Advertisement

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

01:27 PM Dec 17, 2024 | Team Udayavani |

ವಾಷಿಂಗ್ಟನ್:‌ ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿರುವ ವನವಾಟು ದ್ವೀಪದಲ್ಲಿ ಮಂಗಳವಾರ (ಡಿ.17) 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದ್ವೀಪರಾಷ್ಟ್ರದ ರಾಜಧಾನಿ ಪೋರ್ಟ್‌ ವಿಲಾ ಸೇರಿದಂತೆ ಹಲವೆಡೆ ಭಾರೀ ಅನಾಹುತ ಸಂಭವಿಸಿರುವುದಾಗಿ ವರದಿ ತಿಳಿಸಿದೆ.

Advertisement

ಮಂಗಳವಾರ ಮಧ್ಯಾಹ್ನ 12-47ಕ್ಕೆ ಭೂಕಂಪ ಸಂಭವಿಸಿದೆ.  ಪ್ರಮುಖ ದ್ವೀಪವಾದ ಈಫೇಟ್‌ ಕರಾವಳಿ ಪ್ರದೇಶದಿಂದ 30 ಕಿಲೋ ಮೀಟರ್‌ ದೂರದಲ್ಲಿ ಈ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಭೂಗರ್ಭ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನ ಸಂದರ್ಭದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಒಂದು ವೈರಲ್‌ ಕ್ಲಿಪ್‌ ನಲ್ಲಿ, ಭೂಕಂಪನಕ್ಕೆ ಜಂಕ್‌ ಯಾರ್ಡ್‌ ನಲುಗಿ ಹೋಗಿರುವ ದೃಶ್ಯ ಸೆರೆಯಾಗಿದೆ.

ಭೂಕಂಪನದಲ್ಲಿ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ರಾಯಭಾರಿ ಕಚೇರಿ ಕಟ್ಟಡಗಳು ಹಾನಿಗೊಂಡಿರುವುದು ಮತ್ತೊಂದು ವಿಡಿಯೋದಲ್ಲಿ ಸೆರೆಯಾಗಿದೆ. ರಸ್ತೆಯ ಮೇಲೆ ಹಲವಾರು ಮರಗಳು ಬಿದ್ದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Advertisement


ಅಮೆರಿಕನ್‌ ರಾಯಭಾರ ಕಟ್ಟಡದ ಮೊದಲ ಮಹಡಿಯಲ್ಲಿ ಹಾನಿ ಸಂಭವಿಸಿದ್ದು, ಕುಸಿದ ಅವಶೇಷಗಳಡಿ ಜನರು ಸಿಲುಕಿಕೊಂಡಿರುವ ದೃಶ್ಯ ವಿಡಿಯೋದಲ್ಲಿದೆ. ಪೋರ್ಟ್‌ ವಿಲಾದಲ್ಲಿನ ಹಲವಾರು ಬೃಹತ್‌ ಕಟ್ಟಡಗಳು ಕುಸಿದು ಬಿದ್ದಿದ್ದು, ಇದರೊಂದಿಗೆ ವಿದ್ಯುತ್‌ ಮತ್ತು ನೀರು ಸರಬರಾಜು ಕಡಿತಗೊಂಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next