Advertisement
ಇದು ಭಾರತೀಯ ಕ್ರಿಕೆಟ್ ಮನಸ್ಸುಗಳಿಗೆ ಸರಣಿ ಅಘಾತವಾಗಿ ಪರಿಣಮಿಸಿದೆ. ಇನ್ನು ಒಂದು ನೋವಿನ ಸಂಗತಿ ಎಂದರೆ ಧೋನಿ ಮತ್ತು ಸುರೇಶ್ ರೈನಾ ಅವರು ತಮ್ಮ ಕ್ರಿಕಟ್ ವೃತ್ತಿ ಜೀವನದ ಕೊನೆಯ ಪಂದ್ಯ ಆಡದೇ ವಿದಾಯ ಹೇಳಿದ್ದು.
ಹಾಗಾದರೆ ತಮ್ಮ ಕೊನೆಯ ಪಂದ್ಯವನ್ನು ಆಡದೇ ವಿದಾಯ ಘೋಷಿಸಿದವರು ಯಾರು ಯಾರು ಎಂಬುದನ್ನು ತಿಳಿಯೋಣ ಬನ್ನಿ…
Related Articles
ಭಾರತ ಕ್ರಿಕಟ್ ತಂಡದ ಗೋಡೆ ಎಂದೇ ಪ್ರಸಿದ್ಧಗೊಂಡಿದ್ದ ರಾಹುಲ್ ದ್ರಾವಿಡ್ ಅವರು ತಮ್ಮ ಕ್ರಿಕೆಟ್ ಜೀವನದ ಕೊನೆಯ ಪಂದ್ಯವನ್ನು ಆಡದೇ ನಿವೃತ್ತಿ ಘೋಷಿಸಿದ್ದರು. ಅವರು 2012ರ ಜನವರಿ ತಿಂಗಳ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡಿದ್ದ ಟೆಸ್ಟ್ ಪಂದ್ಯವೇ ಅವರಿಗೆ ಅದು ಕೊನೆಯ ಪಂದ್ಯವಾಗಿತ್ತು. ಅದೇ ವರ್ಷದ ಮಾರ್ಚ್‌ನಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಜ್ಯಾಮಿ ತಮ್ಮ ನಿವೃತ್ತಿ ಪಂದ್ಯವನ್ನು ಆಡುವ ಸೌಭಾಗ್ಯದಿಂದ ವಂಚಿತರಾಗಿದ್ದರು.
Advertisement
ವಿವಿಎಸ್ ಲಕ್ಷ್ಮಣ್ಭಾರತ ತಂಡದ ಉತ್ತಮ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಕ್ರಿಕಟ್ ಜೀವನದ ಕೊನೆಯ ಪಂದ್ಯವನ್ನು ಆಡದೇ ನಿವೃತ್ತಿ ಘೋಷಿಸಿದ್ದರು. ಇವರಿಗೆ ಕೂಡ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಆಡಿದ ಪಂದ್ಯವೇ ಕೊನೆಯ ಪಂದ್ಯವಾಗಿತ್ತು. 134 ಪಂದ್ಯಗಳಿಂದ ಸುಮಾರು 8,781 ರನ್ ಗಳಿಸಿದ್ದ ಇವರು 17 ಶತಕ, 56 ಅರ್ಧ ಶತಕ ಬಾರಿಸಿದ್ದರು. ವೀರೇಂದ್ರ ಸೆಹವಾಗ್
ಭಾರತ ಕ್ರಿಕಟ್ ತಂಡದ ಸ್ಫೋಟಕ ದಾಂಡಿಗ, ತ್ರಿಶತಕ ವೀರ ವೀರೇಂದ್ರ ಸೆಹವಾಗ್ ಅವರು ಕ್ರೀಸ್‌ಗೆ ಬಂದರೆ ಬೌಲರ್‌ಗೆ ಬೆವರಿಳಿಸದೇ ಇವರು ಪೆವಿಲಿಯನ್‌ಗೆ ತೆರಳುತ್ತಿರಲಿಲ್ಲ. ಆದರೆ ದುರ್ದೈವ ಎಂದರೆ ಇಂತಹ ಸ್ಫೋಟಕ ಬ್ಯಾಟ್ಸ್‌ಮನ್ ಅವರು ಕೊನೆಯ ಪಂದ್ಯದಲ್ಲಿ ಬೌಲರ್‌ಗಳಿಗೆ ಬೆವರಳಿಸದೇ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿ, ಇಡೀ ಕ್ರಿಕಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ವಿಪರ್ಯಾಸವೇ ಸರಿ. ಇವರು ಮಾರ್ಚ್ 2013ರಲ್ಲಿ ಹೈದ್ರಬಾದ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡಿದ ಪಂದ್ಯವೇ ಇವರಿಗೆ ಕೊನೆಯ ಪಂದ್ಯವಾಗಿತ್ತು. ಇವರು 2015ರಂದು ತಮ್ಮ ಹುಟ್ಟು ಹಬ್ಬದ ದಿನವೇ ನಿವೃತ್ತಿ ಘೋಷಿಸಿದ್ದರು. ಯುವರಾಜ್ ಸಿಂಗ್
ಸಿಕ್ಸರ್ ವೀರ, ಕ್ಯಾನ್ಸರ್ ನೋವಿನಲ್ಲೂ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಯುವರಾಜ್ ಸಿಂಗ್ ಅವರು ತಮ್ಮ ಕೊನೆಯ ಪಂದ್ಯದಲ್ಲಿ ಸಿಕ್ಸರ್ ಬಾರಿಸುವುದನ್ನು ಅವರು ಅಭಿಮಾನಿಗಳು ಕಣ್ತುಂಬಿಕೊಳ್ಳಲು ಆಗಲಿಲ್ಲ. ಯಾಕೆಂದರೆ ಅವರು ಕೊನೆಯ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದರು. 2017ರಲ್ಲಿ ವೆಸ್ಟ್ ವಿಂಡೀಸ್ ಸರಣಿಯೇ ಅವರ ಆಡಿದ್ದ ಕೊನೆಯ ಸರಣಿ ಪಂದ್ಯವಾಗಿತ್ತು. ಕೆಲ ದಿನಗಳ ಬಳಿಕ ಅವರು ನಿವೃತ್ತಿ ಘೋಷಿಸಿ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.
ಇವರಷ್ಟೇ ಅಲ್ಲದೇ, ಎಡಗೈ ವೇಗಿ ಜಹೀರ್ ಖಾನ್, ಇರ್ಫಾನ್ ಪಠಾಣ್, ವೇಗದ ಬೌಲರ್ ಅಜಿತ್ ಅಗರ್ಕರ್, ಹರಭಜನ್ ಸಿಂಗ್ ಅವರು ಕೂಡ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಆಡಿರಲಿಲ್ಲ. ಈ ಸಾಲಿಗೆ ಸೇರ್ಪಡೆಯಾಗಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಅವರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಧೋನಿ ಮತ್ತು ಸುರೇಶ್ ರೈನಾ ಅವರಿಗೆ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಆಡಲು ಬಿಸಿಸಿಐ ಅವಕಾಶ ಮಾಡಿಕೊಡಬೇಕು ಎಂಬ ಕೂಗೊಂದು ಪ್ರಬಲವಾಗಿ ಕೇಳಿಬರುತ್ತಿದೆ. – ಶಿವ ಸ್ಥಾವರಮಠ