Advertisement
ಅವರು ಶುಕ್ರವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ, ಸಂಸ್ಕೃತ ವೇದಪಾಠ ಶಾಲೆ ವಾರ್ಷಿಕೋತ್ಸವ, ಸೂತ್ರ ಸಂಗಮದ ಬಳಿಕ ನಡೆದ ಧರ್ಮ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ನಡೆಸಿ, ಪುಸ್ತಕ ಹಾಗೂ ಧ್ವನಿಮುದ್ರಿಕೆ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು.
ಯಾವುದೇ ತಪ್ಪೆಸಗದ ಸುಳ್ಯದ ವಿದ್ಯಾರ್ಥಿನಿ ಅಕ್ಷತಾ ಅವರನ್ನು ಹಾಡ ಹಗಲು ಕ್ರೂರ ವಾಗಿ ಕೊಲ್ಲಲಾಯಿತು. ಆದರೆ ಆ ಬಗ್ಗೆ ಸರಕಾರವಾಗಲೀ ಸಮಾಜವಾಗಲಿ ಗಮನಹರಿಸಲಿಲ್ಲ. ಅವಳ ಸಾವು ನ್ಯಾಯವೇ? ಹೆತ್ತವರ ನೋವಿಗೆ ಸ್ಪಂದಿಸುವವರೇ ಇಲ್ಲ. ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸಮಾಜ ಕೇಂದ್ರೀಕರಿಸಿದ್ದರೆ ವಿಶ್ವ ಮಹಿಳಾ ದಿನಾಚರಣೆ ಅರ್ಥಪೂರ್ಣ ವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಎಸೆಸೆಲ್ಸಿ ಬಳಿಕ ಕೋ ಎಜುಕೇಶನ್ ಬೇಡ ಎಂಬ ಕಾಲ ಬಂದಿದೆ. ಸಮಾಜ ಎಚ್ಚರವಾಗಬೇಕಿದೆ ಎಂದು ಶ್ರೀಗಳು ಸಮಾಜಕ್ಕೆ ಸಂದೇಶ ನೀಡಿದರು. ಭಾನ್ಕುಳಿ ಮಠದಲ್ಲಿ ಗೋ ಸ್ವರ್ಗ
ಸಿದ್ಧಾಪುರದ ಭಾನ್ಕುಳಿ ಶ್ರೀ ರಾಮ ಚಂದ್ರಾಪುರ ಮಠದ ಆವರಣದಲ್ಲಿ 1,000 ದೇಸೀ ಗೋವು ಗಳು ಸಹಜ ವಾಗಿ ಬದುಕು ವಂತಹ ಗೋಶಾಲೆ ಯನ್ನು ನಿರ್ಮಿಸಲಾಗು ವುದು. ಮೇ 27ರಂದು ಗೋಶಾಲೆ ಉದ್ಘಾಟನೆ ಗೊಳ್ಳಲಿದೆ. ನಂತೂರು ಶ್ರೀ ಭಾರತೀ ಕಾಲೇಜು ಶ್ರೀ ಮಠದ ಮಂಗಳೂರು ಭಾಗದಲ್ಲಿ ಪ್ರಮುಖ ಕೇಂದ್ರ ವಾಗಿದೆ. ಆ ಕಾಲೇಜು ವಿದ್ಯಾರ್ಥಿ ಗಳ ಕೇಂದ್ರವಾಗಲಿ ಎಂದು ಹಾರೈಸಿದರು.
Related Articles
ಶಂಕರ ಪಂಚಮಿ ಆಮಂತ್ರಣ ಪತ್ರಿಕೆ ಬಿಡುಗಡೆ, ಭಾರತೀ ಪ್ರಕಾಶನ ಹೊರತಂದ ರಾಮ ಪದ ಸತ್ಸಂಗದ ಧ್ವನಿಮುದ್ರಿಕೆ, ವೇ|ಮೂ| ಘನಪಾಠಿ ಶಂಕರನಾರಾಯಣ ಭಟ್ ಪಳ್ಳತ್ತಡ್ಕ ವಿರಚಿತ ಯಜುರ್ವೇದದಲ್ಲಿ ವರ್ಣಕ್ರಮ, ಸದಭಿರುಚಿ ಪ್ರಕಾಶನ ಪ್ರಕಾಶಿ ಸಿದ ಸುಬ್ರಾಯ ಸಂಪಾಜೆ ಅವರ ರಸರಾಮಾಯಣ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿ ವಾಹಿನಿಯ ವತಿಯಿಂದ ಪ್ರದರ್ಶನ ಕರುಣಾ ವರಣದೊಳು ಕಲಾ ಅನಾವರಣ ಮೂಲಕ ಮಂಗಳೂರು ಹೋಬಳಿಯ ವಿದ್ಯಾರ್ಥಿಗಳ ಚಿತ್ರ ಕಲಾ ಪ್ರದರ್ಶನ ನಡೆಯಿತು. ಮಠದ ವಿವಿಧ ಯೋಜನೆಗಳಿಗೆ ದೇಣಿಗೆ ಸಮರ್ಪಣೆ ನಡೆಯಿತು.
Advertisement
ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕಾರ್ಯ ದರ್ಶಿ ಹರಿಪ್ರಸಾದ್ ಪೆರಿಯಾಪು, ಮಂಗಳೂರು ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಕಾರ್ಯ ದರ್ಶಿ ನಾಗರಾಜ ಭಟ್ ಪೆದಮಲೆ, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ| ಶ್ರೀಕೃಷ್ಣ ಭಟ್, ಕಾರ್ಯದರ್ಶಿ ಸರ್ಪಮೂಲೆ ಬಾಲಸುಬ್ರಹ್ಮಣ್ಯ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅಶೋಕ ಕೆದ್ಲ, ಕಾರ್ಯದರ್ಶಿ ಶ್ರೀಧರ ಭಟ್ ಕೂವೆತ್ತಂಡ, ಮಹಾಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಸಂಧ್ಯಾ ಕಾನತ್ತೂರು, ಭಾರತೀ ಪ್ರಕಾಶನದ ಕಾರ್ಯದರ್ಶಿ ಅನುರಾಧಾ ಪಾರ್ವತಿ, ಮಾಣಿ ಮಠ ಸೇವಾ ಸಮಿತಿ ಕೋಶಾಧಿಕಾರಿ ಮೈಕೆ ಗಣೇಶ್ ಭಟ್, ವೇದಪಾಠ ಶಾಲೆಯ ಮುಖ್ಯ ಶಿಕ್ಷಕ ಕಾಂಚನ ಕೃಷ್ಣ ಕುಮಾರ, ಮಿತ್ತೂರು ಶ್ರೀನಿವಾಸ ಭಟ್, ಸದಭಿರುಚಿ ಪ್ರಕಾಶನದ ಶಂಕರ ಕುಳಮರ್ವ, ಶಾಂತಾ ಎಸ್.ಎನ್. ಭಟ್, ಶಿವರಾಜ ಬೆಂಗಳೂರು, ಕೇಶವ ಪ್ರಸಾದ ಕೂಟೇಲು ಉಪಸ್ಥಿತರಿದ್ದರು.
ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ವರದಿ ಮಂಡಿಸಿದರು. ಕಾರ್ಯದರ್ಶಿ ಜನಾರ್ದನ ಭಟ್ ಲೆಕ್ಕಪತ್ರ ಮಂಡಿಸಿ ದರು. ಮಂಗಳೂರು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಭಾಸ್ಕರ ಹೊಸಮನೆ ಪ್ರತಿಭಾ ಪುರಸ್ಕೃತರ ಪಟ್ಟಿ ಓದಿದರು. ಉದಯಶಂಕರ ಭಟ್ಟ ಅರಸಿನಮಕ್ಕಿ ನಿರ್ವಹಿಸಿದರು.