Advertisement

ತಾಯಿ-ಮಗು ನಾಪತ್ತೆ

05:30 PM Mar 02, 2022 | Shwetha M |

ಮುದ್ದೇಬಿಹಾಳ: ತವರು ಮನೆ ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಮಕ್ಕೆ ಬಂದಿದ್ದ ಹುಬ್ಬಳ್ಳಿಯ ಸಹದೇವ ನಗರ ನಿವಾಸಿ ರೇವತಿ (ಜಯಶ್ರೀ) ಸಂತೋಷ ಪೂಜಾರಿ (24) ತನ್ನ 4 ವರ್ಷದ ಮಗಳು ಆದ್ಯಾ ಸಮೇತ ಬಿದರಕುಂದಿ ಗ್ರಾಮದ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಆಕೆಯ ಪತಿ ಹುಬ್ಬಳ್ಳಿ ನಿವಾಸಿ ಸಂತೋಷ ಸಾಬಣ್ಣ ಪೂಜಾರಿ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಬಿದರಕುಂದಿಯಿಂದ ಮುದ್ದೇಬಿಹಾಳ ಪಟ್ಟಣದ ಬಜಾರಕ್ಕೆ ಹೋಗಿ ಬರುವುದಾಗಿ ತವರು ಮನೆಯವರಿಗೆ ತಿಳಿಸಿ ಹೋದವಳು ಅತ್ತ ತವರು ಮನೆಗೂ ಹೋಗದೆ ಇತ್ತ ಗಂಡನ ಮನೆಗೂ ಬರದೆ ಫೆ. 19ರಂದೇ ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದು ಫೋಟೊದಲ್ಲಿರುವ ಚಹರೆ ಪಟ್ಟಿಯುಳ್ಳ ತಾಯಿ, ಮಗು ಎಲ್ಲಿಯಾದರೂ ಕಂಡಲ್ಲಿ ಸಮೀಪದ ಪೋಲೀಸ್‌ ಠಾಣೆಗೆ ಇಲ್ಲವೇ ಮುದ್ದೇಬಿಹಾಳ ಪೊಲೀಸ್‌ ಠಾಣೆ ದೂ. 08356-220333ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next