Advertisement

ಮೈಸೂರು ಸಂಸ್ಥಾನಕ್ಕೆ ರಾಜಮಾತೆಯರ ಕೊಡುಗೆ ಅಪಾರ: ತ್ರಿಷಿಕಾ

08:41 AM Mar 14, 2019 | |

ಮೈಸೂರು: ಮೈಸೂರು ಸಂಸ್ಥಾನದಲ್ಲಿ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ರಾಜಮಾತೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ರಾಜವಂಶಸ್ಥರಾದ ತ್ರಿಷಿಕಾ ಕುಮಾರಿ ಹೇಳಿದರು.

Advertisement

ಶ್ರೀಜೈನ್‌ ಶ್ವೇತಾಂಬರ ತೇರಾಪಂಥ ಮಹಿಳಾ ಮಂಡಲ ವತಿಯಿಂದ ಬುಧವಾರ ನಗರದ ತೇರಾ ಪಂಥ್‌ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮೈಸೂರು ರಾಜ ಮನೆತನ ಪ್ರಾರಂಭವಾಗಿದ್ದು ಕೂಡ ರಾಜಮಾತೆ ಯರಿಂದಲೇ, ರಾಜಮಾತೆ ಕೆಂಪ ನಂಜಮ್ಮಣ್ಣಿ ಆಡಳಿತ ಚುಕ್ಕಾಣಿ ಹಿಡಿದು ಸೈ ಎನಿಸಿ ಕೊಂಡಿದ್ದರು. ಮಹಿಳಾ ಶಿಕ್ಷಣಕ್ಕಾಗಿ ಬಹುದೊಡ್ಡ ಕ್ರಾಂತಿಯನ್ನೇ ಅವರು ಮಾಡಿದ್ದಾರೆ ಎಂದರು. 

ಮೈಸೂರಿನಲ್ಲಿ ಬಾಲಕಿಯರ ಶಾಲೆ ಆರಂಭಿಸಿದ್ದಲ್ಲದೆ, ನಗರಾಭಿವೃದ್ಧಿ ಸಮಿತಿ ರಚನೆ, ವಾಣಿ ವಿಲಾಸ ನೀರು ಸರಬರಾಜು ಕೇಂದ್ರ, ಶಿವನ ಸಮುದ್ರದಲ್ಲಿ ವಿದ್ಯುತ್‌ ಉತ್ಪಾದನಾ ಕೇಂದ್ರ ಸ್ಥಾಪನೆ ಹೀಗೆ ರಾಜಮಾತೆ ಕೆಂಪನಂಜಮ್ಮಣ್ಣಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯರಿದ್ದು, ಕೇವಲ ಮದುವೆ ಯಾಗುವುದೊಂದೇ ಮಹಿಳೆಯರ ಗುರಿ ಆಗ ಬಾರದು. ನಾನು ನನ್ನ ಮಗನಿಗೆ ಈಗಿನಿಂದಲೇ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಸುತ್ತಿದ್ದೇನೆ. ಮಹಿಳೆಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ ಎಂದು ತಿಳಿಸಿದರು.

ತೇರಾಪಂಥ್‌ ಮಹಿಳಾ ಮಂಡಲದ ಅಧ್ಯಕ್ಷೆ ವನಮಾಲ ನಹರ್‌, ಕಾರ್ಯದರ್ಶಿ ಖಮೋಶ್‌ ಮೆಹರ್‌ ಮೊದಲಾದವರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next