ನವದೆಹಲಿ: ತನ್ನದೇ ಮನೆಯಲ್ಲಿ ಪತ್ನಿ ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಗರದ ಶಾಸ್ತ್ರೀ ಪಾರ್ಕ್ ಬಳಿ ಸೋಮವಾರ(ಡಿ.17) ನಡೆದಿದೆ.
ಇತ್ತ ಪ್ರಿಯಕರನ ಜೊತೆ ಪತ್ನಿ ಇರುವುದನ್ನು ಕಂಡು ಸಿಟ್ಟಿಗೆದ್ದ ಪತಿ, ಪತ್ನಿ ಹಾಗೂ ಪ್ರಿಯಕರನನ್ನು ಮನಬಂದಂತೆ ಥಳಿಸಿದ್ದಾನೆ ಈ ವೇಳೆ ಪ್ರಿಯಕರ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ.
ಈ ವಿಚಾರ ಶಾಸ್ತ್ರೀ ಪಾರ್ಕ್ ನಲ್ಲಿರುವ ಪೊಲೀಸರಿಗೆ ನೆರೆಮನೆಯವರು ಮಾಹಿತಿ ನೀಡಿದ್ದು, ಮಾಹಿತಿ ಸಿಕ್ಕಿದ ಕೂಡಲೇ ಘಟನೆ ನಡೆದ ಮನೆಗೆ ದೌಡಾಯಿಸಿದ್ದಾರೆ, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ ಆದರೆ ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ರಿತಿಕ್ ವರ್ಮಾ ಎನ್ನಲಾಗಿದ್ದು, ಹತ್ಯೆಗೈದ ಆರೋಪಿಯನ್ನು ಅಜ್ಮತ್ ಎನ್ನಲಾಗಿದೆ.
ಅಜ್ಮತ್ ಪತ್ನಿಯ ಜೊತೆ ರಿತಿಕ್ ಕೆಲ ತಿಂಗಳಿಂದ ಸಂಬಂಧ ಹೊಂದಿದ್ದ ಎಂದು ನೆರೆಮನೆಯವರು ಹೇಳಿಕೆ ನೀಡಿದ್ದು ಅಲ್ಲದೆ ಸೋಮವಾರ ಸುಮಾರು ಹನ್ನೊಂದು ಗಂಟೆಯ ಸುಮಾರಿಗೆ ಅಜ್ಮತ್ ಮನೆಗೆ ಬಂದ ವೇಳೆ ಪತ್ನಿ ಹಾಗೂ ಸ್ನೇಹಿತ ಒಂದೇ ಕೊಠಡಿಯಲ್ಲಿ ಒಟ್ಟಿಗೆ ಇರುವುದನ್ನು ಕಂಡಿದ್ದಾನೆ ಇದರಿಂದ ಸಿಟ್ಟಿಗೆದ್ದ ಆತ ತನ್ನ ಸ್ನೇಹಿತರನ್ನು ಕರೆಸಿ ರಿತಿಕ್ ಗೆ ಮನಬಂದಂತೆ ಥಳಿಸಿದ್ದಾರೆ ಅಲ್ಲದೆ ಕೈ ಬೆರಳಿನ ಉಗುರುಗಳನ್ನು ಕಿತ್ತು ವಿಚಿತ್ರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಅಜ್ಮತ್ ನನ್ನು ಪೊಲೀಸರು ಬಂಧಿಸಿದ್ದು ಆತನ ಜೊತೆ ಕೈಜೋಡಿಸಿದ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ