Advertisement

ಮಿಗ್‌-17 ಧ್ವಂಸ ಪ್ರಕರಣ ತನಿಖಾ ವರದಿ ಸದ್ಯದಲ್ಲೇ ಸಲ್ಲಿಕೆ

01:30 AM May 22, 2019 | Team Udayavani |

ಹೊಸದಿಲ್ಲಿ: ಇದೇ ವರ್ಷ ಫೆ. 27 ರಂದು ಭಾರತದಿಂದ ಆಗಸಕ್ಕೆ ಚಿಮ್ಮಿದ್ದ ಮಿಗ್‌-17 ಯುದ್ಧವಿಮಾನವನ್ನು ಶತ್ರುವಿಮಾನ ವೆಂದು ತಪ್ಪಾಗಿ ಭಾವಿಸಿ ಭಾರತೀಯ ವಾಯು ಪಡೆಯೇ (ಐಎಎಫ್) ಹೊಡೆದುರುಳಿಸಿರುವ ಪ್ರಕರಣದ ತನಿಖಾ ವರದಿಯನ್ನು ಸದ್ಯದಲ್ಲೇ ಅಂತಿಮ ಗೊಳಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

ಮಿಗ್‌-17 ಯುದ್ಧ ವಿಮಾನ ಹೊಡೆದುರುಳಿಸಿದಾಗ ಅದರಲ್ಲಿದ್ದ ಆರು ಸಿಬಂದಿ ಸೇರಿ, ನೆಲದ ಮೇಲಿದ್ದ ಒಬ್ಬ ನಾಗರಿಕನೂ ಹತನಾಗಿದ್ದಾನೆ. ಈ ಪ್ರಕರಣವನ್ನು ವಾಯುಪಡೆ ಗಂಭೀರವಾಗಿ ತೆಗೆದುಕೊಂಡಿದ್ದು ತಪ್ಪಿತಸ್ಥರ ವಿರುದ್ಧ 1950ರ ವಾಯುಪಡೆ ಕಾಯ್ದೆಯ ಪ್ರಕಾರ, ಹತ್ಯೆ ಪ್ರಕರಣ ದಾಖಲಿಸಲಾಗುತ್ತದೆ ಎಂದೂ ಮೂಲಗಳು ತಿಳಿಸಿವೆಯೆಂದು ಎನ್‌ಡಿಟಿವಿ ವರದಿ ಮಾಡಿದೆ.

ಫೆ. 26ರಂದು ಭಾರತೀಯ ವಾಯುಪಡೆ ಬಾಲಕೋಟ್‌ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಫೆ. 27ರಂದು ಪಾಕಿಸ್ಥಾನದ ಸುಮಾರು 24 ಯುದ್ಧ ವಿಮಾನಗಳು ಭಾರತದ ಗಡಿ ನಿಯಂತ್ರಣ ರೇಖೆ ದಾಟಿ ಬಂದು ಭೂಸೇನೆಯ ಕ್ಯಾಂಪ್‌ಗ್ಳ ಮೇಲೆ ದಾಳಿ ನಡೆಸಲಾರಂಭಿಸಿತ್ತು. ಆ ವಿಮಾನ ಗಳನ್ನು ಹಿಮ್ಮೆಟ್ಟಿಸಲು ಐಎಎಫ್ನ ವಿಮಾನಗಳು ಆಗಸಕ್ಕೆ ಹಾರಿದ್ದವು. ಅದರಲ್ಲೊಂದು ಮಿಗ್‌-17 ಸಹ ಆಗಿತ್ತು.

ವಾಯು ಮಂಡಲದಲ್ಲಿ ಕೆಳ ಹಂತದಲ್ಲಿ ಸಾಗುತ್ತಿದ್ದ ಈ ವಿಮಾನವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿರುವ ರೇಡಾರ್‌ಗಳು ತೋರಿಸಿದ್ದವು. ಇದನ್ನು ಪರೀಕ್ಷಿಸಲು ಮುಂದಾಗದ ಶ್ರೀನಗರದ ವಾಯುಪಡೆ ನೆಲೆಯ ಅಧಿಕಾರಿ, ತಕ್ಷಣವೇ ಅದನ್ನು ಧ್ವಂಸಗೊಳಿಸುವಂತೆ ಆದೇಶಿಸಿದ್ದರೆಂದು ಆಪಾದಿಸಲಾಗಿದೆ. ಇದೇ ವೇಳೆ, ಶ್ರೀನಗರ ಸೇನಾನೆಲೆಯ ಏರ್‌ ಆಫೀಸರ್‌ ಕಮಾಂಡಿಂಗ್‌ರನ್ನು ವರ್ಗಾವಣೆ ಮಾಡಿ ಮಂಗಳವಾರ ವಾಯುಪಡೆ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next