Advertisement

ಅನಿರೀಕಿತ ಮಳೆಯಿಂದಾದ ಸಮಸ್ಯೆ ಪರಿಶೀಲಿಸಿದ ಸಚಿವ

11:09 AM Dec 16, 2018 | Team Udayavani |

ಕಲಬುರಗಿ: ಕಳೆದ ಗುರುವಾರ ರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದ ನಗರದ ಜೇವರ್ಗಿ ಕಾಲೋನಿಯ ದತ್ತ ನಗರದ
ಸಾರ್ವಜನಿಕ ಉದ್ಯಾನವನ ಸುತ್ತಮುತ್ತ ನೀರು ನಿಂತಿರುವ ಹಾಗೂ ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.

Advertisement

ದತ್ತ ದೇವಸ್ಥಾನ ಸುತ್ತಮುತ್ತ ನಿಂತಿರುವ ನೀರನ್ನು ಪಂಪ್‌ಸೆಟ್‌ ಮೂಲಕ ಹೊರಹಾಕಬೇಕು. ಮಳೆಯಿಂದ
ಇಲ್ಲಿನ ರೈಲ್ವೆ ಮೇಲ್ಸೇತುವೆ ಬಳಿ ಚರಂಡಿ ಬ್ಲಾಕ್‌ ಆಗಿ ಕೊಳಚೆ ನೀರು ರಸ್ತೆ ಮೇಲೆ ಹರಿದಾಡುತ್ತಿದ್ದು, ದತ್ತ ನಗರ ಸೇರಿದಂತೆ ನಗರದ ಎಲ್ಲೆಡೆ ಕೂಡಲೇ ಚರಂಡಿಗಳನ್ನು ಸ್ವತ್ಛಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕಳೆದ ಗುರುವಾರ ರಾತ್ರಿ 46 ಮಿ.ಮೀ. ಮಳೆಯಾಗಿರುವ
ಹಿನ್ನೆಲೆಯಲ್ಲಿ ಸಹಜವಾಗಿ ಚರಂಡಿಗಳು ತುಂಬಿ ಹೋಗಿದ್ದು, ಸ್ವತ್ಛತೆ ಕೆಲಸ ಸಾಗಿದೆ. ಚರಂಡಿ ಸ್ಥಳಗಳನ್ನು ಕೆಲವರು
ಒತ್ತುವರಿ ಮಾಡಿಕೊಂಡಿರುವ ಕಾರಣ ಮಳೆ ಬಂದಾಗ ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಸುದ್ದಿಗಾರರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವರು, ಚರಂಡಿಗಳು ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಎಚ್‌. ಕೆ.ಆರ್‌.ಡಿ.ಬಿ ಹಾಗೂ ನಗರೋತ್ಥಾನ ಯೋಜನೆಯಡಿ ನಗರದಲ್ಲಿ ಚರಂಡಿಗಳನ್ನು ನಿರ್ಮಿಸಲಾಗುತ್ತಿದ್ದು, 2019ರ ಜೂನ್‌ ವರೆಗೆ ಕಾಮಗಾರಿಗಳು ಮುಗಿಯಲಿವೆ ಎಂದರು. 

ಇತ್ತೀಚೆಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಹೈಕ ಭಾಗದ ಶಾಸಕ, ಸಚಿವರ ಸಭೆಯಲ್ಲಿ 371 (ಜೆ)ನೇ ಮೀಸಲಾತಿಗೆ ಅನುಗುಣವಾಗಿ ಕೆಪಿಎಸ್‌ಸಿ ಮತ್ತು ಕೆಇಎ ಮೂಲಕ ತ್ವರಿತಗತಿಯಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಕ್ರೈಸ್‌ ಸುಧಾರಣೆಗೆ ಡಿ. 18 ರಂದು ಸಭೆ: ಸಮಾಜ ಕಲ್ಯಾಣ ಇಲಾಖೆ ಅಧೀನದ ಕ್ರೆ„ಸ್‌ ಶಿಕ್ಷಣ ಸಂಸ್ಥೆ ಸುಧಾರಣೆಗೆ
ಸಂಬಂಧಿಸಿದಂತೆ ಡಿ. 18 ರಂದು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ನ ಶಾಸಕರ ಸಭೆ ಕರೆಯಲಾಗಿದೆ. ಅಲ್ಲಿ ಸುಧಾರಣೆಗೆ ರೂಪಿಸಲಾಗಿರುವ ಕರಡು ವರದಿ ಅಂತಿಮಗೊಳಿಸಿ ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಸುಧಾರಣೆ ಕ್ರಮ ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

Advertisement

ಮಹಾನಗರ ಪಾಲಿಕೆ ಮಹಾಪೌರರಾದ ಮಲ್ಲಮ್ಮ ಎಸ್‌. ವಳಕೇರಿ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ,
ಮಹಾನಗರ ಪಾಲಿಕೆ ಆಯುಕ್ತ ಆರ್‌.ಎಸ್‌. ಪೆದ್ದಪ್ಪಯ್ಯ, ಕಾರ್ಯಪಾಲಕ ಅಭಿಯಂತ ಶಿವಣಗೌಡ ಪಾಟೀಲ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next