Advertisement

Theft Case ಅಡಿಕೆ ಕಳ್ಳತನ ಪ್ರಶ್ನಿಸಿದ ವ್ಯಕ್ತಿಗೆ ತಲವಾರು ದಾಳಿ; ಓರ್ವನ ಸೆರೆ

12:34 AM Nov 26, 2023 | Team Udayavani |

ಸವಣೂರು: ಸವಣೂರಿನ ಎಡಪತ್ಯ ಫಾರ್ಮ್ ಒಂದರಿಂದ ಅಡಿಕೆ ಕಳ್ಳತನಕ್ಕೆ ಇಬ್ಬರ ತಂಡ ವಾಹನದಲ್ಲಿ ಬಂದಿದ್ದು ಅಡಿಕೆ ದೋಚುವ ಸಂದರ್ಭದಲ್ಲಿ ಫಾರ್ಮ್ ಮಾಲಕನ ಪುತ್ರನ ಕೈಗೆ ಸಿಕ್ಕಿಬಿದ್ದ ಸಂದರ್ಭ ಅರೋಪಿಗಳು ತಲವಾರು ದಾಳಿಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಎಡಪತ್ಯ ಫಾರ್ಮ್ ಮಾಲಕ ರಾಮಚಂದ್ರ ಎಡಪತ್ಯ ಅವರ ಪುತ್ರ ನಿಷ್ಕಲ್‌ ರಾಮ್‌ ಎಡಪತ್ಯ ತಲವಾರು ದಾಳಿಗೆ ಒಳಗಾದವರು. ದಾಳಿಯ ವೇಳೆ ಕೈಗೆ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ನಿಷ್ಕಲ್‌ ಅವರು ಮೈಸೂರಿನಿಂದ ಬರುವ ಸಂದರ್ಭದಲ್ಲಿ ಅಡಿಕೆ ಒಣಹಾಕಿದ ಸೋಲಾರ್‌ಗೂಡಿನಿಂದ ಕಾರಿಗೆ ಅಡಿಕೆ ತುಂಬುತ್ತಿರುವುದು ಕಂಡು ಬಂದಿದ್ದು, ಇದನ್ನು ಅವರು ಪ್ರಶ್ನಿಸಿದರು. ಈ ವೇಳೆ ಕಳ್ಳರು ಬೆದರಿಕೆ ಹಾಕಿದರಲ್ಲದೇ ತಲವಾರಿನಿಂದ ದಾಳಿ ಮಾಡಿದ್ದು, ಕೈಗೆ ಕೈಗೆ ಗಾಯವಾಗಿದೆ. ಈ ವೇಳೆ ಅವರು ಕಿರುಚಿದ್ದರಿಂದ ಮನೆಯವರು ಅಲ್ಲಿಗೆ ಬಂದು ಕಳ್ಳರಲ್ಲಿ ಓರ್ವನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಶೀರ್‌ ಸಿಕ್ಕಿಬಿದ್ದ ಕಳ್ಳ. ಕಳೆದ ಹಲವು ದಿನಗಳಿಂದ ನಿರಂತರ ಅಡಿಕೆ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವ ಬಶೀರ್‌, ಸುಮಾರು 5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಡಿಕೆಯನ್ನು ಸುಲಿದಿಟ್ಟ ಗೋದಾಮು ಹಾಗೂ ಸೋಲಾರ್‌ಕೊಠಡಿಯಿಂದ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇನ್ನೋರ್ವ ಕಳ್ಳ ಹಕೀಂನ ಸೂಚನೆಯ ಮೇರೆಗೆ ಇಲ್ಲಿಗೆ ಆಗಮಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವೀಡಿಯೋದಲ್ಲಿ ಕಳ್ಳ ಒಪ್ಪಿಕೊಂಡಿದ್ದಾನೆ. ಇರ್ಷಾದ್‌ ಎಂಬವರಿಗೆ ಸೇರಿದ ಕಾರಿನಲ್ಲಿ ಕಳ್ಳರು ಬಂದಿದ್ದು, ಬಶೀರ್‌ನನ್ನು ಫಾರ್ಮ್ ಮಾಲಕರು ಬೆಳ್ಳಾರೆ ಠಾಣೆಗೆ ಒಪ್ಪಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next