Advertisement

ಮಹಾತ್ಮರ ಜಯಂತಿ, ಪುಣ್ಯತಿಥಿಗಳಿಗಿಲ್ಲ ರಜೆ

03:50 AM Apr 15, 2017 | Team Udayavani |

ಲಕ್ನೋ: ಆಡಳಿತದಲ್ಲಿ ದಿನಕ್ಕೊಂದು ಜಲಕ್‌ ಮೂಡಿಸುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈಗ ಮಹಾತ್ಮ ರ ಜನ್ಮದಿನ ಮತ್ತು ಪುಣ್ಯತಿಥಿಯ ಅಂಗವಾಗಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ರಜೆಗೆ ಕತ್ತರಿ ಹಾಕಿದ್ದಾರೆ.

Advertisement

ಇನ್ನು ಮುಂದೆ ಇಂತಹ ದಿನಗಳಂದು ಶಾಲೆಗಳು ನಡೆಯಲಿದ್ದು, ಆ ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಇದಕ್ಕಾಗಿ ಸರ್ಕಾರವು ಕಾಯಿದೆಗೆ ತಿದ್ದುªಪಡಿ ತರಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಡಾ.ಬಿ. ಆರ್‌. ಅಂಬೇಡ್ಕರ್‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗಣ್ಯರ ಜಯಂತಿ, ಪುಣ್ಯತಿಥಿಗೆ ರಜೆ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಏಕೆಂದರೆ, ಆ ದಿನ ಶಾಲೆಗೆ ಏಕೆ ರಜೆ ಇರುತ್ತದೆ ಎಂದು ಮಕ್ಕಳಿಗೇ ಗೊತ್ತಿರುವುದಿಲ್ಲ. ರಜೆ ಕಳೆದುಬಿಟ್ಟರೆ ವರ್ಷದಲ್ಲಿ ಶಾಲೆ ನಡೆಯುವುದು ಕೇವಲ 120 ದಿನಗಳು ಮಾತ್ರ. ಇದು ಹೀಗೇ ಮುಂದುವರಿದರೆ, ಮುಂದೊಂದು ದಿನ ಶಾಲೆಗಳು ನಡೆಯುವ ದಿನಗಳೇ ಇಲ್ಲವಾಗಬಹುದು. ಹಾಗಾಗಿ, ಈ ರಜೆಗಳನ್ನು ರದ್ದು ಮಾಡಿ, ಅಂಥ ದಿನಗಳಂದು 2-3 ಗಂಟೆಗಳ ಕಾಲ ಆ ಗಣ್ಯ ವ್ಯಕ್ತಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಬೇಕು,’ ಎಂದು ಖಡಕ್ಕಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next