Advertisement

ಎನ್‌ಡಿಎಗೆ ಬಹುಮತ: ಸಮೀಕ್ಷೆ

06:00 AM Dec 25, 2018 | |

ನವದೆಹಲಿ: ಈಗಲೇ ಲೋಕಸಭೆ ಚುನಾವಣೆ ನಡೆದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 291 ಸ್ಥಾನಗಳು ಸಿಗಲಿವೆ. ಸರಳ ಬಹುಮತ (272)ಕ್ಕಿಂತ 19 ಸ್ಥಾನಗಳು ಹೆಚ್ಚು. ಎಬಿಪಿ ನ್ಯೂಸ್‌ ಮತ್ತು ಸಿ ವೋಟರ್‌ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. 

Advertisement

ಯುಪಿಎಗೆ 171, ಇತರರಿಗೆ 87 ಸ್ಥಾನಗಳು ಲಭಿಸಲಿವೆ. ಆದರೆ, ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳದೇ ಸ್ಪರ್ಧಿಸಿದರೆ ಮಾತ್ರ ಈ ರೀತಿ ಫ‌ಲಿತಾಂಶ ಬರಲಿದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ. ಆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೆ ಎನ್‌ಡಿಎಗೆ 247 ಸ್ಥಾನಗಳು ಸಿಗಲಿವೆ ಎಂದು ಅಭಿಪ್ರಾಯ ಪಡಲಾಗಿದೆ. ದಕ್ಷಿಣ ಭಾರತದ 129 ಸ್ಥಾನಗಳಲ್ಲಿ ಎನ್‌ಡಿಎ 15, ಯುಪಿಎ 80, ಇತರರು 34 ಸ್ಥಾನಗಳನ್ನು ಗೆಲ್ಲಲಿದ್ದಾರೆ. 

ಕರ್ನಾಟಕದಲ್ಲಿ: ಇದೇ ವೇಳೆ ರಿಪಬ್ಲಿಕ್‌ ಟಿವಿ ಮತ್ತು ಸಿ ವೋಟರ್‌ ನಡೆಸಿದ ಮತ್ತೂಂದು ಸಮೀಕ್ಷೆಯಲ್ಲಿ ಎನ್‌ಡಿಎಗೆ 247 ಸ್ಥಾನಗಳನ್ನು ನೀಡಲಾಗಿದೆ. ರಿಪಬ್ಲಿಕ್‌ ಟಿವಿ ಪ್ರಕಾರ ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 15 ಎನ್‌ಡಿಎ, 13 ಯುಪಿಎ ಗೆಲ್ಲಲಿದೆ. ಉ.ಪ್ರ.ದಲ್ಲಿ ಮಹಾ ಮೈತ್ರಿಕೂಟ 50, ಯುಪಿಎ 2 ಸ್ಥಾನಗಳನ್ನು ಗೆಲ್ಲಲಿದೆ. ಕೇರಳದ 20 ಸ್ಥಾನಗಳ ಪೈಕಿ 17ರಲ್ಲಿ ಯುಪಿಎ, ಎಲ್‌ಡಿಎಫ್ 3 ಸ್ಥಾನಗಳಲ್ಲಿ ಗೆಲ್ಲಲಿದೆ.

(ಮಹಾಮೈತ್ರಿ ಇಲ್ಲದಿದ್ದರೆ)
ಎನ್‌ಡಿಎ    291
ಯುಪಿಎ    171
ಇತರರು    81

(ಮೈತ್ರಿ ಏರ್ಪಟ್ಟಲ್ಲಿ)
ಎನ್‌ಡಿಎ    247
ಯುಪಿಎ    171
ಇತರರು    125

Advertisement

ಕರ್ನಾಟಕದಲ್ಲಿ (ರಿಪಬ್ಲಿಕ್‌ ಟಿವಿ)
ಎನ್‌ಡಿಎ    15
ಯುಪಿಎ    13
ಒಟ್ಟು    28

Advertisement

Udayavani is now on Telegram. Click here to join our channel and stay updated with the latest news.

Next