Advertisement

ಶಿಕ್ಷಣಕ್ಕೆ ಒತ್ತು ನೀಡುವುದೇ ಮುಖ್ಯ ಉದ್ದೇಶ

06:32 AM Jun 23, 2020 | Lakshmi GovindaRaj |

ರಾಮನಗರ: ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ, ಶಾಲೆಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು, ಬಡ ರೋಗಿಗಳಿಗೆ ಔಷಧೋಪಚಾರ, ಹೀಗೆ ವಿವಿಧ ಸಾಮಾಜಿಕ ಕಳಕಳಿ ಇರಿಸಿಕೊಂಡು ಇಂಜಿನಿಯರಿಂಗ್‌ ಪದವಿ ಪಡೆದ  ಯುವಕರ ಗುಂಪೊಂದು ಇದೀಗ ಟ್ರಸ್ಟ್‌ ರಚಿಸಿಕೊಂಡು ಸಮಾಜ ಸೇವೆಗೆ ಮುಂದಾಗಿದೆ.

Advertisement

ಯುವಕರು ಸ್ಥಾಪಿಸಿರುವ ಕನ್ಜ್-ಉಲ್‌-ಉಮ್ಮಾ ಎಜುಕೇಷನಲ್‌ ಆಂಡ್‌ ಚಾರಿಟಬಲ್‌ ಟ್ರಸ್ಟ್‌ ಅನ್ನು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌  ಉದ್ಘಾಟಿಸಿ ದರು. ಈ ವೇಳೆ ಮಾತನಾಡಿ, ಟ್ರಸ್ಟ್‌ನ ಧ್ಯೇಯೋದ್ದೇಶ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಟ್ರಸ್ಟ್‌ನ ಚಟುವಟಿ ಕೆಗಳಿಗೆ ತಮ್ಮ ಸಹಕಾರ ಸದಾ ಇರಲಿದೆ. ಸರ್ಕಾರದ ವತಿಯಿಂದ ಸಹಕಾರಕ್ಕೂ ತಾವು ಟ್ರಸ್ಟ್‌ ಪದಾಧಿಕಾರಿಗಳ ಜೊತೆ ನಿಲ್ಲುವುದಾಗಿ ತಿಳಿಸಿದರು.

ಗೌಸಿಯಾ ಕಾಲೇಜಿನ ಪದವೀಧರರ ಸಂಘಟನೆ: ಟ್ರಸ್ಟ್‌ ಅಧ್ಯಕ್ಷ ಎಸ್‌.ಕೆ.ಮುಯಿನುದ್ದೀನ್‌ ಮಾತನಾಡಿ, ಗೌಸೀಯಾ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದ ಇಂಜಿನಿಯರ್‌ಗಳು ಸಂಘಟಿತರಾಗಿ  ಸಮಾಜ ಸೇವೆ ಉದ್ದೇಶದಿಂದ  ನೂತನ ಟ್ರಸ್ಟ್‌ ರಚಿಸಿಕೊಂಡಿರುವು ದಾಗಿ ತಿಳಿಸಿದರು. ಎಲ್ಲ ವರ್ಗಗಗಳ ಬಡವರಿಗೆ ಕೈಲಾದ ಸಹಾಯ ಮಾಡುವುದು ಟ್ರಸ್ಟ್‌ನ ಮೂಲ ಉದ್ದೇಶ ಎಂದರು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಉದ್ದೇಶವಿದೆ. ಶಾಲೆಯಿಂದ ಹೊರಗುಳಿದ  ಮಕ್ಕಳನ್ನು ಹುಡುಕಿ ಪುನಃ ಶಾಲೆಗೆ ಸೇರಿಸುವುದು,

ಬಡ ವಿದ್ಯಾ ರ್ಥಿಗಳಿಗೆ ಶೈಕ್ಷಣಿಕವಾಗಿ ಸ್ಪಂದಿಸುವುದು, ಅಗತ್ಯವಿದ್ದವರಿಗೆ ವಿದ್ಯಾರ್ಥಿ ವೇತನ, ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ಇತ್ಯಾದಿ ಸಾಮಾಜಿಕ ಕಾರ್ಯಕ್ರಮ  ಹಮ್ಮಿಕೊಳ್ಳಲಾಗುವುದು ಎಂದರು. ಟ್ರಸ್ಟ್‌ನ ಕಾರ್ಯದರ್ಶಿ ಜುಲ್‌‌ಫೀಕರ್‌ ಅಹಮದ್‌ ಖಾನ್‌ ಸ್ವಾಗತಿಸಿ ವಂದಿಸಿದರು. ಪ್ರಮುಖರಾದ ಮೊಹಮ ದ್‌ ಖಲೀಲ್‌, ಮೊಹಸಿನ್‌ ಆಲಿ ಖಾನ್‌, ಮುಯಿ ನುಲ್ಲಾ ಖಾನ್‌, ಸೈಯದ್‌ ಜಮೀರ್‌,  ಶೋಯಬ್‌ ಪಾಷ, ಮುದಸ್ಸಿರ್‌, ತೌಖೀರ್‌, ಮೆಹರಾಜ್‌ ಮುಂತಾ ದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next