Advertisement

ಅಂತರ್ಜಾಲ ಯುವಕರ ಪ್ರಮುಖ ಅಸ್ತ್ರ

12:51 PM Jan 19, 2017 | |

ಕಲಬುರಗಿ: ಇವತ್ತಿನ ದಿನಗಳಲ್ಲಿ ಅಂತರ್ಜಾಲ ಎನ್ನುವುದು ಯುವಕರನ್ನು ಸೆಳೆದಿರುವ ಮಾಧ್ಯವಾಗಿದ್ದು, ಅದರ ಬಳಕೆ ದಿನದ ಪ್ರಮುಖಅಂಗವಾಗಿ ಪರಿಣಸಿದ್ದು, ತಮ್ಮ ಬೆರಳತುದಿಯಲ್ಲಿ ಜಗತ್ತಿನ ಆಗುಹೋಗುಗಳು ಲಭ್ಯವಾಗುತ್ತಿವೆ ಎಂದು ಎಚ್‌ಕೆಇ ಅಧ್ಯಕ್ಷ ಬಸವರಾಜ ಭೀಮಳ್ಳಿ ಹೇಳಿದರು. 

Advertisement

ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಭಾರತ ಸರಕಾರದ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ಟೆಕ್ಯೂಪ್‌-2ರ ಅಡಿ ಬುಧವಾರದಿಂದ ಆರಂಭವಾದ ಐದು ದಿನಗಳ ಡೈನಾಮಿಕ ವೆಬ್‌ ಡಿಸೈನಿಂಗ್‌ ವಿಷಯದ ಮೇಲೆ ಅಲ್ಪಾವಧಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಅಂತರ್ಜಾಲದ ಬಳಕೆ ಎಚ್ಚರಿಕೆಯಿಂದ ಮಾಡುವಂತೆ ಯುವ ಜನತೆಗೆ ಸಲಹೆ ನೀಡಿದ ಅವರು, ಜ.18ರಿಂದ 22ರ ವರೆಗೆ ನಡೆಯುತ್ತಿರುವ ಕಾರ್ಯಾಗಾರದ ಸಂಪೂರ್ಣ ಲಾಭವನ್ನು ನಮ್ಮ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ತಾಂತ್ರಿಕ, ಡಿಪ್ಲೋಮಾ ಕಾಲೇಜಿನ ಅಧ್ಯಾಪಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ನಿರತ ವಿದ್ಯಾರ್ಥಿಗಳು ಹಾಗೂ ಸಣ್ಣ ಮತ್ತು ಅತೀ ಸಣ್ಣ ಉದ್ಯಮಿಗಳು ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. 

ಭಾರತ ಸರಕಾರದ ಡಿಜಿಟಲ್‌ ಇಂಡಿಯಾ ಅಭಿಯಾನಕ್ಕೆ ಪುಷ್ಠಿ ನೀಡುವ ಕಾರ್ಯಾಗಾರವು ವೆಬ್‌ಸೈಟ್‌ ವಿನ್ಯಾಸ ಮಾಡುವುದು ಹಾಗೂ ಅದರ ಕಾರ್ಯವೈಖರಿಯ ಸಂಪೂರ್ಣ ಮಾಹಿತಿ ಒದಗಿಸುವುದೇ ಇದರ ಮೂಲ ಉದ್ದೇಶವಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸಂಜೀವ ಪ್ರತಿನಿಧಿ, ಡಿಜಿಟಲ್‌ ಇಂಡಿಯಾದ ಮೇಲೆ ಅಂತರ್ಜಾಲದ ಪರಿಣಾಮ ಹಾಗೂ ತೊಡಕುಗಳು ಎನ್ನುವ ವಿಷಯ ಕುರಿತು ಮಾತನಾಡಿದರು. 

ಅಂತರ್ಜಾಲದಲ್ಲಿನ ಉಪಲಬ್ದತೆಗಳು, ಅನುಕೂಲಗಳು ಹಾಗೂ ತೊಡಕುಗಳ ಬಗ್ಗೆ ವಿವರಿಸಿದರು. ಗೌರವ ಅತಿಥಿಗಳಾಗಿ ಎಚ್‌. ಕೆ.ಇ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ| ಸೂರ್ಯಕಾಂತ ಪಾಟೀಲ, ಕಾರ್ಯದರ್ಶಿ ಆರ್‌.ಎಸ್‌.ಹೊಸಗೌಡ, ಜಂಟಿ ಕಾರ್ಯದರ್ಶಿ ಶಿವಾನಂದ ಮಾನಾಕರ, ಆಡಳಿತ ಮಂಡಳಿ ಸದಸ್ಯರಾದ ಡಾ| ಬಸವರಾಜ ಜಿ. ಪಾಟೀಲ, ಎನ್‌.ಡಿ.ಪಾಟೀಲ, ಉದಯಕುಮಾರ ಎಸ್‌. ಚಿಂಚೋಳಿ, ರಮೇಶ ತಾರಾಚಂದ ಮಾಲು ಹಾಜರಿದ್ದರು. 

Advertisement

ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಸ್‌.ಎಸ್‌.ಅವಂತಿ ಮಾತನಾಡಿ, ಡಿಜಿಟಲ್‌ ಇಂಡಿಯಾ ಅಭಿಯಾನಕ್ಕೆ ಪ್ರೋತ್ಸಾಹ ಎಂಬಂತೆ ತಮ್ಮ ವಿಭಾಗದ ವಿದ್ಯಾರ್ಥಿಗಳು ಸ್ಮಾರ್ಟ್‌ ಇಂಡಿಯಾ ಹ್ಯಾಕಾಥಾನ್‌ 2017ಪ್ರೊಜೆಕ್ಟ್ ಸಲ್ಲಿಸಿದ್ದಾರೆ ಎಂದು ಹೇಳಿದರು. ಮಾಹಿತಿ ವಿಜ್ಞಾನದ ಮುಖ್ಯಸ್ಥೆ ಡಾ| ಭಾರತಿ ಹರಸೂರು ಮಾತನಾಡಿದರು.

ಡಾ| ವಿಶ್ವನಾಥ ಬುರಕಪಳ್ಳಿ ಕಾರ್ಯಾಗಾರದ ಬಗ್ಗೆ ಮಾಹಿತಿ ಒದಗಿಸಿದರು. ಪ್ರೊ| ಪ್ರಿಯಾಂಕಾ ರಾಯರಾಮ ವಂದಿಸಿದರು. ಪ್ರೊ| ಉದಯ ಬಳಗಾರ, ಅಶೋಕ ಪಾಟೀಲ, ರಾಕೇಶ ಗೋಧಿ, ಮುಕುಂದ ಹರವಾಳಕರ, ಮಲ್ಲಿಕಾರ್ಜುನ ರೆಡ್ಡಿ, ಗೀತಾ ಮತ್ತು ಗಂಗಾ ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next