Advertisement

BJPvs SP: ಎಲ್ಲರಿಗೂ ಬುಲ್ಡೋಜರ್‌ ಹೊಂದಲ್ಲ, ಅದಕ್ಕೂ ಸಾಮರ್ಥ್ಯ, ಸಂಕಲ್ಪಅವಶ್ಯ: ಸಿಎಂ ಯೋಗಿ

06:12 PM Sep 04, 2024 | Team Udayavani |

ಲಕ್ನೋ (ಉತ್ತರ ಪ್ರದೇಶ) : ರಾಜ್ಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾದ  ಆರೋಪಿಗಳ ಮನೆ, ಆಸ್ತಿಗಳ ಬುಲ್ಡೋಜರ್‌ಗಳ ಬಳಸಿ ಧ್ವಂಸ ಮಾಡುವ ಕ್ರಮಗಳಿಗೆ ಸಂಬಂಧಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಯಾದವ್ (Akhilesh yadav)) ನಡುವೆ ತೀವ್ರ ಮಾತಿನ ಸಮರ ನಡೆದಿದೆ.

Advertisement

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಮಂಗಳವಾರ ಪಕ್ಷದ ಕಾರ್ಯಕರ್ತರ ಉದ್ದೇಶಿಸಿ ಮಾತನಾಡುವಾಗ 2027 ರಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ರಾಜ್ಯದ ಎಲ್ಲಾ ಬುಲ್ಡೋಜರ್‌ಗಳ ಯೋಗಿ ಆದಿತ್ಯನಾಥ್ ತವರು ಕ್ಷೇತ್ರವಾದ ಗೋರಖ್‌ಪುರ ಕಡೆಗೆ  ಕಳಿಸಲಾಗುವುದು ಎಂಬ ಹೇಳಿಕೆಯು  ವಾಕ್ಸಮರಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಯಾಗಿ ಬುಧವಾರ ಯುಪಿ ಅಧೀನ ಸೇವೆಗಳ ಆಯ್ಕೆ ಆಯೋಗದ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ  ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಪ್ರತ್ಯುತ್ತರ ನೀಡಿ  ಬುಲ್ಡೋಜರ್ ಚಲಾಯಿಸಲು ಧೈರ್ಯ, ಬುದ್ಧಿಶಕ್ತಿ ಮತ್ತು ದೃಢಸಂಕಲ್ಪ ಬೇಕು, ಅದು ಅಖಿಲೇಶ್​​ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಎಲ್ಲರ ಕೈಗಳಿಗೆ ಬುಲ್ಡೋಜರ್‌ ಹೊಂದಿಕೊಳ್ಳಲ್ಲ:
“ ಉತ್ತರಪ್ರದೇಶದ ಜನರ ದಾರಿ ತಪ್ಪಿಸಲು ಈ ವ್ಯಕ್ತಿಗಳು (ಅಖಿಲೇಶ್‌ ಯಾದವ್‌) ಈಗ ಮತ್ತೆ ಬಂದಿದ್ದಾರೆ. ಎಲ್ಲರ ಕೈಗಳು ಬುಲ್ಡೋಜರ್‌ಗೆ ಹೊಂದಿಕೊಳ್ಳಲ್ಲ. ಅದಕ್ಕೆ ‘ದಿಲ್ ಮತ್ತು ದಿಮಾಗ್’ (ಹೃದಯ ಮತ್ತು ಮನಸ್ಸು) ಎರಡೂ ಬೇಕಾಗುತ್ತದೆ. ಬುಲ್ಡೋಜರ್‌ನಂತಹ ಸಾಮರ್ಥ್ಯ ಮತ್ತು ದೃಢಸಂಕಲ್ಪ ಹೊಂದಿರುವವರಿಗೆ ಮಾತ್ರ ಅದನ್ನು ನಿರ್ವಹಿಸಲು ಸಾಧ್ಯ. ಗಲಭೆಕೋರರ ಮುಂದೆ ಕುಣಿದು ಕುಪ್ಪಳಿಸುವವರು ಬುಲ್ಡೋಜರ್ ಮುಂದೆ ನಿಲ್ಲಲಾರರು” ಎಂದು ಸಿಎಂ ಆದಿತ್ಯನಾಥ್ ಅಖಿಲೇಶ್‌ ವಿರುದ್ಧ ಕಿಡಿಕಾರಿದರು.


ಅಖಿಲೇಶ್ ಅವರ ‘ಟಿಪ್ಪು’ ಎಂಬ ಅಡ್ಡಹೆಸರು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಸಿಎಂ ಆದಿತ್ಯನಾಥ್, ಟಿಪ್ಪು ಈಗ ‘ಸುಲ್ತಾನ್’ ಆಗಲು ಪ್ರಯತ್ನಿಸುತ್ತಿದ್ದಾರೆ. 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು  ಉತ್ತರ ಪ್ರದೇಶ ಕಾನೂನು ಬಾಹಿರವಾಗಿ ನಲುಗಿ ಹೋಗಿತ್ತು ಎಂದು ಆರೋಪಿಸಿ ಎಸ್‌ಪಿಯ ಹಿಂದಿನ ಆಡಳಿತದ ವೈಖರಿಯ ಕೆದಕಿ  ಆದಿತ್ಯನಾಥ್ ಟೀಕಿಸಿದರು. ಅಖಿಲೇಶ್ ಯಾದವ್ ಮತ್ತು ಅವರ ಮಾವ ಶಿವಪಾಲ್ ಯಾದವ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಸುಲಿಗೆಯಲ್ಲಿ ತೊಡಗಿದ್ದರು. ‘ಚಾಚಾ ಭತೀಜಾ’ (ಮಾವ- ಸೋದರಳಿಯ) ನಡುವೆ ಹಣ ವಸೂಲಿ ಮಾಡುವಲ್ಲಿ ಪೈಪೋಟಿ ಏರ್ಪಟ್ಟಿತ್ತು ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.