Advertisement
ಪ್ರಪಂಚದಲ್ಲಿ ಸದಾ ಚರ್ಚೆಗೀಡಾಗುವ ಜೀವಿಗಳಲ್ಲಿ ಗಂಡೂ ಒಂದು. ಹೆಣ್ಣನ್ನು ಸಣ್ಣ ವಯಸ್ಸಿನಿಂದಲೇ ತಿದ್ದುವ ಸಮಾಜಕ್ಕೆ ಪುರುಷ ಮಾತ್ರ ಸದಾ ಸಿದ್ಧ ವಸ್ತುವಾಗಿಯೇ ಕಾಣಬೇಕು. ಸಮಾಜ ಹೆಣ್ಣನ್ನು ನಿಯಂತ್ರಿಸುವ ಭರದಲ್ಲಿ ಗಂಡು ಎನ್ನುವ ಜೀವಿ ಯನ್ನು ಹಾಗೇ ಬಿಟ್ಟುಬಿಟ್ಟಿತು. ತಾಯಿಯಿಂದ ಬೇರ್ಪಟ್ಟ ಗಿಣಿಗಳು ಮಾಂಸದ ಅಂಗಡಿಯಲ್ಲಿ ಮತ್ತು ಸಾಧುವಿನ ಆಶ್ರಮ ಸೇರಿಕೊಂಡು “ಕೊಲ್ಲು’ ಮತ್ತು “ಶರಣು’ ಎನ್ನುವ ಮಾತುಗಳನ್ನು ಕಲಿತಂತೆ ಪುರುಷ ತಾನೆಲ್ಲಿ ಸೇರಿಕೊಂಡನೋ, ಎಲ್ಲಿ ಬದುಕಿದ್ದನೋ ಅಲ್ಲಿ ಕಲಿಯುತ್ತಿ¨ªಾನೆ. ಮಿತಿ ಎಂಬುದೇ ಇಲ್ಲದೆ ಕಲಿತ¨ªೆಲ್ಲ ತನ್ನ ಅರ್ಹತೆ ಎಂದುಕೊಳ್ಳಲು ಶುರುಮಾಡಿದ. ಮರದ ಕೊಂಬೆಯೇ ಕೊಡಲಿಗೆ ಕಾವಾಗುವಂತೆ ಪುರುಷ ಬದಲಾದ. ಕಾರಣಗಳ ಬಗ್ಗೆ ಒಂದಷ್ಟು ಚರ್ಚೆಗೆ ಮೇಲ್ಪಂಕ್ತಿ ಹಾಕಬೇಕಿದೆ.
Related Articles
Advertisement
ಅಮ್ಮನೊಟ್ಟಿಗೆ ಮಗಳು ಅಡುಗೆ ಕಲಿತಷ್ಟೇ ವೇಗವಾಗಿ ಅಪ್ಪನೊಟ್ಟಿಗೆ ಮಗ ಸಮಾಜದಲ್ಲಿ ಹೇಗಿರಬೇಕು ಎಂದು ಏಕೆ ಕಲಿಯಲಿಲ್ಲ? ಗಂಡನ್ನು ಯಾವ ರೀತಿ ಬೆಳೆಸಬೇಕು, ಯಾವ ರೀತಿ ಜೀವನ ಮಾಡಬೇಕು ಎಂಬುದರ ವಿಚಾರದಲ್ಲಿ 2 ಸಾವಿರ ವರ್ಷಗಳ ಕಾಲ ಯಾವುದೇ ಬದಲಾವಣೆ ಇರಲಿಲ್ಲ. ಅದೆಲ್ಲ ಒಂದೇ ತೆರನಾಗಿತ್ತು. ಸಮಾಜದ ಹೊರಗೆ ಸಿಕ್ಕ ಸಿಕ್ಕದ್ದನ್ನೆಲ್ಲ ಕಲಿಯುವ ಪುರುಷ ಮಹಿಳೆಯಷ್ಟು ಸೂಕ್ಷ್ಮತೆ ಬೆಳಸಿಕೊಳ್ಳಲೇ ಇಲ್ಲ. ದುರಂತ ಅಂದರೆ ಸಮಾಜ ಇದನ್ನೇ ಗಂಡಸಿನ ಅರ್ಹತೆಯನ್ನಾಗಿಸಿತು.
ಆದರೆ 21 ಶತಮಾನ ಮೊದಲಿನಂತಿಲ್ಲ. ಗಂಡು ಮಕ್ಕಳು ಎಂದರೆ ಹೊರಗಿರುತ್ತಾರೆ. ಹೆಣ್ಣು ಒಳಗಿರು ತ್ತಾಳೆ ಎಂಬುದು ಸುಳ್ಳಾಗಿದೆ. ಸಮಾಜದಲ್ಲಿ ಹೆಣ್ಣು ಎಲ್ಲಾ ಸ್ತರದಲ್ಲಿಯೂ ಗಂಡಸಿಗೆ ಸಮಾನವಾಗಿ ಬೆಳೆಯುತ್ತಿದ್ದಾಳೆ. ಸಮಾಜದ ವೇಗದ ಬದಲಾವಣೆಗೆ ಗಂಡಸಿನ ಮನೋಭಾವ ಬದಲಾವಣೆ ಆಗುತ್ತಿಲ್ಲ.
ಔದ್ಯೋಗಿಕವಾಗಿ ಹೆಣ್ಣು ಗಂಡಿನಷ್ಟೇ ವೇಗವಾಗಿ ಕೆಲಸ ನಿರ್ವಹಿಸುವ ಚಾಕಚಕ್ಯತೆ ಹೊಂದಿದ್ದಾಳೆ. ಹೆಣ್ಣು ತನಗಿರುವ ನಯ-ವಿನಯ, ಶ್ರದ್ಧೆಯೊಟ್ಟಿಗೆ ಔದ್ಯೋಗಿಕವಾಗಿ ಬೇಕಿರುವ ಹೆಚ್ಚುವರಿ ದುಡಿಮೆ, ಸಮಯ ಪ್ರಜ್ಞೆ, ಕ್ರಿಯಾತ್ಮಕ ಕೆಲಸಗಳಲ್ಲಿ ತಾನು ಹೆಚ್ಚು ಎಂಬುದನ್ನು ಸಾಬೀತು ಮಾಡುತ್ತಿ¨ªಾಳೆ. ಔದ್ಯೋಗಿಕ ವಾಗಿ ಮಹಿಳೆ ಹೊರೆ ಇಳಿಸುವ (ಅನಾರೋಗ್ಯ, ಗರ್ಭಿಣಿಯಾದಾಗ) ಸಮಯದಲ್ಲಿ ಪುರುಷ ಹೊರೆಯಡಿ ಸಿಲುಕುತ್ತಿದ್ದಾನೆ. ಈ ಹೆಚ್ಚಿನ ಹೊರೆಯ ಬಗ್ಗೆ ಮಾತನಾಡುವವರು ಯಾರು?
ಔದ್ಯೋಗಿಕ ಸಮಾನತೆಯಲ್ಲಿ ಹೆಣ್ಣು ಈ ಹಿಂದೆ ಹೊತ್ತುಕೊಂಡು ಬಂದಿದ್ದ ಮನೆ ಒಳಗಿನ ಜವಾಬ್ದಾರಿಗಳನ್ನು ನಿಭಾಯಿಸಲು ಪರ್ಯಾಯ ಮನಃಸ್ಥಿತಿ ಪುರುಷನಲ್ಲಿ ಆಗಿಲ್ಲ. ಮನೆ ಒಳಗೂ ಹೊರಗೂ ಇಬ್ಬರೂ ದುಡಿಯುತ್ತಾರೆ ಮನೆ ಒಳಗೆ ಹೆಣ್ಣು ಮತ್ತಷ್ಟು ದುಡಿಯುತ್ತಾಳೆ. ಆದರೆ ಅದು ಪುರುಷನ ಮುಂದಿನ ಗುರಿಯನ್ನು ಗೋಜಲನ್ನಾಗಿಸಿದೆ.
ಪುರುಷ ಮನೆ ಒಳಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಶಕ್ಯನಾಗಿಲ್ಲ. ಸಮಾಜ ಹೆಣ್ಣನ್ನು ಸ್ವಾವಲಂಬಿ ಮಾಡುತ್ತಿದೆ, ಅದಕ್ಕೆ ಬೇಕಿರುವ ಪೂರಕ ಮನಃಸ್ಥಿತಿ ಪುರುಷರಲ್ಲಿ ಇನ್ನೂ ಕಂಡುಬಂದಿಲ್ಲ. ಇದು ಪುರುಷರನ್ನು ಮತ್ತಷ್ಟು ಖನ್ನರನ್ನಾಗಿಸಿದೆ. ಮಹಿಳೆಯರಿಗೆ ಬೇಕಿರುವ ಎಲ್ಲ ನೆರವನ್ನು ಕೊಡಲು ಮುಂದಾಗುವ ಪುರುಷರೇ ಮತ್ತೂಂದು ಪುರುಷನ ಸಂಕಟಗಳಿಗೆ “ಅಳುಮುಂಜಿ’ಯ ಪಟ್ಟ ಕಟ್ಟುತ್ತಾರೆ.
ಗಂಡುಮಕ್ಕಳು ಕುತೂಹಲದಿಂದಷ್ಟೇ ಅಲ್ಲದೇ ಖನ್ನತೆ ಒಳಗಾಗಿಯೂ ಡ್ರಗ್ ದಾಸರಾಗುತ್ತಿದ್ದಾರೆ. ಖನ್ನರಾ ಗಲು ಈ ಸಮಾಜವೇ ಆಸ್ಪದ ಕೊಟ್ಟಂತಿದೆ. ಆತನನ್ನು ತುಂಬಾ ಪ್ರಬಲ ಮನಃಸ್ಥಿತಿಯವನು ಎಂದು ತೋರಿಸಿಕೊಂಡು ಆತನೊಟ್ಟಿಗೆ ಭಾವನಾತ್ಮಕವಾಗಿ ಮಾತಾಡದಂತೆ ಮಾಡಿರುವ ಸಮಾಜ ಆತ ದುಃಖ ತೋಡಿಕೊಂಡರೆ ಅಳುಬುರಕನ ಪಟ್ಟಕಟ್ಟುತ್ತದೆ.
ಅತ್ಯಾಚಾರದಂಥ ಘನಘೋರ ಕೃತ್ಯಗಳಲ್ಲಿ ಗಂಡಸು ತನ್ನೆಲ್ಲ ಮಾನವೀಯತೆಯನ್ನು ಮರೆತು ಮೃಗವಾಗುತ್ತಾನೆ. ನಾಲ್ವರು ಪುರುಷರು ಒಟ್ಟಿಗೆ ಸೇರಿದಾಗ ಅವರಲ್ಲಾಗುವ ಮೃಗೀಯ ಮಾನಸಿಕ ಬದಲಾವಣೆಯ ಬಗ್ಗೆ ಅಧ್ಯಯನಗಳು ಆಗುತ್ತಿಲ್ಲ. ಆತನನ್ನು ಗಲ್ಲಿಗೇರಿಸುವ ಬಗ್ಗೆ ಮಾತನಾಡುತ್ತಲೇ ನಾವು ಆತನ ಆ ಬದಲಾವಣೆಯ ಕುರಿತು ವೈದ್ಯಕೀ ಯ, ಸಾಮಾಜಿಕ ಅಧ್ಯಯನಗಳನ್ನು ಮಾಡದಿ ದ್ದರೆ ಬಹುಶಃ ಇಂತಹ ಪ್ರಕರಣಗಳನ್ನು ಬೇರಿನಿಂದಲೇ ಚಿವುಟಲು ಸಾಧ್ಯವಾಗುವುದಿಲ್ಲ. ಪುರುಷನ ಆಳದಲ್ಲಿ ಮೃಗೀಯ ಬೀಜ ಬಿದ್ದಿದ್ದು ಎಲ್ಲಿಂದ ಎನ್ನುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ.
ಪುರುಷ ಪ್ರಧಾನ ಸಮಾಜ ಎಂದು ಮಾತನಾಡುತ್ತಲೇ ಪುರುಷ ತನ್ನ ಮೇಲೆ ತಾನೇ ಶೋಷಣೆ ಮಾಡಿಕೊಳ್ಳುತ್ತಿದ್ದಾನೆ. ಚಿಕ್ಕವಯಸ್ಸಿನಿಂದಲೂ ಆತ ನಿಗೆ ನೀಡಬೇಕಿರುವ ಜೀವನ ಶಿಕ್ಷಣ ಸಿಗುತ್ತಿಲ್ಲ. ಗಂಡುಮಗುವನ್ನು ತಿದ್ದುವ, ಸಂತೈಸುವ, ಸರಿದಾರಿ ಯಲ್ಲಿ ನಡೆಸುವ ಜವಾಬ್ದಾರಿ ಮನೆಯಿಂದಲೇ ಶುರುವಾಗಬೇಕು.
ಡಾ| ಗಿರೀಶ್ ಚಂದ್ರ, ಮಾನಸಿಕ ರೋಗ ತಜ್ಞರು