Advertisement

ಮಾನವನ ಬದುಕಿನ ನಿಗೂಢತೆ ಮತ್ತು ಭಾರತ

11:57 PM Nov 23, 2022 | Team Udayavani |

ರಷ್ಯನ್‌ ಮೂಲದ ಭಾರತಜ್ಞೆ (ಇಂಡಾಲಜಿಸ್ಟ್‌) ವಿಕ್ಟೋರಿಯಾ ಡಿಮಿಟ್ರೀವಾ 1996ರಿಂದ ಭಾರತದಲ್ಲಿ ನೆಲೆಸಿದ್ದಾರೆ. ಅವರು ಸಂಸ್ಕೃತ, ಭಾರತೀಯ ತಣ್ತೀಶಾಸ್ತ್ರ, ಯೋಗ ಮತ್ತು ಆಯುರ್ವೇದವನ್ನು ಅಧ್ಯಯನ ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲಿ, ರಷ್ಯಾದ ಸೈಂಟ್‌ ಪೀಟರ್ ಬರ್ಗ್‌ ಸ್ಟೇಟ್‌ ವಿ.ವಿ.ಯಲ್ಲಿ ಪದವೀಧರೆಯಾಗಿ, ಧಾರ್ಮಿಕ ಅಧ್ಯ ಯನದಲ್ಲಿ (ಮಾಂಟ್ರಿ ಯಲ್, ಕೆನಡಾ) ಮ್ಯಾಗ್ಗಿಲ್‌ ವಿ.ವಿ.ಯ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ವಿದೇಶಿಗರಿಗೆ ಮುಖ್ಯವಾಗಿ ರಷ್ಯನ್ನರಿಗೆ ಭಾರತ ಮತ್ತು ಅದರ ವಿಶಿಷ್ಟ ಸಂಸ್ಕೃತಿಯ ಪರಿಚಯವನ್ನು ಮಾಡುತ್ತಾ, ಭಾರತದಾದ್ಯಂತ ಸಂಚರಿಸುತ್ತಿದ್ದಾರೆ.

Advertisement

ಭಾರತ, ಸನಾತನ ಧರ್ಮ ಮತ್ತು ತನ್ನ ಪುಸ್ತಕದ ಕುರಿತಾಗಿ ಅವರು ಹೀಗೆಂದಿದ್ದಾರೆ.

ನನ್ನ ಆತ್ಮ ಮತ್ತು ಮಾತೃಭೂಮಿ ಭಾರತ: ನನಗೆ 9-10 ವರ್ಷ ಇದ್ದಿರಬೇಕು. ಆಗಲೇ ಭಾರತ ಮತ್ತು ಹಿಂದೂ ಧರ್ಮದ ಬಗ್ಗೆ ಆಕರ್ಷಿತನಾಗಿ ಹೋದೆ. ಹೊಸವರ್ಷದಂದು ಸೈಂಟ್‌ ಪೀಟರ್ಬರ್ಗ್‌ನಲ್ಲಿ, ಎಂಜಿನಿ ಯರ್‌ ದಂಪತಿಗೆ ಮಗಳಾಗಿ ಹುಟ್ಟಿದೆ. ನನ್ನ ತಂದೆತಾಯಿಗೆ ಭಾರತದ ಸಂಪರ್ಕವೇ ಇಲ್ಲದಿರುವಾಗ ದೂರದ ಭಾರತ ದತ್ತ ನನಗೆ ಅಪರಿಮಿತ ಆಕರ್ಷಣೆ ಹೇಗೆ ಹುಟ್ಟಿತು ಎಂದು ವಿವರಿಸಲು ನನ್ನಿಂದ ಸಾಧ್ಯವಿಲ್ಲ! ನನ್ನ ಪೂರ್ವಜನ್ಮ ಮತ್ತು ಸಂಸ್ಕಾರಗಳಿದ ಮಾತ್ರ ಅದು ಸಾಧ್ಯವಾಯಿತು ಎಂದಷ್ಟೇ ಹೇಳಬಲ್ಲೆ. ನಾನು ಮಗುವಾಗಿದ್ದಾಗಲೇ ಭಾರತೀಯ ಸಂಗೀತ, ನೃತ್ಯ, ವಿಭಿನ್ನ ಕಲೆಗಳನ್ನು ಗುರುತಿಸುತ್ತಿದ್ದೆ. ನನ್ನ ಆತ್ಮ ಮತ್ತು ಮಾತೃಭೂಮಿ ಭಾರತ ಎಂದು ನನಗೆ ಅನಿಸುತ್ತಿತ್ತು. ನನ್ನ ಬಾಲ್ಯದ ದಿನಗಳಲ್ಲಿ ಭಾರತದೊಂದಿಗೆ ಸಂಪರ್ಕದಿಂದಿದ್ದ ಕೊಂಡಿಯೆದರೆ ಹಿಂದಿ ಚಿತ್ರಗಳು.

ಭಾರತ ವಾಸ್ತವ್ಯ ಯೋಗ್ಯ: ಯಾರಾದರೂ ತಮ್ಮ ಪ್ರಸ್ತುತ ಬದುಕಿನಲ್ಲಿ ಅತೃಪ್ತಿಯನ್ನು ಹೊಂದಿದ್ದರೆ, ಶಿಕ್ಷಣ, ಮದುವೆ, ಉದ್ಯೋಗ ಇತ್ಯಾದಿ ಮತ್ತು ಬದುಕಿನ ನಿಗೂಢತೆಯ ಬಗ್ಗೆ ಉತ್ತರವನ್ನು ಕಂಡುಕೊಳ್ಳಲು ಬಯಸುವಿರಾದರೆ ಅದಕ್ಕೆ ಪ್ರಶಸ್ತ ಭೂಮಿ ಭಾರತ. ಅಸ್ತಿತ್ವದ ಪ್ರಶ್ನೆಗಳಿಗೆಲ್ಲ ಭಾರತದಲ್ಲಿ ಉತ್ತರ ಸಿಗುತ್ತದೆ. ಜೀವನ ಅಂದರೇನು? ನಾನು ಯಾರು? ನಾನೇಕೆ ಹುಟ್ಟಿದೆ? ನಾನೇನು ಮಾಡುತ್ತಿ ದ್ದೇನೆ? ಮರಣೋತ್ತರ ಜೀವನ ಇದೆಯೇ? ಇತ್ಯಾದಿ. ನಾನು ಯುಎಸ್‌, ಕೆನಡಾ, ರಷ್ಯಾ ಇತ್ಯಾದಿ ದೇಶಗಳಲ್ಲಿದ್ದರೂ ನಾನು ನನ್ನ ಮನೆ ಯಲ್ಲಿದ್ದೇನೆ ಎಂಬ ಅನುಭವ ಭಾರತದಲ್ಲಿದ್ದಾ ಗ ಮಾತ್ರ ಆಗುತ್ತಿದೆ. ಪರಿಸರ, ರಾಜ ಕೀಯ, ಸಾಮಾಜಿಕ ಇತ್ಯಾದಿ ಸಮಸ್ಯೆಗಳ ಹೊರತಾಗಿಯೂ ಭಾರತ ವಾಸ್ತವ್ಯ ಯೋಗ್ಯ ವಾಗಿದೆ. ಭಾರತದಲ್ಲಿ ನೆಲೆಸುವ ನನ್ನ ನಿರ್ಧಾರ ಸ್ವಯಂ ಪ್ರೇರಿತ ಮತ್ತು ಸ್ವಾಭಾ ವಿಕ. ಇಲ್ಲಿ ನೆಲೆಸ ಬೇಕೆಂಬ ಉದ್ದೇಶವಾಗಲೀ, ನಿರೀಕ್ಷೆ ಯಾಗಲೀ ಇರಲಿಲ್ಲ. ನನ್ನ ನಿರ್ಧಾರವು ನನ್ನ ಭಾವನೆಗಳು ಮತ್ತು ಸಂಶೋಧನ ಸ್ವಭಾವದ ತುರೀಯಾವಸ್ಥೆ. ಸ್ವಲ್ಪ ಸಮಯ ನಾನು ಹಿಂದೂ ಪುಸ್ತಕಗಳನ್ನು ರಷ್ಯನ್‌ಗೆ ಭಾಷಾಂತರಿಸುತ್ತಿದ್ದೆ. ಕೆಲವು ಪುಸ್ತಕಗಳು ಹೊರ ಬಂದಿವೆ. ನನ್ನ ಕನಸುಗಳನ್ನು ಸಾಕ್ಷಾತ್ಕಾರಗೊಳಿಸಲು ಭಾರತ ಸಹಾಯ ಮಾಡಿದೆ. ನನ್ನ ಜೀವನ ಮತ್ತು ಕರ್ಮವನ್ನು ಭಾರತಕ್ಕೆ ಮುಡಿಪಾಗಿಡಲು ನಿರ್ಧರಿಸಿ ದ್ದೇನೆ. ನಾನು ನಿರ್ದಿಷ್ಟ ಗುರಿಯಿಲ್ಲದ, ಭಾರತದ ಓರ್ವ ಸೇವಕ ಮತ್ತು ಸೇನಾನಿ.

ಭಾರತೀಯ ತಣ್ತೀಶಾಸ್ತವು ಏಕಶಿಲೆಯಲ್ಲ: ಭಿನ್ನ ಭಿನ್ನ ವಿಚಾರಧಾರೆಗಳಿಂದ ಕೂಡಿದ ಭಾರತೀಯ ತಣ್ತೀಶಾಸ್ತವು ಏಕಶಿಲೆಯಲ್ಲ. ಭಾರತದಲ್ಲಿ ಸಾಮಾನ್ಯವಾಗಿ ತಣ್ತೀಶಾಸ್ತವನ್ನು ದರ್ಶನಗಳೆಂದು ಕರೆಯುತ್ತಾರೆ. ದರ್ಶನ, ಸಂಸ್ಕೃತ ಮೂಲ ದಿಶಾದಿಂದ ಅವಿಷ್ಕರಿಸಲ್ಪಟ್ಟಿದೆ. ಅಂದರೆ ನೋಡು, ಸತ್ಯದ ದರ್ಶನ ಅಥವಾ ಮಾನವ ಮತ್ತು ವಿಶ್ವದ ರಹಸ್ಯವನ್ನು ನೇರವಾಗಿ ತಿಳಿ ಎಂದರ್ಥ. ಆದರೆ ಕೇವಲ ಬೌದ್ಧಿಕ ತರ್ಕ ಗಳಿಂದ ನೋಡುವುದಲ್ಲ. ಪ್ರಾಚೀನ ಋಷಿಗಳು, ಸಂತರು ತಮ್ಮ ಯೋಗ ಮತ್ತು ಆಧ್ಯಾತ್ಮಿಕ ವಿಧಾನಗಳಿಂದ ಬದುಕಿನ ಮತ್ತು ವಿಶ್ವದ ಗಹನವಾದ ವಿಚಾರಗಳನ್ನು ಕಂಡುಕೊಡಿ ದ್ದರು. ಪಾಶ್ಚಾತ್ಯ ತಣ್ತೀಜ್ಞಾನಿಗಳು ವಿವೇಚನಾಶಕ್ತಿ, ತರ್ಕಶಾಸ್ತ ಮತ್ತು ಬೌದ್ಧಿಕತೆಯ ಆಧಾರದಲ್ಲಿ ಯೋಚಿಸುತ್ತಾರೆ. ಮನುಷ್ಯ ಬುದ್ಧಿಯಿಂದ ಮಾತ್ರ ಜಗತ್ತನ್ನು ತಿಳಿಯಲು ಸಾಧ್ಯ ಎನ್ನುತ್ತಾರೆ. ಆದರೆ ಭಾರತೀಯ ಋಷಿಗಳು ಬೌದ್ಧಿ ಕತೆ ಯಾವಾಗಲೂ ವಿಶ್ವಾಸಾರ್ಹವಲ್ಲ. ವಾಸ್ತವಾಂಶ ವನ್ನು ತಿಳಿಯಲು ಇತರ ದಾರಿಗಳಿವೆ ಎಂದು ಬೋಧಿಸಿದ್ದಾರೆ.

Advertisement

ಮನುಷ್ಯನ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸಂಸ್ಕೃತ ಅಧ್ಯಯನ: ಭಾರತದತ್ತ ಆಕರ್ಷಿತನಾದ ನನಗೆ ಸಂಸ್ಕೃತವನ್ನು ಕಲಿಯಬೇಕೆಂಬ ಯೋಜನೆಯಿದ್ದಿತು. ನಮ್ಮ ಸಮಾಜವು ನಿರಂತರ ಕೆಜಿಬಿ ಗೂಢಚಾರರ ಕಣ್ಗಾವಲಿನಲ್ಲಿ ಇದ್ದಿದ್ದರಿಂದ ಸಂಸ್ಕೃತ ಮತ್ತು ಪೌರ್ವಾತ್ಯ ಅಧ್ಯಯನವನ್ನು ಮಾಡಲಾಗಲಿಲ್ಲ. ದೇವಭಾಷೆ ಸಂಸ್ಕೃತವನ್ನು ಮತ್ತೆ ಕಲಿತೆ. ನಮ್ಮ ಬುದ್ಧಿಯನ್ನು ಸಂಸ್ಕರಿಸುವ ಅಪಾರ ಸಾಮರ್ಥ್ಯ ಅದಕ್ಕಿದೆ. ಪಾಣಿನಿ ಅಥವಾ ಅಷ್ಟಾಧ್ಯಾಯಿಯ ಸಂಕೀರ್ಣ ವ್ಯಾಕರಣವನ್ನು ಅಭ್ಯಸಿಸಿದರೆ ಮನಸ್ಸು ಮತ್ತು ಬದುಕನ್ನೇ ಬದಲಿಸಬಲ್ಲುದು. ಮನುಷ್ಯನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಂಸ್ಕೃತ ಅಧ್ಯಯನದಿಂದ ಲಭಿಸುತ್ತದೆ. ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ ಭಾರತದ ಉದ್ದಗಲಕ್ಕೂ ಸಂಚರಿಸಿದ್ದೇನೆ, ಅಸಂಖ್ಯಾತ ಜನರನ್ನು ಸಂದರ್ಶಿಸಿದ್ದೇನೆ. ಅದರ ಅನುಭವಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದೇನೆ. ರಷ್ಯನ್‌ ಭಾಷೆಯಲ್ಲಿ ಪುಸ್ತಕ ಪ್ರಕಾಶಿತಗೊಂಡಿದೆ. ಭಾರತ ದಲ್ಲೂ ಬಿಡುಗಡೆಯಾಗಲಿದೆ. ನೀನಾರು? ನೀನೇನು? ಎಂಬುದನ್ನು ಕಲಿಯಲು ಭಾರತ ಸಹಾಯವಾಗುತ್ತದೆ.

-ಜಲಂಚಾರು ರಘುಪತಿ ತಂತ್ರಿ, ಉಡುಪಿ        

Advertisement

Udayavani is now on Telegram. Click here to join our channel and stay updated with the latest news.

Next