರ್ಜಿಗಳಿವೆ. ಹೊಸದಾಗಿ ಹೆಸರು ನೋಂದಾಯಿಸಲು, ಹೆಸರು ಬದಲಾವಣೆ ಮಾಡಿಸಲು, ಸ್ಥಳ ಬದಲಾವಣೆ ಮಾಡಿದ ನಂತರ ಹೆಸರು ನೋಂದಣಿ ಮಾಡಿಸಲು ನಿಮಗೆ ಅಗತ್ಯವಿರುವ ಅರ್ಜಿಗಳನ್ನು ಬಳಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ನೂತನವಾಗಿ ಹೆಸರು ಸೇರಿಸಲು, ಸ್ಥಳ ಬದಲಾವಣೆ ಬಗ್ಗೆ ಮಾಹಿತಿ ನೀಡಲು ಮತ್ತು ಹೆಸರು ಕಣ್ಮರೆ ಆಗಿದ್ದರೆ ಪುನಃ ಸೇರಿಸಲು ಫಾರಂ 6 ಅನ್ನು ಬಳಸಬಹದು. ಫಾರಂ 7 ಮುಖಾಂತರ ನಿಮ್ಮ ಹೆಸರನ್ನು ರದ್ದು ಪಡಿಸಬಹುದು, ಮರಣ ಹೊಂದಿದ ವ್ಯಕ್ತಿಯ ಹೆಸರು ತೆಗೆಸಬಹುದಾಗಿದೆ. ಮತದಾರರ ಪಟ್ಟಿಯ ತಪ್ಪುಗಳನ್ನು ಬದಲಿಸಲು ಫಾರಂ 8 ಮತ್ತು ಒಂದೇ ಚುನಾವಣಾ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಇನ್ನೊಂದು ಜಾಗಕ್ಕೆ ಸ್ಥಳಾಂತರಿಸಲು ಅಂದರೆ ನಿಮ್ಮ ವಿಳಾಸ ಬದಲಾಗಿದ್ದರೆ ಫಾರಂ 8ಎ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಅರ್ಜಿಯನ್ನು ಪಡೆದುಕೊಂಡ ಕಚೇರಿಯಲ್ಲಿಯೇ ಮರಳಿ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಮತದಾರರ ನೋಂದಣಿ ವರ್ಷಪೂರ್ತಿ ನಡೆಯುತ್ತದೆ. ಆದರೆ, ಚುನಾವಣೆ ವೇಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಿರುವವರೆಗೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿರುತ್ತದೆ.