Advertisement

ಕೊಡಗು; ಮಹಾಮಳೆಗೆ ಕೊಚ್ಚಿ ಹೋಯ್ತು ಯುವತಿಯರಿಬ್ಬರ ಮದುವೆ ಕನಸು!

06:42 PM Aug 22, 2018 | Sharanya Alva |

ಕೊಡಗು: ಮಹಾಮಳೆಗೆ ದಕ್ಷಿಣದ ಕಾಶ್ಮೀರ ಎನಿಸಿಕೊಂಡಿದ್ದ ಕೊಡಗಿನ ಜನರ ಬದುಕು ಕೊಚ್ಚಿ ಹೋಗಿದ್ದರೆ, ಮತ್ತೊಂದೆಡೆ ಒಬ್ಬೊಬ್ಬರದ್ದು ಕರುಣಾಜನಕ ಕಥೆಯಾಗಿದೆ. ಬದುಕಿನಲ್ಲಿ ಹಲವಾರು ನಿರೀಕ್ಷೆ, ಆಸೆಗಳನ್ನು ಇಟ್ಟುಕೊಂಡಿದ್ದ ಇಬ್ಬರು ಯುವತಿಯರ ಸಪ್ತಪದಿ ತುಳಿಯುವ ಕನಸು ಕೊಚ್ಚಿ ಹೋಗಿದೆ.

Advertisement

ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ಮಂಜುಳಾಗೆ ಆಗಸ್ಟ್ 26ರಂದು ಹಾಗು ರಂಜಿತಾಗೆ ಸೆಪ್ಟೆಂಬರ್ 12ರಂದು ಮದುವೆ ನಿಶ್ಚಯವಾಗಿತ್ತು. ಅಷ್ಟೇ ಅಲ್ಲ ಸುಮಾರು 500ಕ್ಕೂ ಅಧಿಕ ಆಮಂತ್ರಣ ಪತ್ರಿಕೆಗಳನ್ನು ಹಂಚಿದ್ದರು.

ಆದರೆ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಮದುವೆಗಾಗಿ ತೆಗೆದಿಟ್ಟಿದ್ದ ಸೀರೆ, ಬಟ್ಟೆ, ಹಣ, ಚಿನ್ನವೆಲ್ಲಾ ಮನೆಯ ಜೊತೆಯೇ ಕೊಚ್ಚಿ ಹೋಗಿದೆ. ಇದೀಗ ಇಡೀ ಕುಟುಂಬ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದೆ. ಇಬ್ಬರಿಗೂ ಕೇರಳದ ಯುವಕರ ಜೊತೆ ಮದುವೆ ನಿಶ್ಚಯವಾಗಿತ್ತು.

ಮಳೆ, ಪ್ರವಾಹಕ್ಕೆ ಕೇರಳ ಕೂಡಾ ನಲುಗಿ ಹೋಗಿದೆ. ಏತನ್ಮಧ್ಯೆ ವರನ ಕಡೆಯವರು ಆಡಂಬರವಿಲ್ಲದೆ ಮದುವೆಯಾಗಲು ಸಮ್ಮತಿ ಸೂಚಿಸಿದ್ದು, ಈ ಬಗ್ಗೆ ಮನೆಯ ಹಿರಿಯರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಹೋದರಿಯರ ಅಣ್ಣ ಮಾಧ್ಯಮದ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next