Advertisement

ವಡೇರಹಳ್ಳಿಯಲ್ಲಿ ಬೆಳೆದಿದ್ದ ಗಾಂಜಾ ತೂಕ 9891 ಕೆಜಿ

06:46 PM Sep 08, 2020 | Team Udayavani |

ಮೊಳಕಾಲ್ಮೂರು: ತಾಲೂಕಿನ ವಡೇರಹಳ್ಳಿ ಗ್ರಾಮದ ಬಳಿ 4.20 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾದ ತೂಕ 9,891 ಕೆಜಿ ಇದ್ದು, 8,250 ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಕಳೆದ ಸೆ. 4 ರಂದು ನಿಖರ ಮಾಹಿತಿ ಆಧಾರದಮೇರೆಗೆ ವಡೇರಹಳ್ಳಿ ಬಳಿಯ ಜಮೀನಿನಲ್ಲಿ ದಾಳಿ ನಡೆಸಿ ಅಕ್ರಮವಾಗಿ ಬೆಳೆದ ಗಾಂಜಾ ಬೆಳೆಯನ್ನು ವಶಪಡಿಸಿಕೊಳ್ಳಲಾಗಿತ್ತು. ಗೇಣಿ ಪಡೆದವರಲ್ಲಿ ಒಬ್ಬ ಆರೋಪಿ ಹಾಗೂ ಜಮೀನಿನ 3 ಜನ ಮಾಲೀಕರುಸೇರಿ ಒಟ್ಟು 4 ಜನರನ್ನು ಬಂಧಿಸಲಾಗಿದೆ. ಈಗ 8,250 ಅಕ್ರಮ ಗಾಂಜಾ ಗಳನ್ನು ಬುಡ ಸಮೇತಕಿತ್ತು 50 ಗಿಡಗಳ ಬಂಡಲ್‌ ಮಾಡಿ ತೂಕ ಹಾಕಿ 9,891 ಕೆಜಿ ಎಂದು ಸ್ಪಷ್ಟಪಡಿಸಲಾಗಿದೆ. ಹಾಗೆಯೆಒಣಗಿದ ಗಾಂಜಾ ಗಿಡದ ಸೊಪ್ಪು ಮತ್ತು ಬೀಜಗಳು ಸೇರಿ ಕೆಜಿಯೊಂದಕ್ಕೆ ಸುಮಾರು 10 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ತೂಕ ಮಾಡಿದ ಗಾಂಜಾ ಗಿಡಗಳನ್ನು ಜಮೀನಿನಲ್ಲಿಯೇ ದಾಸ್ತಾನು ಮಾಡಲಾಗಿದ್ದು, ಸೂಕ್ತ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ.

ಗಾಂಜಾ ಬೆಳೆದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಎಸ್‌.ಪಿ. ಜಿ. ರಾಧಿಕಾ ಮಾತನಾಡಿ, ಸುಮಾರು 4.20 ಎಕರೆ ಜಮೀನಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿರುವುದು ಪ್ರಶಂಸನೀಯ. ಕಾರ್ಯಾಚರಣೆ ನಡೆಸಿದ ಪೊಲೀಸ್‌ ವೃತ್ತ ನಿರೀಕ್ಷಕರು, ಪಿಎಸ್‌ಐ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಗಾಂಜಾ ಬೆಳೆದಿರುವ ಜಮೀನಿನ ಕಾವಲಿಗೆ ಬೆಂಗಾವಲು ಪಡೆಯನ್ನುನಿಯೋಜಿಸಲಾಗಿದೆ. ನ್ಯಾಯಾಲಯದ ಆದೇಶದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಸಿಪಿಐ ಜಿ.ವಿ. ಉಮೇಶ್‌, ರಾಂಪುರ ಉಪ ಠಾಣೆ ಪಿಎಸ್‌ಐ ಗುಡ್ಡಪ್ಪ , ಮೊಳಕಾಲ್ಮೂರು ಠಾಣೆ ಪಿಎಸ್‌ಐ ಎಂ.ಕೆ .ಬಸವರಾಜ್‌, ಸಹಾಯಕ ಕೃಷಿ ನಿರ್ದೇಶಕ ಅಶೋಕ, ಬಿಸಿಎಂ ವಿಸ್ತರಣಾ ಧಿಕಾರಿ ಶೇಖರ್‌, ಕಂದಾಯ ನಿರೀಕ್ಷಕ ಗೋಪಾಲ್‌, ಗ್ರಾಮ ಲೆಕ್ಕಾಧಿಕಾರಿ ಜಯರಾಜ್‌ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next