ನಾವು ಮುಂಜಾನೆ ಅಥವಾ ಸಂಜೆ ವೇಳೆ ಏನನ್ನಾದರೂ ಯೋಚನೆ ಮಾಡಿಕೊಂಡು ವಾಕಿಂಗ್ ಮಾಡುತ್ತೇವೆ. ಇದರಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುವುದರ ಬದಲಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ದೇಹ ಮತ್ತು ಮನಸ್ಸನ್ನು ಶಾಂತವಾಗಿರಿಸುವ ಉದ್ದೇಶದೊಂದಿಗೆ ಇತ್ತೀಚಿನ ದಿನಗಳಲ್ಲಿ ಯೋಗ ನಡಿಗೆ ಹೆಚ್ಚು ಪ್ರಚಲಿತದಲ್ಲಿದೆ.
ಇದನ್ನೂ ಓದಿ:ಶೇಕಡಾ 50ರಷ್ಟು ಹಾಜರಾತಿಯೊಂದಿಗೆ ಬಿಹಾರದಲ್ಲಿ ಶಾಲಾ ಕಾಲೇಜುಗಳು ಪುನರಾರಂಭ : ಸಿಎಂ
ದೇಹ, ಉಸಿರು, ಮನಸ್ಸಿನ ಸಂಯೋಜನೆಯೇ ಯೋಗ. ಉಸಿರಾಟದ ಮೇಲೆ ಹೆಚ್ಚು ಗಮನಕೊಟ್ಟು ಮನಸ್ಸಿನ ಮೇಲಾಗುವ ಒತ್ತಡವನ್ನು ತಗ್ಗಿಸಲು ಮಾಡುವ ವ್ಯಾಯಾಮವೇ ಯೋಗ ನಡಿಗೆ. ತಂಪಾದ ಮತ್ತು ಶಾಂತವಾದ ಸಮಯದಲ್ಲಿ ಯೋಗ ನಡಿಗೆ ಮಾಡುವುದು ಉತ್ತಮ. ನಡಿಗೆಯ ಮೂಲಕ ಮನಸ್ಸಿನ ಗಮನವನ್ನು ದೇಹದ ಮೇಲೆ ಇರಿಸಿ ದೇಹ ದೊಂದಿಗೆ ನಾವು ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ.
ಉಸಿ ರಾಟವನ್ನು ನಮ್ಮ ಕಾಲುಗಳ ಚಲನೆಯ ಮೇಲೆ ಜೋಡಿಸುವು ದರಿಂದ ಮನಸ್ಸು ಶಾಂತ ಸ್ಥಿತಿಗೆ ತಲುಪಲು ಪ್ರೇರಣೆಯಾಗುತ್ತದೆ. ಇದರಿಂದ ಆಲೋಚನೆಗಳು, ಚಿಂತೆಗಳು, ನಕಾರಾತ್ಮಕತೆಯು ದೂರವಾಗಿ ನಾವು ಒತ್ತಡಮುಕ್ತ ರಾಗಲು ಸಾಧ್ಯ. ನಿಯಮಿತವಾಗಿ ಯೋಗ ನಡಿಗೆಯನ್ನು ಅಭ್ಯಾಸ ಮಾಡಿದರೆ ದೇಹದ ತೂಕ ಇಳಿಯುತ್ತದೆ, ರೋಗಗಳು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
ಯೋಗದ ಮುಖ್ಯ ಉದ್ದೇಶವೇ ಚಿತ್ತವೃತ್ತಿ ಯನ್ನು ಕಡಿಮೆ ಮಾಡುವುದು. ಯೋಗ ನಡಿಗೆಯಿಂದ ದೇಹದ ಎಲ್ಲ ಚಟುವಟಿಕೆಗಳನ್ನೂ ಸರಿಯಾಗಿರಿಸಲು ಸಾಧ್ಯವಾಗುತ್ತದೆ. ಕೆಲವರು ವಾಕಿಂಗ್ ಮಾಡಿದ ಮೇಲೆ ಏದುಸಿರು ಬಿಡುತ್ತಾರೆ. ಇದು ಹೃದಯದ ಕಾರ್ಯದಲ್ಲಾಗಿರುವ ವ್ಯತ್ಯಾಸದ ಸೂಚಕವಾಗಿದೆ. ವಾಕಿಂಗ್ ಮಾಡಿದ ಮೇಲೂ ಹೃದಯದ ಕಾರ್ಯ ಸ್ಥಿರವಾಗಿರಬೇಕಾದರೆ ಮನಸ್ಸನ್ನು ಶಾಂತವಾಗಿರಿಸುವುದು ಬಹು ಮುಖ್ಯವಾಗುತ್ತದೆ.
ಯೋಗ ನಡಿಗೆಯಿಂದ ಹೃದಯ, ಶ್ವಾಸಕೋ ಶದ ದಕ್ಷತೆ ಹೆಚ್ಚಾಗುತ್ತದೆ. ಮನಸ್ಸು ಸಂಪೂರ್ಣ ಶಾಂತವಾಗಿ ಯೋಗಾಭ್ಯಾಸಕ್ಕೆ ಪೂರಕವಾಗುತ್ತದೆ. ಆರೋಗ್ಯದ ಗುಟ್ಟು ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರಬೇಕು, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳ ಬೇಕು.