ಯಲಹಂಕ: ಸುಂದರ ಕೆರೆ, ಹಸಿರು ಸಿರಿಯ ನಡುವೆ ಮಹೇಶ್ವರಮ್ಮ ದೇವಾಸ್ಥಾನದ ಹಸಿ ಕರಗ ಮಂಟಪವನ್ನು ಯಲಹಂಕದಲ್ಲಿ ಬುಧವಾರ ಕುಂಭಾಭಿಷೇಕದೊಂದಿಗೆ ಉದ್ಘಾಟಿಸಿಲಾಯಿತು.
ಸಾರ್ವಜನಿಕರ ಧನಸಹಾಯ ಮತ್ತು ಬಿಬಿಎಂಪಿ ಅನುದಾನದಡಿ ಯಲಹಂಕ ಕೆರೆಯ ಪ್ರವೇಶದ್ವಾರದಲ್ಲಿರುವ ಕಲ್ಯಾಣಿಯಲ್ಲಿ ಕರಗ ಮಂಟಪ ನಿರ್ಮಿಸಲು 1.16 ಕೋಟಿ ರೂ. ವೆಚ್ಚವಾಗಿದೆ. ಮಂಟಪದ ಸುತ್ತ ಮಹಾಭಾರತ ವಿವರಿಸುವ 40 ಕೆತ್ತನೆಗಳಿವೆ. ಮಂಟಪದ ಮೇಲೆ 16 ಅಡಿ ಎತ್ತರದ ರಾಜಗೋಪುರ ನಿರ್ಮಿಸಿದ್ದು, ಶಿಲ್ಪಿಗಳಾದ ಮುನಿಸ್ವಾಮಿ ಮತ್ತು ಮುರುಗೇಶ್ ತಂಡದವರು ವಿಗ್ರಹಗಳು ಮತ್ತು ರಾಜಗೋಪುರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.
ಬೆಂಗಳೂರಿನ ಸಂಪಂಗಿ ಟ್ಯಾಂಕಿನಲ್ಲಿರುವ ಪುರಾತನ ಕರಗ ಮಂಟಪ ಹೊರತುಪಡಿಸದರೆ ರಾಜ್ಯದಲ್ಲಿ ಮೊದಲ ಬಾರಿ ಯಲಹಂಕ ಕೆರೆ ಅಂಗಳದಲ್ಲಿ ಕರಗ ಮಂಟಪ ನಿರ್ಮಿಸಲಾಗಿದೆ. ಒಂದು ಎಕರೆ ಪ್ರದೇಶದ 100*135 ಅಡಿ ವಿಸ್ತೀರ್ಣದಲ್ಲಿ ಸುಂದರ ಕರಗ ಮಂಟಪ ಹಾಗೂ ಉಳಿದ ಜಾಗದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲಾಗಿದೆ ಎಂದು ಯಲಹಂಕ ವಹಿ°ಕುಲ ಕ್ಷತ್ರೀಯ ಮಂಡಳಿ ಸಂಚಾಲಕ ಮು. ಕೃಷ್ಣಮೂರ್ತಿ ತಿಳಿಸಿದ್ದಾರೆ.
ದ್ರೌಪತಿ ದೇವಿ ಆದಿಪರಾಶಕ್ತಿ ಮಹಾಸಂಸ್ಥಾನದ ಸಾಯಿ ಮಂಜುನಾಥ್ ಮಹಾರಾಜ್ ಮಾತನಾಡಿ, ನೂತನವಾಗಿ ಸ್ಥಾಪಿಸಿರುವ ಕರಗಮಂಟಪ ಯಲಹಂಕ ನಗರಕ್ಕೆ ಮುಕುಟಪ್ರಾಯದಂತಿದೆ. ಎಲ್ಲರೂ ಉದಾರ ಮನಸ್ಸಿನಿಂದ ಕರಗ ಕ್ಷೇತ್ರವನ್ನು ಅಭಿವೃದ್ಧಿಗೆ ಸಹಕರಿಸಿದ್ದಾರೆ.
ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆಮಾಡಿದರೆ ಈ ಸ್ಥಳ ಪ್ರವಾಸಿ ತಾಣವಾಗಲಿದೆ ಎಂದರು. ಯಲಹಂಕದಲ್ಲಿ ಶತಮಾನಗಳಿಂದಲೂ ಐತಿಹಾಸಿಕ ಮಹೇಶ್ವರಮ್ಮನವರ ಕರಗ ನಡೆದುಕೊಂಡು ಬಂದಿದೆ. ಕರಗಮಂಟಪ ನಿರ್ಮಿಸಿರುವುದು ಈ ಬಾರಿಯ ಕರಗ ಮಹೋತ್ಸವಕ್ಕೆ ಮತ್ತಷ್ಟು ಮೆರಗು ನೀಡಲಿದೆ.
ಶಾಸಕ ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಪಿ . ಆರ್.ರಮೇರ್ಶ ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ ಪದ್ವಾವತಿ ಅಮರನಾಥ್, ಗುಣಶೇಖರ್, ಯಲಹಂಕ ನಾಗರಿಕ ಹಿತರಕ್ಷಣಾವೇಧಿಕೆಯ ಅಧ್ಯಕ್ಷ ಅ.ಬ.ಶಿವಕುಮಾರ್ ಮತ್ತಿತರರು ಹಾಜರಿದ್ದರು.