Advertisement

ಮಠದಿಂದ ಸಂಪ್ರದಾಯ ಉಲ್ಲಂಘನೆ ಆಗುತ್ತಿಲ್ಲ

12:06 PM Jul 23, 2018 | Team Udayavani |

ಬೆಂಗಳೂರು: ವ್ಯಾಸರಾಜ ಮಠದ ವೈಭೋಗ ಮರಳಿ ತರುವ ಪ್ರಯತ್ನವಾಗುತ್ತಿರುವಾಗ ಸದ್‌ವೈಷ್ಣವ ಪರಂಪರೆಗೆ ಧಕ್ಕೆಯಾಗುಂತಹ ಪ್ರಸಂಗಗಳು ನಡೆದಿಲ್ಲ ಎಂದು ವ್ಯಾಸರಾಜ ಮಠದ ವಿದ್ಯಾತೀರ್ಥ ಸ್ವಾಮೀಜಿ ಹೇಳಿದ್ದಾರೆ.

Advertisement

ಸೋಸಲೆ ವ್ಯಾಸರಾಜ ಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಶ್ರೀಗಳ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವದಲ್ಲಿ ಅವರು ಮಾತನಾಡಿದರು. ಮಠದಲ್ಲಿ ಸಂಪ್ರದಾಯ ಉಲ್ಲಂಘನೆಯಾಗುತ್ತದೆ ಎಂಬ ಆಕ್ಷೇಪಣೆಗಳು ಕೇಳಿಬರುತ್ತಿವೆ.

ಆದರೆ, ಶಾಸ್ತ್ರೀಯ ಪರಂಪರೆ ಹಾಗೂ ಅನುಷ್ಠಾನ ಪರಂಪರೆಯನ್ನು ಮಠ ಕೈಬಿಡದೆ ನಡೆಸಿಕೊಂಡು ಬರುತ್ತಿದೆ. ಮಠಕ್ಕೆ ದುಸ್ಥಿತಿ ಒದಗಿ ಬಂದ ಕಾಲದಲ್ಲಿ ಕೆಲವು ಪರಂಪರೆಗಳು ಕಳೆದು ಹೋಗಿವೆ. ಈಗ ಮಠಕ್ಕೆ ಹಿಂದಿದ್ದ ಗೌರವಯುತ ಸ್ಥಾನ ಮರುತರುವ ಪ್ರಯತ್ನವಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಆಕ್ಷೇಪಣೆಗಳು ಬರುತ್ತಿರುವುದು ಬೇಸರ ತಂದಿದೆ. ಆದರೆ, ಮಠ ಹಾಗೂ ನಮ್ಮಿಂದ ಎಂದಿಗೂ ಸದ್‌ವೈಷ್ಣವ ಪರಂಪರೆಗೆ ಧಕ್ಕೆಯಾಗುವಂತೆ ನಡೆದುಕೊಂಡಿಲ್ಲ. ಮಠದ ಪರಂಪರೆ ಹಾಗೂ ಸಂಪ್ರದಾಯಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದರು.

ಸಂಸ್ಥೆಯೊಂದಕ್ಕೆ ವಯಸ್ಸಾದಂತೆ ಅದರ ಮೇಲೆ ಭರವಸೆ ಮೂಡುವುದು ಹೆಚ್ಚು. ಅದರ ಮೇಲೆ ನಂಬಿಕೆ ಹೆಚ್ಚುತ್ತದೆ. ಸಮಾಜದ ಆ ಸಂಸ್ಥೆಯಿಂದ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಸಹಜ. ವ್ಯಾಸರಾಜ ಮಠ ಈ ನಿರೀಕ್ಷೆಯನ್ನು ಪೂರೈಸಲಿದೆ ಎಂದು ಹೇಳಿದರು.

Advertisement

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಮಾತನಾಡಿ, ಇವತ್ತಿನ ದಿನಗಳಲ್ಲಿ ಯಾವುದೇ ಮಠ ತನ್ನ ವಾರ್ಷಿಕ ಆದಾಯವನ್ನು ಪ್ರಕಟಿಸುವುದಿಲ್ಲ. ಒಂದು ವೇಳೆ ಪ್ರಕಟಿಸಿದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದರೆ ವ್ಯಾಸರಾಜ ಮಠ ಮಾತ್ರ ಇದುವರೆಗೂ ಪ್ರತಿ ವರ್ಷ ತನ್ನ ವಾರ್ಷಿಕ ಆದಾಯವನ್ನು ಪ್ರಕಟಿಸುತ್ತಿದೆ ಎಂದರು.

ನಿವೃತ್ತ ಆಡಳಿತಾಧಿಕಾರಿ ಕೆ.ಜೈರಾಜ್‌ ಮಾತನಾಡಿ, ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಏಳೆಂಟು ಮುಖ್ಯಮಂತ್ರಿಗಳ ಜತೆ ಕಾರ್ಯ ನಿರ್ವಹಿಸಿರುವೆ. ಅವರು ಬಹು ಅದ್ಭುತವಾದ ಆಡಳಿತವನ್ನು ರಾಜ್ಯಕ್ಕೆ ನೀಡಿದ್ದರು.

ವಿದ್ಯಾತೀರ್ಥ ಸ್ವಾಮೀಜಿ ಅವರು ಆ ಏಳೆಂಟು ಮುಖ್ಯಮಂತ್ರಿಗಳಿಗಿಂತ ಉತ್ತಮ ಆಡಳಿತವನ್ನು ಮಠಕ್ಕೆ ನೀಡುತ್ತಿ¨ªಾರೆ. ನಾನು ಈ ಮಠಕ್ಕೆ ಆಡಳಿತಾಧಿಕಾರಿಯಾಗಿ ಬಂದ ಮೊದಲ ತಿಂಗಳಿನಲ್ಲಿ ಆರು ಸಾವಿರ ರೂ. ಮಾಸಿಕ ಆದಾಯವಿತ್ತು. ನಿವೃತ್ತಿ ಹೊಂದುವ ಸಮಯದಲ್ಲಿ ಮಠದ ವಾರ್ಷಿಕ ಆದಾಯ 55 ಲಕ್ಷ$ ರೂ.ಆಗಿತ್ತು. ಇದರಲ್ಲಿ ಸ್ವಾಮೀಜಿಯ ಪಾತ್ರವೂ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next