Advertisement

ಮಕ್ಕಳ ವಿಕಾಸಕ್ಕೆ ನಾಟಕಗಳು ಮಾಧ್ಯಮ

03:28 PM Mar 01, 2017 | Team Udayavani |

ಧಾರವಾಡ: ಪಠ್ಯಾಧಾರಿತ ಮಕ್ಕಳ ನಾಟಕಗಳು ಶಾಲಾ ಮಕ್ಕಳಲ್ಲಿರುವ ಸೃಜನಾತ್ಮಕ ಅಭಿವ್ಯಕ್ತಿಗೆ ವೇದಿಕೆಯಾಗುವ ಜೊತೆಗೆ ಅಭಿನಯದೊಂದಿಗೆ ಕಲಿಕೆ ಮನದಟ್ಟಾಗುತ್ತದೆ ಎಂದು ರಂಗ ನಿರ್ದೇಶಕ ಬಿ.ಐ. ಈಳಿಗೇರ ಹೇಳಿದರು. 

Advertisement

ಇಲ್ಲಿಯ ಡಯಟ್‌ ಸಂಲಗ್ನ ಸಂಸ್ಥೆಯಾಗಿರುವ ಡೆಪೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ನಾಟಕಗಳು ಪ್ರಮುಖ ಕಲಿಕಾ ಮಾಧ್ಯಮವಾಗಿಯೂ ಕಾರ್ಯ ನಿರ್ವಹಿಸುತ್ತವೆ. ಅಭಿನಯ, ನೃತ್ಯ, ಮಾತು ಮತ್ತು ಹಾಡುಗಾರಿಕೆಯ ಆಸಕ್ತಿ ಬೆಳೆಯುವಲ್ಲಿಯೂ ನಾಟಕಗಳು ಸಹಾಯಕವಾಗಿವೆ ಎಂದರು. 

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ಅಧ್ಯಾಪಕಿ ಸುನಂದಾ ಬೆನ್ನೂರಹಿರೇಮಠ, ಜೀವನ ಶಿಕ್ಷಣ ಮಾಸಪತ್ರಿಕೆಯ ಸಹ ಸಂಪಾದಕ ಗುರುಮೂರ್ತಿ  ಯರಗಂಬಳಿಮಠ, ರಂಗ ಪರಿಸರದ ಅಧ್ಯಕ್ಷವಿಠಲ ಕೊಪ್ಪದ, ಸಮುದಾಯ ಸಂಘಟನೆಯ  ಎನ್‌.ಎಂ. ಪಾಟೀಲ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಡೆಪೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಸಹಾಯಕ ನಿರ್ದೇಶಕ ಶಂಕರ ಗಂಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಲೇಖಕ ಮೋಹನ ಚೆನ್ನಿ, ಸಿ.ಐ. ಶೀಲವಂತ, ಪ್ರದರ್ಶನಗೊಂಡ ಮಕ್ಕಳ ನಾಟಕಗಳನ್ನು ನಿರ್ದೇಶನ ಮಾಡಿದ ರೇಖಾ ದೇಸಾಯಿ,

Advertisement

ಮಂಜುನಾಥ ಹಿರೇಮಠ, ರೇಖಾ ಸನದಿ, ಆತ್ಮಜ್ಯೋತಿ ಉಮಚಗಿ, ಶ್ಯಾಮಲಾ ಮಾಳದಕರ, ಮಾಲುತಾಯಿ ದಿಂಡವಾರ, ಅಶೋಕ ಅಂಗಡಿ ಇದ್ದರು. ನಾಟಕೋತ್ಸವದ ಸಂಯೋಜಕ ಕೆ.ಎಚ್‌.ನಾಯಕ ಸ್ವಾಗತಿಸಿದರು. ನಾಟಕ ಅಕಾಡೆ‌ಮಿ ಸದಸ್ಯ ಜಗುಚಂದ್ರ ಕೂಡ್ಲ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next