ಹಾಸನ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವಸಲುವಾಗಿ ವಾರದಲ್ಲಿ 4 ದಿನ ಜಿಲ್ಲಾದ್ಯಂತಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲು ನಿರ್ಧಾರ ಕೈಗೊಂಡ ಕೆಲವೇ ಕ್ಷಣಗಳಲ್ಲಿ ಜಿಲ್ಲಾಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಉಲ್ಟಾ ಹೊಡೆದು ಈಗಿರುವ ಜನತಾ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿದ ಪ್ರಸಂಗ ನಡೆಯಿತು.
ಎಂದಿನಂತೆ: ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕರು, ಸಂಸದರ ಸಲಹೆಯಂತೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡುವುದು. ಆ ನಂತರ ಲಾಕ್‌ಡೌನ್ ಜಾರಿಯ ಜತೆಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಆದರೆ, ಸಭೆ ಮುಗಿದ ಒಂದು ಗಂಟೆ ನಂತರ ಸದ್ಯಕ್ಕೆ ಲಾಕ್‌ಡೌನ್ ಜಾರಿಯಿಲ್ಲ. ಕೇಂದ್ರ-ರಾಜ್ಯಸರ್ಕಾರದಿಂದ ನಿರ್ಧಾರವಾಗುವವರೆಗೆ ಈಗಿರುವ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿ ಸಿದರು. ಹೀಗಾಗಿ ಎಂದಿನಂತೆ ಬೆಳಗ್ಗೆಯಿಂದ ಮಧ್ಯಾಹ್ನ 2ಗಂಟೆವರೆಗೆ ದಿನಸಿ ಅಂಗಡಿಗಳು ತೆರೆದು ವಹಿವಾಟು ಮುಂದುವರಿಯಲಿದೆ.
ಕ್ರಮ ಕೈಗೊಳ್ಳಿ:ಕೊರೊನಾ ಮೊದಲ ಅಲೆ ವೇಳೆಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಾಗಿದ್ದರಿಂದಹಾಗೂ ಸಾಂಸ್ಥಿಕ ಕ್ವಾರಂಟೈನ್ ಜಾರಿಮಾಡಿದ್ದರಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗಿತ್ತು. ಆದರೆಈಗ ಜನತಾ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಂಚಾರ ನಿಯಂತ್ರಣ ಸಾಧ್ಯವಾಗಿಲ್ಲ. ಹೋಂಐಸೋಲೇಷನ್‌ಗೆ ಅವಕಾಶವಿದ್ದು ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರು ನಿರ್ಭಯವಾಗಿ ಸಂಚರಿಸಿ ಸೋಂಕು ಹರಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಕೊರೊನಾ ಕೇರ್‌ಕೇಂದ್ರ ತೆರೆದು ಸೋಂಕಿತರನ್ನು ಕೇಂದ್ರಗಳಿಗೆ ಕರೆತಂದು ಚಿಕಿತ್ಸೆ ನೀಡಬೇಕು ಎಂದು ಶಾಸಕರು ಒತ್ತಾಯಿಸಿದರು.
ಪ್ರತಿ ತಾಲೂಕಿಗೂ 25 ಲಕ್ಷ ರೂ.:ಶಾಸಕರ ಒತ್ತಾಯಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕರು, ತಹಶೀಲ್ದಾರರು ಮತ್ತು ತಾಪಂ ಇಒಗಳು ಕೊರೊನಾ ಕೇರ್‌ಸೆಂಟರ್‌ಗಳಿಗೆ ಸೌಕರ್ಯ, ಉಸ್ತುವಾರಿನೋಡಿಕೊಳ್ಳಲಿದ್ದಾರೆ. ಪ್ರತಿ ತಾಲೂಕಿಗೂ ತಲಾ 25 ಲಕ್ಷ ರೂ. ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣಉಪಸ್ಥಿತರಿದ್ದು, ತಮ್ಮ ಕ್ಷೇತ್ರಗಳಲ್ಲಿನ ಕುಂದು,ಕೊರತೆ ಪ್ರಸ್ತಾಪಿಸಿ ಕೆಲವು ಸಲಹೆ ನೀಡಿದರೆ,ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ವಿಡಿಯೋಸಂವಾದದ ಮೂಲಕ ತಮ್ಮ ಕ್ಷೇತ್ರದ ಕೊರತೆಗಳಬಗ್ಗೆ ಗಮನ ಸೆಳೆದರು.