Advertisement
ರಾಜ್ಯ ಪೊಲೀಸ್ ಇಲಾಖೆ ಶನಿವಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ “ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವಿಕೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಆರೋಪಿಗೆ ಶಿಕ್ಷೆಯಾಗುವಲ್ಲಿ ಪೊಲೀಸರ ಪಾತ್ರ ಪ್ರಮುಖ. ಪೊಲೀಸರು ಸೂಕ್ತ ರೀತಿ ತನಿಖೆ ನಡೆಸಿ, ಸಾಕ್ಷ್ಯ ಸಂಗ್ರಹಿಸಿದರೆ ಅಪರಾಧಿಗೆ ಶಿಕ್ಷೆಯಾಗುತ್ತದೆ.
Related Articles
Advertisement
ವರದಿಗೆ ವರ್ಷ!: ಪ್ರಕರಣ ವಿಳಂಬವಾಗಲು ಮತ್ತೂಂದು ಪ್ರಮುಖ ಕಾರಣವೆಂದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು. ವರ್ಷಗಟ್ಟಲೇ ಪರೀûಾ ವರದಿ ಬರುವುದೇ ಇಲ್ಲ. ಅವು ಬಂದಾಗ ತನಿಖಾಧಿಕಾರಿ ನಿವೃತ್ತಿ ಹೊಂದಿರುತ್ತಾನೆ. ಇಲ್ಲವೇ ಬೇರೆಡೆ ವರ್ಗವಾಗಿ ಪ್ರಕರಣದ ಆಸಕ್ತಿಯನ್ನೆ ಕಳೆದುಕೊಳ್ಳುತ್ತಾನೆ. ಮತ್ತೂಂದೆಡೆ ಪ್ರಕರಣದ ಸಾಕ್ಷಿ ಕೂಡ ಆಸಕ್ತಿ ಕಳೆದುಕೊಂಡಿರುತ್ತಾನೆ. ಹೀಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಗಳಿಂದ ತ್ವರಿತಗತಿಯಲ್ಲಿ ವರದಿ ಸಿದ್ಧಪಡಿಸುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಇದರೊಂದಿಗೆ ಅಪರಾಧ ನ್ಯಾಯಿಕ ವ್ಯವಸ್ಥೆಯಲ್ಲೂ ಸಾಕಷ್ಟು ಸುಧಾರಣೆಯಾಗಬೇಕಿದೆ. ಅಪರಾಧ ಪ್ರಕರಣಗಳಲ್ಲಿ ಅಪರಾಧಿಗೆ ಶಿಕ್ಷೆಯಾಗಬೇಕಾದರೆ ಸರ್ಕಾರಿ ವಕೀಲರ ಪಾತ್ರ ಮುಖ್ಯ. ಸಾಕ್ಷ್ಯಾಗಳು ಮಾರಾಟವಾಗುವುದು ಕೂಡ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ, ಹಿರಿಯ, ಕಿರಿಯ ಐಪಿಎಸ್ ಅಧಿಕಾರಿಗಳು, ನಗರದ ಎಲ್ಲ ಡಿಸಿಪಿಗಳು ಉಪಸ್ಥಿತರಿದ್ದರು.