Advertisement

ಒಳ್ಳೆಯ ಕಥೆ ಇರುವ ಸಿನಿಮಾ ಯಾವತ್ತಿಗೂ ಪ್ಯಾನ್‌ ಇಂಡಿಯಾ ಆಗಿರುತ್ತವೆ: ಉಪೇಂದ್ರ

10:04 AM Jan 20, 2020 | Lakshmi GovindaRaj |

ಸದ್ಯ ಕನ್ನಡ ಚಿತ್ರರಂಗದಲ್ಲಿ ಪ್ಯಾನ್‌ ಇಂಡಿಯಾ ಸದ್ದು ಜೋರಾಗಿದೆ. ಅದರಲ್ಲೂ ಸ್ಟಾರ್‌ಗಳ ಸಿನಿಮಾ ಮಾಡುವವರು ಪ್ಯಾನ್‌ ಇಂಡಿಯಾ ಯೋಚನೆಯೊಂದಿಗೆ ಮಾಡುತ್ತಾರೆ. ಕೇವಲ ಕನ್ನಡವೊಂದಕ್ಕೇ ಸೀಮಿತವಾಗದೇ ತಮ್ಮ ಕಂಟೆಂಟ್‌ ಅನ್ನು ಪರಭಾಷೆಗಳಿಗೂ ಕೊಂಡೊಯ್ಯುವ, ಅಲ್ಲಿನ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಉಪೇಂದ್ರ ಅವರ “ಕಬ್ಜ’ ಕೂಡಾ ಏಳು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಹೊರಟಿದೆ.

Advertisement

ಹಾಗಾದರೆ ಉಪೇಂದ್ರ ಪ್ರಕಾರ ಪ್ಯಾನ್‌ ಇಂಡಿಯಾ ಸಿನಿಮಾ ಎಂದರೇನು? ಉಪ್ಪಿ ಇದನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಾರೆ. “ಒಳ್ಳೆಯ ಕಥೆ, ಮೇಕಿಂಗ್‌ ಇರುವ ಸಿನಿಮಾಗಳು ಯಾವತ್ತಿಗೂ ಪ್ಯಾನ್‌ ಇಂಡಿಯಾ’ ಎನ್ನುವುದು ಉಪೇಂದ್ರ ಮಾತು. “ಇವತ್ತು ನಾವು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಹೊರಟಿದ್ದೇನೆ. ಆದರೆ ಒಳ್ಳೆಯ ಕಥೆ, ನಿರೂಪಣೆ ಇರುವ ಸಿನಿಮಾಗಳು ಯಾವತ್ತಿಗೂ ಪ್ಯಾನ್‌ ಇಂಡಿಯಾನೇ.

ಅಣ್ಣಾವ್ರ ಸಿನಿಮಾದಿಂದ ಹಿಡಿದು ಸಾಕಷ್ಟು ನಟರ ಸಿನಿಮಾಗಳನ್ನು ಎಲ್ಲಾ ಭಾಷೆಯ ಜನ ಆಗಲೇ ನೋಡಿ ಮೆಚ್ಚಿದ್ದಾರೆ. ಕಲೆಗೆ ಭಾಷೆಯ ಬೇಲಿ ಇಲ್ಲ. ಯಾವ ಸಿನಿಮಾಕ್ಕೆ ಮನರಂಜಿಸುವ, ಜನರನ್ನು ತನ್ನತ್ತ ಸೆಳೆಯುವ ಗುಣವಿದೆಯೋ ಆ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗುತ್ತದೆ’ ಎನ್ನುತ್ತಾರೆ ಉಪೇಂದ್ರ. ಇನ್ನು, ಉಪೇಂದ್ರ ಅವರಿಗೆ “ಕಬ್ಜ’ ಹೊಸ ಅನುಭವವಂತೆ. “ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಂತೆ ಭಾಸವಾಗುತ್ತಿದೆ.

ನಿರ್ದೇಶಕ ಚಂದ್ರು ಆ ತರಹದ ಒಂದು ಸೆಟಪ್‌ ಮಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿಬರುತ್ತಿದೆ. ಇಡೀ ತಂಡ ಒಂದೊಂದು ದೃಶ್ಯವನ್ನೂ ಎಂಜಾಯ್‌ ಮಾಡುತ್ತಿದೆ. ಈ ಹಿಂದೆ “ಓಂ’ ಮಾಡುವಾಗ ನಾವು ಇದೇ ರೀತಿ ಎಂಜಾಯ್‌ ಮಾಡಿ, ಶೂಟ್‌ ಮಾಡಿದ್ದೆವು. ಅದು ಮತ್ತೆ “ಕಬ್ಜ’ ಸೆಟ್‌ನಲ್ಲಿ ನೆನಪಿಗೆ ಬಂತು. ಕಥೆ, ಮೇಕಿಂಗ್‌, ಸೆಟ್‌ ಎಲ್ಲವೂ ವಿಭಿನ್ನವಾಗಿದೆ’ ಎನ್ನುವುದು ಉಪೇಂದ್ರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next