Advertisement

ಯೋಗೀಶಗೌಡ ಹತ್ಯೆ; ಸುಪಾರಿ ಹಂತಕರ ಸೆರೆ

11:29 PM Mar 01, 2020 | Lakshmi GovindaRaj |

ಧಾರವಾಡ: ಹೆಬ್ಬಳ್ಳಿ ಜಿಪಂ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸುಪಾರಿ ಹಂತಕರನ್ನು ಬಂ ಧಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಬಂಧಿತ ಆರು ಮಂದಿ ಬೆಂಗಳೂರು ಹಾಗೂ ತಮಿಳುನಾಡು ಮೂಲದವರು ಎನ್ನಲಾಗಿದ್ದು, ಅವರನ್ನು ಭಾನುವಾರ ಪ್ರಧಾನ ಜೆಎಂಎಫ್‌ಸಿ ನ್ಯಾಯಾಧೀಶೆ ವಿಜಯಲಕ್ಷ್ಮೀ ಘಾಣಾಪುರ ಮುಂದೆ ಹಾಜರುಪಡಿಸಲಾಗಿತ್ತು.

Advertisement

ಸದ್ಯ ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸಿಬಿಐ ಅಧಿಕಾರಿಗಳಿಗೆ ನ್ಯಾಯಾಧಿಧೀಶರು ಸೂಚಿಸಿದರು. ಈ ಮೊದಲು ಕೊಲೆ ಆರೋಪದಡಿ ಬಂಧಿತರಾದ ಆರು ಮಂದಿ ಆರೋಪಿಗಳು ಈ ಹಂತಕರಿಗೆ ಸುಪಾರಿ ನೀಡಿದ ಬಗ್ಗೆ ಸಿಬಿಐ ತನಿಖೆ ವೇಳೆ ಬಯಲಿಗೆ ಬಂದಿದೆ. ಸುಪಾರಿ ಪಡೆದ ನೈಜ ಆರೋಪಿಗಳು ಯೋಗೀಶಗೌಡ ಗೌಡರ ಕೊಲೆ ಮಾಡಿ ಸಿನಿಮೀಯ ರೀತಿಯಲ್ಲಿ ಬೆಂಗಳೂರು ಕಡೆಗೆ ಪರಾರಿಯಾಗಿದ್ದರು.

ಸುಪಾರಿ ನೀಡಿದ ಆರೋಪಿಯೊಬ್ಬ ಸಿಬಿಐ ತನಿಖೆಗೆ ರಾಜ್ಯ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದನ್ನು ಸುಪ್ರೀಂಕೋರ್ಟ್‌ ತೆರವುಗೊಳಿಸಿತ್ತು. ಬಂಧನದ ಭೀತಿಯಿಂದ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಲು ಯತ್ನಿಸಿದ್ದರು. ಅಷ್ಟರಲ್ಲೇ ಸಿಬಿಐ ಅಧಿಕಾರಿಗಳು ಆರೋಪಿಗಳನ್ನು ಬಂಧಿ ಸಿದ್ದಾರೆ. ಈಗ ನೈಜ ಆರೋಪಿಗಳು ಸಿಬಿಐ ಬಲೆಗೆ ಬಿದ್ದಿರುವುದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next