Advertisement

ಎಸೆಸೆಲ್ಸಿ ಪರೀಕ್ಷೆ ಬರೆಯುವ ಕ್ರಮ; ಆಕಾಶವಾಣಿಯಿಂದ ವಿಶೇಷ ಕಾರ್ಯಕ್ರಮ

06:49 AM Jun 06, 2020 | mahesh |

ಬೆಂಗಳೂರು: ಆಕಾಶವಾಣಿ ಬೆಂಗಳೂರು ಕೇಂದ್ರ ಜೂನ್‌ 25ರಿಂದ ವಾರ್ಷಿಕ ಪರೀಕ್ಷೆ ಎದುರಿಸುತ್ತಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೊನೆಯ ಹಂತದ ಸಿದ್ಧತೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

Advertisement

ಈಗಾಗಲೇ ಈ ಕಾರ್ಯಕ್ರಮ ಪ್ರಾರಂಭವಾಗಿದ್ದು ಜೂನ್‌ 23ರ ವರೆಗೂ ಪ್ರಸಾರವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ 10.30ರ ವರೆಗೆ ರಾಜ್ಯದ 13 ಬಾನುಲಿ ಕೇಂದ್ರಗಳಿಂದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಆಲಿಸಬಹುದು.

ಜೂ. 8 ಇಂಗ್ಲಿಷ್‌, ಜೂ. 9 ಹಾಗೂ 10ರಂದು ಗಣಿತ, ಜೂ. 11 ಮತ್ತು 12 ರಂದು ವಿಜ್ಞಾನ, ಜೂ. 15 ಮತ್ತು 16ರಂದು ಸಮಾಜ ವಿಜ್ಞಾನ, ಜೂ. 17ರಂದು ಹಿಂದಿ ಭಾಷೆ, ಜೂ. 18ರಂದು ಸಂಸ್ಕೃತ ಭಾಷೆ, ಜೂ. 19 ರಂದು ಇಂಗ್ಲಿಷ್‌, ಜೂ. 22ರಂದು ಉರ್ದು ಹಾಗೂ ಜೂ. 23ರಂದು ಪರೀಕ್ಷೆ ಬರೆಯುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next