Advertisement

ಕಾಲೇಜು ದಿನಗಳ ಫೋಟೋ ತೋರಿಸಿ ಹಣ ವಸೂಲಿ

11:32 AM Apr 07, 2017 | Team Udayavani |

ಬೆಂಗಳೂರು: ತನ್ನ ಜತೆ ಕಾಲೇಜಿನಲ್ಲಿ ತೆಗೆಸಿಕೊಂಡಿದ್ದ ಪೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕುವುದಾಗಿ ಸ್ನೇಹಿತೆಯನ್ನು ಬೆದರಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಪಡೆದುಕೊಂಡಿದ್ದ ಯುವಕನನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಾಲೇಜು ವಿದ್ಯಾರ್ಥಿ ಶ್ರೇಯಸ್‌ ಬಂಧಿತ ಆರೋಪಿ.

Advertisement

ಸಂತ್ರಸ್ತ ಯುವತಿ ಹಾಗೂ ಆರೋಪಿ ಶ್ರೇಯಸ್‌ ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಪರಸ್ಪರ ಸ್ನೇಹಿತರಾಗಿದ್ದರು. ಇದೇ ಸಲುಗೆಯ ಮೇಲೆ ಇಬ್ಬರೂ ಪೋಟೋ ತೆಗೆಸಿಕೊಂಡಿದ್ದರು. ಇದನ್ನೇ ದುರುಪಯೋಗ ಪಡೆಸಿಕೊಳ್ಳಲು ಯತ್ನಿಸಿದ ಶ್ರೇಯಸ್‌, ನೀನು ನನಗೆ ಹಣ ನೀಡಬೇಕು ಇಲ್ಲದಿದ್ದರೆ ಪೋಟೋ ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ, ಜತೆಗೆ ನಿಮ್ಮ ಮನೆಯವರಿಗೂ ಕಳಿಸಿಕೊಡುತ್ತೇನೆ ಎಂದು ಬೆದರಿಸುತ್ತಿದ್ದ.

ಇದರಿಂದ ನೊಂದಿದ್ದ ಯುವತಿ, ತಾನು ಉಳಿದುಕೊಂಡಿದ್ದ ದೊಡ್ಡಮ್ಮನ ಮನೆಯಲ್ಲಿಯೇ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಶ್ರೇಯಸ್‌ಗೆ ನೀಡಿದ್ದಳು. ಇದಾದ ಬಳಿಕವೂ ಶ್ರೇಯಸ್‌, ಪದೇ ಪದೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ಚಿನ್ನಾಭರಣ ಕಳವಿನ ಬಗ್ಗೆ ಯುವತಿಯ ದೊಡ್ಡಮ್ಮ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ಪೊಲೀಸರು ಮನೆಯವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ  ತಾನೇ ಚಿನ್ನಭರಣ ಕದ್ದು ಶ್ರೇಯಸ್‌ಗೆ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು, ಆರೋಪಿ ಶ್ರೇಯಸ್‌ನನ್ನು ಬಂಧಿಸಿ ಆತನ  ಬಳಿಯಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next