Advertisement
ಬಿ.ಸಿ.ರೋಡ್‌ನ ತಾ.ಪಂ. ಕಚೇರಿ ಬಳಿ ಇರುವ ಆಶ್ರಮ ಶಾಲೆಯು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದು, ಕಟ್ಟಡ ಸುರಕ್ಷಿತ ವಲ್ಲ ಎಂಬ ತಾಂತ್ರಿಕ ವರದಿ ಬಂದ ಹಿನ್ನೆಲೆಯಲ್ಲಿ 2022-23ನೇ ಸಾಲಿನಲ್ಲಿ ಶಾಲೆಯನ್ನು ಬೆಂಜನಪದವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಸ್ಥಳಾಂತರಗೊಂಡು ವರ್ಷ ಕಳೆದರೂ ಕಟ್ಟಡ ತೆರವಿಗೆ ಅನುಮತಿ ಕೇಳಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ, ಇಲಾಖೆಯ ಕೇಂದ್ರ ಕಚೇರಿಯಿಂದ ಆದೇಶ ಬಂದಿರಲಿಲ್ಲ.
Related Articles
Advertisement
ಪುರಸಭೆಯ ಅನುದಾನ ಬಳಸಿಕೊಂಡು ಆಶ್ರಮ ಶಾಲೆಯ ಕಟ್ಟಡ ತೆರವು ಮಾಡುವಂತೆ ಕಳೆದೆರಡು ದಿನಗಳ ಹಿಂದಷ್ಟೇ ಆದೇಶ ಬಂದಿದ್ದು, ಮುಂದೆ ಪುರಸಭೆಗೆ ಪತ್ರ ಬರೆದು ಅನುದಾನಕ್ಕಾಗಿ ಮನವಿ ಮಾಡಲಿದ್ದೇವೆ. ಅವರು ಅನುದಾನ ನೀಡಿದ ಬಳಿಕ ತೆರವು ಕಾರ್ಯ ನಡೆಯಲಿದೆ. -ಸುನೀತಾ, ಸಹಾಯಕ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ.
ಕೆಲವು ವರ್ಷ ಬಾಡಿಗೆ ಕಟ್ಟಡ
ಕಟ್ಟಡ ತೆರವು ಪ್ರಕ್ರಿಯೆಗಳು ಪೂರ್ಣ ಗೊಂಡ ಬಳಿಕವೇ ಮುಂದೆ ಇಲಾಖೆಯ ಮೂಲಕ ಹೊಸ ಕಟ್ಟಡಕ್ಕೆ ಕ್ರಿಯಾಯೋಜನೆ ಸಿದ್ಧಗೊಂಡು ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಬೇಕಿದೆ. ಆದರೆ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವುದಕ್ಕೆ ಇನ್ನೂ ಒಂದಷ್ಟು ಸಮಯಗಳು ಹಿಡಿ ಯುವುದರಿಂದ ಸದ್ಯಕ್ಕೆ ಹೊಸ ಕಟ್ಟಡ ನಿರ್ಮಾಣ ಅಸಾಧ್ಯವಾಗಿದ್ದು, ಇನ್ನೂ ಒಂದಷ್ಟು ವರ್ಷ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸಬೇಕಿದೆ.
4 ದಶಕಗಳಿಂದ ಇಲ್ಲಿ ಕಾರ್ಯಾಚರಿಸು ತ್ತಿದ್ದ ಆಶ್ರಮ ಶಾಲೆಲ್ಲಿ 1-5ನೇ ತರಗತಿಯ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಾಮರ್ಥ್ಯ 125 ಆಗಿದೆ. ಆದರೆ ಕೊರೊನಾ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ.
ಪರಿಶೀಲನೆ
ಆಶ್ರಮ ಶಾಲೆಯ ಹಳೆ ಕಟ್ಟಡದ ಬಣ್ಣ ಸಂಪೂರ್ಣ ಮಾಸಿ ಹೋಗಿ ಮೇಲ್ಛಾವಣಿ ಸೇರಿದಂತೆ ಅಲ್ಲಲ್ಲಿ ಕಾಂಕ್ರೀಟ್ ಪುಡಿ ಬೀಳುತ್ತಿದ್ದವು. ಕಬ್ಬಿಣಗಳು ಸಂಪೂರ್ಣ ತುಕ್ಕು ಹಿಡಿದಿತ್ತು. ಹೀಗಾಗಿ ಸಂಬಂಧಪಟ್ಟ ಎಂಜಿನಿಯರ್‌ಗಳು ಪರಿಶೀಲಿಸಿ ಯೋಗ್ಯ ವಲ್ಲ ಎಂಬ ವರದಿ ನೀಡಿದ್ದರು. ಸಮಾಜ ಕಲ್ಯಾಣ ಇಲಾಖೆಯ ಕಮೀಷನರ್ ಡಾ| ರಾಕೇಶ್ ಕುಮಾರ್ ಕೆ. ಕೂಡ ಭೇಟಿ ನೀಡಿ ಕಟ್ಟಡವನ್ನು ಪರಿಶೀಲನೆ ಮಾಡಿದ್ದರು.